ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೆಲೆ ಕುಸಿತದ ಭೀತಿಯಲ್ಲಿ ರಬ್ಬರ್ ಬೆಳೆಗಾರ

Vishwanath S
Updated On : 3 May 2014, 1:40 am

ನರಸಿಂಹರಾಜಪುರ: ಅಡಕೆ, ಕಾಫಿ, ಕಾಳುಮೆಣಸು, ವೆನಿಲ್ಲಾ ಬೆಳೆ, ಧಾರಣೆ ಏರಿದ್ದರೆ, ರಬ್ಬರ್ ಬೆಲೆ ಕುಸಿಯುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ನೀರಿಲ್ಲದೆ ಗುಡ್ದದಲ್ಲಿ ಬೆಳೆಯುವ ರಬ್ಬರ್ ಬೆಳೆ ಧಾರಣೆ ಕಳೆದ 25 ವರ್ಷದಿಂದ ಹಂತ, ಹಂತವಾಗಿ ಏರಿಕೆ ಉಂಟಾಗಿ 2 ವರ್ಷದ ಹಿಂದೆ ರು. 225ದರವರೆಗೆ ಏರಿಕೆ ಕಂಡು ದಾಖಲೆ ನಿರ್ಮಿಸಿತ್ತು. ವರ್ಷದಿಂದ ಹಿನ್ನಡೆ: ಆದರೆ, ವರ್ಷದಿಂದೀಚೆಗೆ ರಬ್ಬರ್ ಬೆಳೆಗೆ ಹಿನ್ನೆಡೆ ಉಂಟಾಗಿದೆ. ಕಳೆದ ವರ್ಷದ ಅತಿ ಮಳೆಯಿಂದಾಗಿ ರಬ್ಬರ್ ತೋಟಕ್ಕೆ ಕೊಳೆ ರೋಗ ಬಂದು, ಎಲೆ ಉದುರಿ ರಬ್ಬರ್ ಉತ್ಪಾದನೆಯಲ್ಲಿ ಶೇ. 40 ಕುಸಿತ ಕಂಡಿತು.
ಇಷ್ಟೇ ಸಾಲದು ಎಂಬಂತೆ ಗಾಯದ ಮೇಲೆ ಬರೆ ಎಳೆದಂತೆ ಒಂದು ಲಾಟ್ ರಬ್ಬರ್ ಬೆಲೆ ಕೆ.ಜಿ.ಗೆ ರು. 190 ರಿಂದ 135ಕ್ಕೆ ಇಳಿದಿದೆ. ಗ್ರೇಡ್ ರಬ್ಬರ್ ರು. 142 ಕ್ಕೆ ಮಾರಾಟವಾಗುತ್ತಿದೆ. ರಬ್ಬರ್‌ಗೆ ಉತ್ತಮ ಧಾರಣೆ ಬಂದ ನಂತರ ಖುಷ್ಕಿ ಭೂಮಿ, ನೀರು ಕಡಮೆ ಇರುವ ಮಕ್ಕಿ ಗದ್ದೆಗಳಿಗೆ ರೈತರು ರಬ್ಬರ್ ಗಿಡ ನೆಟ್ಟಿದ್ದಾರೆ. ತಾಲೂಕಿನಲ್ಲಿ 7 ರಿಂದ 8 ಸಾವಿರ ಎಕರೆಯಷ್ಟು ರಬ್ಬರ್ ತೋಟಗಳಿವೆ. ಇದರಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ರಬ್ಬರ್ ಸ್ಟ್ಯಾಂಪಿಂಗ್ ಮಾಡಲಾಗುತ್ತದೆ. ರಬ್ಬರ್ ಇಳುವರಿ ಹಾಗೂ ಕುಸಿತದಿಂದ ಬೆಳೆಗಾರರಿಗೆ ನಿರಾಸೆಯಾಗಿದೆ.
ಲಾಭ ಕಡಿಮೆ: ಹಿಂದೆ ರಬ್ಬರ್ ಟ್ಯಾಪರ್‌ಗೆ 1 ಮರಕ್ಕೆ ಕೇವಲ ರು. 50 ಪೈಸೆಯಿಂದ ರು. 1 ನೀಡಿದರೆ ಸಾಕಾಗಿತ್ತು. ಈಗ ರು. 1.50 ರಿಂದ ರು. 2 ನೀಡಬೇಕಾಗಿದೆ. ಒಂದು ಕೆಜಿ ರಬ್ಬರ್ ಉತ್ಪಾದಿಸಲು ರು. 70 ಖರ್ಚು ಬರಲಿದೆ ಎನ್ನುತ್ತಾರೆ ನಾಗಲಾಪುರ, ದಿಂಡಿನಕೊಪ್ಪದ ರಬ್ಬರ್ ಬೆಳೆಗಾರ  ಪೌಲ್ ಸೆಬಾಸ್ಟಿನ್.
ಅಂತಾರಾಷ್ಟ್ರೀಯ ಮಟ್ಟದಲ್ಲೇ ರಬ್ಬರ್ ಧಾರಣೆ ಕುಸಿದಿದ್ದು, ಈಗ ಒಂದು ಕೆ.ಜಿ. ರಬ್ಬರ್ 108 ರಿಂದ ರು. 110 ಇದೆ.  ಎಲ್ಲ ದೇಶಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರದಲ್ಲಿ ರಬ್ಬರ್‌ಗೆ ಬೇಡಿಕೆ ಹೆಚ್ಚಾಗಬಹುದು.
ಟಿ ಟಿ.ವಿ. ವಿಜಯನ್, ತಾಲೂಕು ರಬ್ಬರ್ ಉತ್ಪಾಕರ ಸಂಘದ ಅಧ್ಯಕ್ಷ


-ಯಡಗೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement