ಅಂತೂ ಬುದ್ಧಿ ಬಂತು, ಕೃಷಿ ಬೋರ್ಗೆ ಕುತ್ತು
ಕೃಷಿ ಉದ್ದೇಶಕ್ಕೆ ಕೊಳವೆ ಬಾವಿ ಕೊರೆದು ಅಂತರ್ಜಲ ಶೋಷಣೆ ನಡೆಸುವುದನ್ನು ನಿಯಂತ್ರಿಸುವುದಕ್ಕೆ ..
ಬೆಂಗಳೂರು: ಕೃಷಿ ಉದ್ದೇಶಕ್ಕೆ ಕೊಳವೆ ಬಾವಿ ಕೊರೆದು ಅಂತರ್ಜಲ ಶೋಷಣೆ ನಡೆಸುವುದನ್ನು ನಿಯಂತ್ರಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ 2010ರಲ್ಲಿ ರಚಿಸಿದ್ದ ಅಂತರ್ಜಲ ರಕ್ಷಣೆ ನಿರ್ದೇಶನಾಲಯಕ್ಕೆ ಮರು ಜೀವ ನೀಡಲು ನಿರ್ಧರಿಸಲಾಗಿದೆ.
ಸರ್ಕಾರದ ಬಿಗಿ ಕ್ರಮ ತಕ್ಷಣಕ್ಕೆ ರೈತರಿಗೆ ನಿಷ್ಠುರವಾಗಿ ತೋರಬಹುದು. ಮೊದಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ನಂತರ ಅನುಮತಿ ಇಲ್ಲದೆ ಕೃಷಿ ಉದ್ದೇಶಕ್ಕೆ ಕೊಳವೆ ಬಾವಿ ಕೊರೆಯುವ ರೈತರಿಗೆ ಸಬ್ಸಿಡಿ ಕಟ್ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಕೆ ನೀಡಿದರು.