ಇಂದು ಕರೆಂಟ್ ಬಾಂಬ್ ಸ್ಫೋಟ
ರಾಜ್ಯ ಸರ್ಕಾರ ಬಚ್ಚಿಟ್ಟಿದ್ದ ಬೆಲೆ ಏರಿಕೆಯ ಇನ್ನೊಂದು ಬಾಂಬ್ ಸೋಮವಾರ ಸ್ಫೋಟವಾಗಲಿದೆ...
ಬೆಂಗಳೂರು: ರಾಜ್ಯ ಸರ್ಕಾರ ಬಚ್ಚಿಟ್ಟಿದ್ದ ಬೆಲೆ ಏರಿಕೆಯ ಇನ್ನೊಂದು ಬಾಂಬ್ ಸೋಮವಾರ ಸ್ಫೋಟವಾಗಲಿದೆ.
ಪ್ರತಿ ಯೂನಿಟ್ಗೆ 25ಪೈಸೆ ವಿದ್ಯುತ್ ದರ ಏರಿಕೆ ಮಾಡಲು ಕೆಇಆರ್ಸಿ ತೀರ್ಮಾನಿಸಿದ್ದು, ಹೊಸ ದರ ಮುಂದಿನ ತಿಂಗಳಿನಿಂದ ಅನ್ವಯ. ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್ಗೆ 65 ಪೈಸೆ ಏರಿಕೆ ಮಾಡಬೇಕೆಂದು ಈ ಹಿಂದೆ ಮನವಿ ಸಲ್ಲಿಸಿದ್ದವು. ಇದನ್ನಾಧರಿಸಿ ವಿದ್ಯುತ್ ನಿಯಂತ್ರಣ ಆಯೋಗ ಈಗಾಗಲೇ ಅಭಿಪ್ರಾಯ ಸಂಗ್ರಹಿಸಿದೆ. ಅದನ್ನು ವಿಶ್ಲೇಷಿಸಿ ಪರಿಷ್ಕೃತ ದರವನ್ನು ಆಯೋಗದ ಅಧ್ಯಕ್ಷ ಶ್ರೀನಿವಾಸಮೂರ್ತಿ ಪ್ರಕಟಿಲಿದ್ದಾರೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ದರ ಏರಿಕೆಯಾಗಿತ್ತು.