ಕಮರಿಗೆ ಉರುಳಿದ ಬಸ್ಸು: 13 ಸಾವು
ಉತ್ತರಾಖಂಡದ ದೇವಪ್ರಯಾಗ ಬಳಿ ಬಸ್ಸೊಂದು ಕಮರಿಗೆ ಉರುಳಿ 13 ಪ್ರಯಾಣಿಕರು ಮೃತಪಟ್ಟಿದ್ದಾರೆ. ...
ಟಿಹರಿ: ಉತ್ತರಾಖಂಡದ ದೇವಪ್ರಯಾಗ ಬಳಿ ಬಸ್ಸೊಂದು ಕಮರಿಗೆ ಉರುಳಿ 13 ಪ್ರಯಾಣಿಕರು ಮೃತಪಟ್ಟಿದ್ದಾರೆ. 27ಮಂದಿ ಗಾಯಗೊಂಡಿದ್ದು, 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಡೆಹ್ರಾಡೂನ್ನ ಜಾಲಿಗ್ರ್ಯಾಂಟ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು 200 ಮೀಟರ್ ಆಳದ ಕಮರಿಗೆ ಉರುಳಿ 13 ಮಂದಿ ಸ್ಥಳದಲ್ಲೇ ಮೃತಪಟ್ಟರು. ಪತ್ತೆಯಾದ ಮೃತದೇಹಗಳೆಲ್ಲವೂ ಪುರುಷರದ್ದಾಗಿದೆ. ದೆಹಲಿಯಿಂದ ಗುಪ್ತಕಾಶಿಗೆ ತೆರಳುತ್ತಿದ್ದ ಬಸ್ಸು ವಯಸಿ ಮತ್ತು ದೇವಪ್ರಯಾಗದ ನಡುವೆ ಅಪಘಾತಕ್ಕೀಡಾಯಿತು.