ನಕ್ಸಲ್ ದಾಳಿಗೆ ಏಳು ಬಲಿ
ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಕ್ಸಲರು ನಡೆಸಿದ ನೆಲಬಾಂಬ್ ದಾಳಿಯಲ್ಲಿ ಏಳು ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ...
ನಾಗ್ಪುರ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಕ್ಸಲರು ನಡೆಸಿದ ನೆಲಬಾಂಬ್ ದಾಳಿಯಲ್ಲಿ ಏಳು ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ ಗಡ್ಚಿರೋಲಿ ಜಿಲ್ಲೆಯ ಪವಿಮುರಾಂಡ ಮತ್ತು ಮುರ್ಮುರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಹುದುಗಿಸಿದ್ದ ಬಾಂಬ್ ಸ್ಫೋಟಿಸಿದೆ. ಘಟನೆ ಬಳಿಕ ಪೊಲೀಸರು ಹಾಗೂ ನಕ್ಸಲೀಯರ ನಡುವೆ ಕೆಲ ಕಾಲ ಗುಂಡಿನ ಚಕಮಕಿಯೂ ನಡೆಯಿತು. ಪೊಲೀಸರು ಪ್ರಯಾಣಿಸುತ್ತಿದ್ದ ವಾಹನ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನಾಗ್ಪುರದಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಘಟನೆ ಪ್ರದೇಶಕ್ಕೆ ಕಳುಹಿಸಲಾಗಿದೆ.