ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

66.27% ದಾಖಲೆ

ಮತಗಟ್ಟೆ ಹೊರಗಡೆ ನಡೆಯುತ್ತಿದ್ದ ಘರ್ಷಣೆ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಒಬ್ಬ ಬಲಿಯಾಗಿರುವ...

Rashmi Kasaragodu
Updated On : 8 May 2014, 2:06 am

ಪಟನಾ: ಮತಗಟ್ಟೆ ಹೊರಗಡೆ ನಡೆಯುತ್ತಿದ್ದ ಘರ್ಷಣೆ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಒಬ್ಬ ಬಲಿಯಾಗಿರುವ ಘಟನೆ ಬಿಹಾರದ ಸಿತಾಮಡಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ರಾಮನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಬೂತ್ ಲೂಟಿ ಮಾಡಲು ಬಂದಿದ್ದ ಗುಂಪು ನಿಯಂತ್ರಿಸಲು ಗುಂಡು ಹಾರಿಸಿದಾಗ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನುವ ವದಂತಿ ಹರಡಿತ್ತು.
 ಯಂತ್ರ ಸುಟ್ಟು ಮಾವೊಗಳು
ಹೈದರಾಬಾದ್: ವಿಶಾಖಪಟ್ಟಣ ಜಿಲ್ಲೆಯ ಪಲಾಕಗಿಡಿ ಗ್ರಾಮದ ಮತಗಟ್ಟೆಗೆ ನುಗ್ಗಿ ಮತಯಂತ್ರ ಸುಟ್ಟುಹಾಕಿದ ಮಾವೋವಾದಿಗಳು, ವಾಹನವೊಂದಕ್ಕೆ ಬೆಂಕಿ ಹಚ್ಚಿದರು. ಇಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ.
 ನಾಯ್ಡು, ಮೋದಿ ಮಾತುಕತೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರೊಂದಿಗೆ ಎರಡು ಬಾರಿ ದೂರವಾಣಿ ಮೂಲಕ ಸೀಮಾಂಧ್ರದಲ್ಲಿನ ಮತದಾನ ಕುರಿತು ಮಾಹಿತಿ ಪಡೆದರು. ಬಿಜೆಪಿ-ಟಿಡಿಪಿ ಮೈತ್ರಿಕೂಟದ ಪರ ವ್ಯಾಪಕ ಪ್ರಚಾರ ಕೈಗೊಂಡಿದ್ದ ಮೋದಿ, ನಾಯ್ಡು ಜತೆಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಉಮೇದಿಯಲ್ಲಿದ್ದಾರೆ.



 ಹೊರದಬ್ಬಿದ ಆಯೋಗ
ಪ್ರಿಯಾಂಕಾ ಗಾಂಧಿ ರಾಜಕೀಯ ಕಾರ್ಯದರ್ಶಿ ಪ್ರೀತಿ ಸಹಾಯ್ ಮತ್ತು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ನಡುವೆ ಅಮೇಠಿಯ ಜಗದೀಶಪುರ ಪ್ರದೇಶದ ಮತಗಟ್ಟೆಯಲ್ಲಿ ಮಾತಿನ ಚಕಮಕಿ ನಡೆಯಿತು. ಪ್ರೀತಿನೀತಿ ಸಂಹಿತೆ ಉಲ್ಲಂಘಿಸಿ ಕ್ಷೇತ್ರದ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಸ್ಮೃತಿ ಆಯೋಗಕ್ಕೆ ದೂರು ನೀಡಿದರು. 'ತಕ್ಷಣ ಕ್ಷೇತ್ರ ಬಿಟ್ಟು ಹೊರಡಿ' ಎಂದು ಜಿಲ್ಲಾ ಚುನಾವಣಾಧಿಕಾರಿ ಆದೇಶಿಸಿದ ಬಳಿಕ ಸಹಾಯ್ ಕ್ಷೇತ್ರ ಬಿಟ್ಟು ತೆರಳಿದರು. ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಸಂಸದ ಹಾಗೂ ಸಿಪಿಐ ಅಭ್ಯರ್ಥಿ ಪ್ರಬೋಧ್ ಪಾಂಡಾ ತಮ್ಮ ಕಾರ್‌ಗೆ 'ಸಂಸದ' ಸ್ಟಿಕ್ಕರ್ ಅಂಟಿಸಿಕೊಂಡಿದ್ದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ಮಿಡ್ನಾಪುರ ನಗರದ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಪಾಂಡಾ ಅವರನ್ನು ತಡೆದ ಟಿಎಂಸಿ ಕಾರ್ಯಕರ್ತರು, ಕಾರಿಗೆ ಅಂಟಿಸಿದ್ದ ಸ್ಟಿಕ್ಕರ್ ತೆಗೆಯುವಂತೆ ಪಟ್ಟು ಹಿಡಿದರು. 'ಹಾಲಿ ಸಂಸದನಾಗಿರುವುದರಿಂದ ಸ್ಟಿಕ್ಕರ್ ತೆಗೆಯುವುದಿಲ್ಲ ಎಂದಿದ್ದರಿಂದ ಗೊಂದಲ ಮೂಡಿತ್ತು.


 66.27% ಮತ ದಾಖಲು
ಬಿಹಾರ, ಆಂಧ್ರಪ್ರದೇಶಗಳಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಏಳು ರಾಜ್ಯಗಳ 64 ಕ್ಷೇತ್ರಗಳಲ್ಲಿ ಬುಧವಾರ ನಡೆದ 8ನೇ ಹಂತದ ಮತದಾನದಲ್ಲಿ ಶಾಂತಿಯುತವಾಗಿತ್ತು. ಮತದಾರರು ಉತ್ಸಾಹದಿಂದ ಹಕ್ಕು ಚಲಾಯಿಸಿದ್ದು ವಿಶೇಷ. 543 ಲೋಕಸಭಾ ಕ್ಷೇತ್ರಗಳ ಪೈಕಿ ಈವರೆಗೆ 502 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್ ಕಣದಲ್ಲಿರುವ ವಾರಾಣಸಿ ಸೇರಿದಂತೆ ಉಳಿದ 41 ಸ್ಥಾನಗಳಿಗೆ ಮೇ 12ಕ್ಕೆ ಮತದಾನ ನಡೆಯಲಿದೆ.9 ಹಂತಗಳ ಫಲಿತಾಂಶ ಮೇ 16ಕ್ಕೆ ಪ್ರಕಟವಾಗಲಿದೆ.


ಟ್ವೀಟಿಸಿದ್ದು


ಪ್ರಜಾತಂತ್ರಕ್ಕೆ ಅವಮಾನ. ಭಾರತ ಸರ್ಕಾರಕ್ಕೆ ನಾಚಿಕೆಯಾಗಬೇಕು. ಒಂದು ಕಡೆ ನ್ಯಾಯಯುತ ಚುನಾವಣೆ ಎನ್ನುತ್ತಾರೆ. ಇನ್ನೊಂದು ಕಡೆ ಚುನಾವಣಾ ಆಯೋಗದ ನೀತಿಗಳ ಮೇಲೆ ಅತ್ಯಾಚಾರವಾಗುತ್ತಿದೆ.
-ಮನೀಷ್ ಡೇ

ಹಾಯ್ ಚುನಾವಣಾ ಆಯೋಗ, ಚುನಾವಣೆ ದಿನದಂದು ಮತಗಟ್ಟೆಯಲ್ಲಿ ರಾಹುಲ್ ಗಾಂಧಿ ಏನು ಮಾಡುತ್ತಿದ್ದಾರೆ? ಚುನಾವಣಾ ನೀತಿ ಸಂಹಿತೆಯ ಜತೆಗಿದ್ದಾರಾ?
 - ರೂಪಾ ಸುಬ್ರಮಣ್ಯ


ಸೀಮಾಂಧ್ರದಲ್ಲಿ ಚುನಾವಣೋತ್ತರ ಮೈತ್ರಿ ಕುರಿತ ಎಲ್ಲ ಆಯ್ಕೆಗಳನ್ನೂ ಮುಕ್ತವಾಗಿದೆ.  ನಾವು ಯಾರೊಂದಿಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಚುನಾವಣೆ ನಂತರ ಯಾರನ್ನೋ ತರಾತುರಿಯಲ್ಲಿ ಬೆಂಬಲಿಸಬೇಕಾದ ಅನಿವಾರ್ಯವೂ ನಮಗಿಲ್ಲ.
- ವೈ.ಎಸ್.ಜಗನ್‌ಮೋಹನ್ ರೆಡ್ಡಿ,
ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ


 ಹೆಂಡತಿಗೇ ಗುಂಡಿಟ್ಟ
ಪಟನಾ: ತಾನು ಹೇಳಿದ ಅಭ್ಯರ್ಥಿಗೆ ಮತ ಹಾಕಲಿಲ್ಲ ಎಂದು ಕುಪಿತಗೊಂಡ ವ್ಯಕ್ತಿ ತನ್ನ ಪತ್ನಿಗೇ ಗುಂಡಿಟ್ಟ ಘಟನೆ ಬಿಹಾರದ ಉಜೈರ್‌ಪುರ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ನಡೆದಿದೆ. ಮೊಹಿಯುದ್ದೀನ್‌ನಗರ ಗ್ರಾಮದ ನಿವಾಸಿ ವಿನೋದ್ ಪಾಸ್ವಾನ್ ಈ ಕೃತ್ಯ ಎಸಗಿದಾತ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಪಟನಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.


ಪಶ್ಚಿಮ ಬಂಗಾಳ -81.28%
ಆಂಧ್ರಪ್ರದೇಶ -76%

ಹಿಮಾಚಲ ಪ್ರದೇಶ -65%

ಉತ್ತರಾಖಂಡ- 62%


ಬಿಹಾರ- 56%

ಉತ್ತರ ಪ್ರದೇಶ- 55.56%

ಜಮ್ಮು-ಕಾಶ್ಮೀರ - 43%


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement