ಬಸ್ಸಿನ ಪ್ರಯಾಣ ನಿರೀಕ್ಷಿತ ದುಬಾರಿ
ಕನ್ನಡಪ್ರಭ ವಾರ್ತೆ , ಬೆಂಗಳೂರು , ಮೇ 3
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿರೀಕ್ಷೆಯಂತೆ ಶೇ.7.96ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದೆ. ಶನಿವಾರ ತಡರಾತ್ರಿಯಿಂದಲೇ ಜಾರಿಗೆ ಬರುವಂತೆ ಈ ಆದೇಶ ಮಾಡಲಾಗಿದೆ. ರಜೆ ಕಾರಣ ಏಪ್ರಿಲ್ ಆರಂಭದಲ್ಲಿಯೇ ವೋಲ್ವೋ, ರಾಜಹಂಸ ಬಸ್ ದರ ಹೆಚ್ಚಳ ಮಾಡಿರುವುದರಿಂದ ಈಗ ಪರಿಷ್ಕರಣೆ ಮಾಡಿಲ್ಲ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಜೂನ್‌ನಲ್ಲಿ ದರ ಇಳಿಕೆ ವೇಳೆ ಶೇ.7.96ರ ಲೆಕ್ಕ ಇರಿಸಿಕೊಂಡೇ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಹಿಂದಿನ ದರ ಪರಿಷ್ಕರಣೆ ಬಳಿಕ ಪ್ರತಿ ಲೀಟರ್ ಡೀಸೆಲ್‌ಗೆ 7.21 ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಅನಿವಾರ್ಯ ಎಂದು ಕೆಎಸ್‌ಆರ್‌ಟಿಸಿ ಸಮಜಾಯಿಷಿ ನೀಡಿದೆ.
ಪರಿಷ್ಕೃತ ದರಪಟ್ಟಿ
ಬೆಂಗಳೂರಿನಿಂದ ಹಳೆಯ ದರ ಪರಿಷ್ಕೃತ ದರ
* ಮೈಸೂರು 120 132
* ಮಂಗಳೂರು 307 332
* ಹುಬ್ಬಳ್ಳಿ 356 385
* ಮಂಡ್ಯ 83 90
* ಧಾರವಾಡ 373 403
* ಗುಲ್ಬರ್ಗ 548 592
* ಬಳ್ಳಾರಿ 275 296
* ದಾವಣಗೆರೆ 230 249
* ಶಿವಮೊಗ್ಗ 247 267
* ಬೆಳಗಾವಿ 439 474