350 ಮಂದಿ ಭೂಸಮಾಧಿ 2 ಸಾವಿರ ಜನ ನಾಪತ್ತೆ
ಕಾಬೂಲ್: ಈಶಾನ್ಯ ಅಘ್ಘಾನಿಸ್ತಾನದಲ್ಲಿ ಶುಕ್ರವಾರ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತಕ್ಕೆ ಕನಿಷ್ಠ 350 ಮಂದಿ ಬಲಿಯಾಗಿದ್ದಾರೆ. 2 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಹೊಬೋ ಬಾರಿಕ್ ಗ್ರಾಮದ ಮೇಲೆ ಗುಡ್ಡವೊಂದು ಕುಸಿದು ಬಿದ್ದು, ಈ ದುರ್ಘಟನೆ ಸಂಭವಿಸಿದೆ. ಈ ವೇಳೆ 300ಕ್ಕೂ ಹೆಚ್ಚು ಮನೆಗಳು ಮಣ್ಣಿನಡಿ ಸಮಾಧಿಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರೂ ರಕ್ಷಣಾ ಸಾಧನಗಳ ಕೊರತೆಯಿಂದಾಗಿ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಚೀನಾ ಗಡಿಗೆ ಹೊಂದಿಕೊಂಡಂತಿರುವ ಹೊಬೋ ಗ್ರಾಮ ಅಘ್ಘಾನಿಸ್ತಾನದ ಅತಿ ದುರ್ಗಮ ಪ್ರದೇಶವಾಗಿದೆ.