ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರ್ಯಾಂಕ್ ಬಂದ್ರೂ ಗಾರೆಯೇ ಆಸರೆ!

Vishwanath S
Updated On : 6 May 2014, 12:56 pm

ತುಮಕೂರು: ರ್ಯಾಂಕ್ ವಿದ್ಯಾರ್ಥಿಯೊಬ್ಬ ಉನ್ನತ ಶಿಕ್ಷಣ ಪಡೆಯಲು ಹಣವಿಲ್ಲದೆ ಓದನ್ನೇ ಕೈ ಬಿಟ್ಟು ಗಾರೆ ಕೆಲಸ ಮಾಡುತ್ತಿರುವ ಕಥೆ ಇದು.
ತುರುವೇಕೆರೆ ತಾಲೂಕು ಹೊನ್ನೇನಹಳ್ಳಿಯ ಎಚ್.ಜಿ. ಹರೀಶ್ ಪದವಿಯಲ್ಲಿ ತುಮಕೂರು ವಿವಿಗೆ 9ನೇ ರ್ಯಾಂಕ್ ಪಡೆದರೂ ಮಾಸ್ಟರ್ ಡಿಗ್ರಿ ಓದಲು ಹಣವಿಲ್ಲದೆ ಗಾರೆ ಕೆಲಸ ಮಾಡುತ್ತಿದ್ದಾನೆ.
ಚಿಕ್ಕನಾಯಕನಹಳ್ಳಿ ನವೋದಯ ಕಾಲೇಜಿನಲ್ಲಿ ಎಚ್‌ಇಪಿ ಓದುತ್ತಿದ್ದ ಹರೀಶ್ 2013ರಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ಶೇ. 90 ಅಂಕ ಗಳಿಸಿ ರ್ಯಾಂಕ್ ಪಡೆದ. ಹರೀಶ್ ಪಡೆದ ಅಂಕಕ್ಕೆ ಯಾವ ವಿಷಯದಲ್ಲಿ ಬೇಕಾದರೂ ಮಾಸ್ಟರ್ ಡಿಗ್ರಿಗೆ ಪ್ರವೇಶ ಸಿಗುತ್ತಿತ್ತು. ಮನೆಯಲ್ಲಿ ಕಾಯಿಲೆ ಬಿದ್ದ ಅಪ್ಪ, ಅಮ್ಮನನ್ನು ನೋಡಿಕೊಳ್ಳಬೇಕಾಗಿತ್ತು. ಅಲ್ಲದೆ, ಮಾಸ್ಟರ್ ಡಿಗ್ರಿ ಮಾಡಲು ತುಮಕೂರಿಗೆ ಬರಬೇಕಾಗಿತ್ತು. ಇದಕ್ಕೆ ಪ್ರತಿ ತಿಂಗಳು ಹಣ ಹೊಂದಿಸುವುದು ಕಷ್ಟವಾಗುತ್ತದೆ ಎಂದು ಅರಿತ ಹರೀಶ್ ಓದಿಗೆ ಶರಣು ಹೊಡೆದ.
ಪಠ್ಯೇತರ ಚಟುವಟಿಕೆಯಲ್ಲೂ ಮುಂದು: ಹರೀಶ್ ಓದಿನಲ್ಲಷ್ಟೆ ಅಲ್ಲ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದ. ಹಾಡು, ನೃತ್ಯ ಎಲ್ಲದರಲ್ಲೂ ತೊಡಗಿಕೊಂಡಿರುವ ಹರೀಶ್ 7 ರಾಷ್ಟ್ರೀಯ ಶಿಬಿರಗಳಲ್ಲಿ ಪಾಲ್ಗೊಂಡಿದ್ದ. ಜತೆಗೆ ಯುರೋಪಿಯನ್ ಇತಿಹಾಸ ವಿಷಯದಲ್ಲಿ 98 ಅಂಕ ಪಡೆದು ಇಡೀ ಜಿಲ್ಲೆಗೆ ಮೊದಲಿಗನಾಗಿದ್ದಾನೆ. '9ನೇ ರ್ಯಾಂಕ್ ಬಂದಿದ್ದ ನನಗೆ ಪದವಿ ಪ್ರಮಾಣ ಪತ್ರ ಪಡೆಯಲೂ ಹಣವಿರಲಿಲ್ಲ. ಆಗ ನವೋದಯ ಕಾಲೇಜಿನ ಪ್ರಾಚಾರ್ಯರೇ ಹಣ ನೀಡಿ ಪದವಿ ಪ್ರಮಾಣ ಪತ್ರ ತಂದುಕೊಟ್ಟಿದ್ದರು. 2013ರಲ್ಲಿ ಮಾಸ್ಟರ್ ಡಿಗ್ರಿಗೆ ಅರ್ಜಿ ಹಾಕಲು ಹಣ ಇರಲಿಲ್ಲ. ಹೀಗಾಗಿ ಗಾರೆ ಕೆಲಸ ಮಾಡಲು ಹೋಗುತ್ತಿದ್ದೇನೆ' ಎನ್ನುತ್ತಾನೆ ಹರೀಶ್. ಸಹಾಯಕ್ಕೆ ಎಸ್‌ಬಿಎಂ ಖಾತೆ - 64095659477.


-ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement