ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿಯನ್ನು ಬೋಸ್‌ಗೆ, ಅಟಲ್‌ರನ್ನು ಗಾಂಧಿಗೆ ಹೋಲಿಸಿದ ಆರೆಸ್ಸೆಸ್ ನಾಯಕ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ...

Vishwanath S
Updated On : 3 May 2014, 1:56 am

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸುಭಾಷ್ ಚಂದ್ರ ಬೋಸ್‌ರಂತೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಹಾತ್ಮ ಗಾಂಧಿಯಂತೆ. ಮೋದಿ ಮತ್ತು ಅಟಲ್‌ಜೀಯನ್ನು ಬೋಸ್ ಹಾಗೂ ಗಾಂಧಿಗೆ ಹೋಲಿಸಿದ್ದು ಆರೆಸ್ಸೆಸ್ ನಾಯಕ, ಸಂಝೋತಾ ಬಾಂಬ್ ಸ್ಫೋಟದ ಆರೋಪಕ್ಕೆ ಗುರಿಯಾಗಿರುವ ಇಂದ್ರೇಶ್ ಕುಮಾರ್.
ಸುದ್ದಿವಾಹಿನಿಯೊಂದಕ್ಕೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಂದ್ರೇಶ್, ಆರೆಸ್ಸೆಸ್ ಅನ್ನು ಕೋಮುವಾದಿ ಎಂದು ಕರೆಯುವವರ ವಿರುದ್ಧ ಕಿಡಿಕಾರಿದರು. ಆರೆಸ್ಸೆಸ್ ಅನ್ನು ವಿರೋಧಿಸುವ ಹಾಗೂ ಕೋಮುವಾದಿ ಎಂದು ಕರೆಯುವ ರಾಜಕಾರಣಿಗಳು ಮೂರ್ಖರು. ಅಟಲ್ ಮತ್ತು ಮೋದಿ ಇಬ್ಬರೂ ಒಂದೇ ರೀತಿಯ ವ್ಯಕ್ತಿತ್ವದವರು. ಒಬ್ಬರು ಮಹಾತ್ಮ ಗಾಂಧಿಯಂತೆ, ಮತ್ತೊಬ್ಬರು ಸುಭಾಷ್‌ಚಂದ್ರ ಬೋಸ್‌ರಂತೆ ಎಂದಿದ್ದಾರೆ ಇಂದ್ರೇಶ್.
ದಿಗ್ವಿಜಯ್ ಭೋಗಿ: ಇದೇ ವೇಳೆ, ಉತ್ತರಪ್ರದೇಶದಲ್ಲಿ ಶೇ.100ರಷ್ಟು ಮತದಾನ ಆಗಬೇಕೆಂದು ಬಿಜೆಪಿ ಪ್ರಚಾರದ ಹೊಣೆಯನ್ನು ಆರೆಸ್ಸೆಸ್ ಹೊತ್ತುಕೊಂಡಿದೆ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಈ ನಡುವೆ ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ತೀವ್ರಗಾಮಿಗಳಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಎಂದಿದ್ದಾರೆ. ಜತೆಗೆ, ಮೋದಿ ಹಾಗೂ ದಿಗ್ವಿಜಯ್ ವೈಯಕ್ತಿಕ ವಿಚಾರವನ್ನು ಒಂದಕ್ಕೊಂದು ಹೋಲಿಸಲೇಬಾರದು ಎಂದ ಇಂದ್ರೇಶ್, ಮೋದಿ ಅವರು 'ಜೋಗಿ'ಯಾದರೆ, ದಿಗ್ವಿಜಯ್ ಅವರು 'ಭೋಗಿ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement