ಕಬ್ಬು ಮಾತುಕತೆ ಬಂದ್
ಕಬ್ಬು ಬೆಳೆಗಾರರಿಗೆ ನಿಗದಿತ ಬೆಲೆ ನೀಡದ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ...
ಬೆಂಗಳೂರು: ಕಬ್ಬು ಬೆಳೆಗಾರರಿಗೆ ನಿಗದಿತ ಬೆಲೆ ನೀಡದ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಮಾಲೀಕರ ಜತೆ ಮಾತುಕತೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಸರ್ಕಾರ ಪ್ರತಿ ಟನ್ಗೆ ರು. 2500 ನಿಗದಿ ಮಾಡಿದೆ. ಜತೆಗೆ ಕಾರ್ಖಾನೆ ಮಾಲೀಕರಿಗೆ 100 ತೆರಿಗೆ ವಿನಾಯ್ತಿ ನೀಡಿದೆ. ಇಷ್ಟಾದರೂ ರೈತರಿಗೆ ನಿಗದಿತ ಬೆಲೆ ನೀಡದಿರುವುದು ಅಕ್ಷಮ್ಯ. ಈ ದರ ನೀಡುವುದಕ್ಕೆ ಇಂದೇ ಕಡೆ ದಿನವಾಗಿದ್ದು, ತಪ್ಪಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಕೆ ನೀಡಿದ್ದಾರೆ.