ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರತ್ಯೇಕ ಅಪಘಾತ: 6 ಮಂದಿ ಸಾವು

Vishwanath S
Updated On : 3 May 2014, 12:26 pm

ಬೆಂಗಳೂರು: ಪ್ರತ್ಯೇಕ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, 31ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಹಿಳೆ ಸೇರಿ ಮೂವರು ಕೈ ಕಳೆದುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಆಚನೂರು ಕ್ರಾಸ್ ಬಳಿ ಕ್ರೂಸರ್ ಹಾಗೂ ಟಂಟಂ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಚನಕ. ರೇಣುಕಾನಿಂಗಪ್ಪ ಬಾರಿಗಿಡದ (55), ಸುನೀಲ (21), ಮುನಿಯಪ್ಪ ಸಿದ್ರಾಮಪ್ಪ ಪಾಗದ (45), ರತ್ನವ್ವ ಬಸವರಾಜ ಮಾಣಿಕಶೆಟ್ಟಿ (35) ಹಾಗೂ ಇನ್ನೊಬ್ಬರ ಗುರುತು ಪತ್ತೆಯಾದ ವ್ಯಕ್ತಿ ಮೃತಪಟ್ಟವರು.
ರಾಜಹಂಸ ಪಲ್ಟಿ: ಚಾಮರಾಜನಗರದ ಬೆಂಡರವಾಡಿ ಕೆರೆ ಬಳಿ ತ್ರಿಶ್ಯೂರ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ರಾಜಹಂಸ ಬಸ್ ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಮೈಸೂರಿನ ಕೃಷ್ಣಮೂರ್ತಿಪುರಂನ ನಿರ್ಮಲಾ (57) ಮೃತ ಮಹಿಳೆ. ಅವರ ಪುತ್ರಿ ಶ್ವೇತಾ (27) ಸೇರಿ ಹೆಗ್ಗಡದೇವನಕೋಟೆ ಎಚ್.ಕೆ.ರಾಜು, ಪಾಲಕ್ಕಾಡಿನ ಹುಸೇನ್ (45) ಎಡಗೈ ಕಳೆದುಕೊಂಡಿದ್ದಾರೆ. ಶ್ವೇತಾರ 3 ವರ್ಷದ ಮಗ ಕಿಶನ್‌ಗೆ ಗಂಭೀರ ಗಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement