ಮನೆ ಸ್ಪರ್ಶಕ್ಕೆ ವಾಪಸ್ ಬಂದ
ಕೊಪ್ಪಳ: ದುಬಾರಿ ಬೆಲೆಯ ಸ್ಕ್ರೀನ್ ಟಚ್ ಮೊಬೈಲ್ ಕೊಡಿಸದಿದ್ದಕ್ಕೆ ಮನೆಯನ್ನೇ ಬಿಟ್ಟಿದ್ದ 15ರ ಹರೆಯದ ಶಶಿಕುಮಾರ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾನೆ.
'ಕನ್ನಡಪ್ರಭ'ದಲ್ಲಿ ಪ್ರಕಟವಾಗಿದ್ದ ವರದಿ ನೋಡಿದ ಹುಬ್ಬಳ್ಳಿಯ ಹೋಟೆಲೊಂದರ ವ್ಯವಸ್ಥಾಪಕರು ವಿರೂಪಾಕ್ಷಪ್ಪಗೆ ಕರೆ ಮಾಡಿ, ತಮ್ಮ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿರೂಪಾಕ್ಷಪ್ಪ ಕುಟುಂಬ ಗಂಗಾವತಿ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಜತೆಗೆ ಹುಬ್ಬಳ್ಳಿಗೆ ಆಗಮಿಸಿ ಮಗನನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಗ ಸಿಕ್ಕಿದ್ದಕ್ಕೆ ಕುಟುಂಬ ಖುಷಿಪಟ್ಟಿದೆ. ಮಗನ ಹುಡುಕಾಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದೆ.
ಹುಬ್ಬಳ್ಳಿಗೆ ಪಯಣ: ದುಬಾರಿ ಬೆಲೆಯ ಸ್ಕ್ರೀನ್ ಟಚ್ ಮೊಬೈಲ್ ಕೊಡಿಸದಿದ್ದಕ್ಕೆ ಬೇಸರಗೊಂಡು ಮನೆ ಬಿಟ್ಟಿದ್ದ ಶಶಿಕುಮಾರ್. ನೇರವಾಗಿ ಹುಬ್ಬಳ್ಳಿಗೆ ತೆರಳಿದ್ದಾನೆ. ತನ್ನ ಬಳಿ ಇದ್ದ ರು. 3 ಸಾವಿರದಲ್ಲಿ ನಾಲ್ಕಾರು ದಿನ ಸುತ್ತಾಡಿ ಬೇಕೆನಿಸಿದ್ದನ್ನೆಲ್ಲ ತಿಂದಿದ್ದಾನೆ. ಹಣ ಖಾಲಿಯಾದ ಬಳಿಕ ಹುಬ್ಬಳ್ಳಿ ಹೋಟೆಲ್ಲೊಂದರಲ್ಲಿ ಕೆಲಸ ಸೇರಿದ್ದ.
-ದತ್ತು ಕಮ್ಮಾರ