ಪತ್ನಿ ಮುಚ್ಚಿಡುವ ಪುಕ್ಕಲನಲ್ಲ
ಟಿವಿ ನಿರೂಪಕಿ ಅಮೃತಾರಾಯ್ ಜತೆಗಿನ ಸಂಬಂಧವನ್ನು ಕಾಂಗ್ರೆಸ್ ಮುಖಂಡ ದಿಗ್ವಿಜಯ್...
ಭೋಪಾಲ್/ನವದೆಹಲಿ: ಟಿವಿ ನಿರೂಪಕಿ ಅಮೃತಾರಾಯ್ ಜತೆಗಿನ ಸಂಬಂಧವನ್ನು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಇಷ್ಟೆಲ್ಲದರ ನಡುವೆಯೂ ಸಿಂಗ್ ಅವರು ಮೋದಿ ವಿರುದ್ಧದ ವಾಗ್ದಾಳಿ ಮಾತ್ರ ನಿಲ್ಲಿಸಿಲ್ಲ. 'ಮೋದಿಯವರಂತೆ ನಾನು ನನ್ನ ಸಂಬಂಧವನ್ನು ಮುಚ್ಚಿಡುವುದಿಲ್ಲ. ಅವರಂತೆ ಅಂಜುಬುರುಕ ನಾನಲ್ಲ' ಎಂದಿದ್ದಾರೆ.
ಪುತ್ರನ ಬೆಂಬಲ: ಏತನ್ಮಧ್ಯೆ ದಿಗ್ವಿಜಯ್ ನಿರ್ಧಾರವನ್ನು ಪುತ್ರ, ಕಾಂಗ್ರೆಸ್ ಶಾಸಕ ಜೈವರ್ಧನ್ ಸಿಂಗ್ ಬೆಂಬಲಿಸಿದ್ದಾರೆ.'ಮದುವೆಯಂಥ ಸ್ವಂತ ನಿರ್ಧಾರದ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಆದರೆ ಅವರಿಗೆ ನಾನು ಪೂರ್ಣ ಬೆಂಬಲ ನೀಡುತ್ತೇನೆ ಎಂದಷ್ಟೇ ಹೇಳಬಲ್ಲೆ ಎಂದಿದ್ದಾರೆ ಜೈವರ್ಧನ್ ಸಿಂಗ್.
ಯಾವುದೇ ನಾಯಕರ ಖಾಸಗಿ ಬದುಕಿನ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ಆಯಾ ವ್ಯಕ್ತಿಗಳೇ ಹೇಳಿಕೆ ನೀಡುವುದು ಉತ್ತಮ ಎನ್ನುವುದು ನನ್ನ ಭಾವನೆ.
-ಪಿ. ಚಿದಂಬರಂ, ಕೇಂದ್ರ ವಿತ್ತ ಸಚಿವ