ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೀರಿಗಾಗಿ ಸಂಘರ್ಷ ಶುರುವಾಗಿದೆ

ಬರದಿಂದ ಕಂಗೆಟ್ಟ ರಾಜ್ಯದಲ್ಲಿ ನೀರಿಗಾಗಿ ಅಕ್ಷರಶಃ ಯುದ್ಧ ಆರಂಭವಾಗಿದೆ. ಇದಕ್ಕೆ ಸಾಕ್ಷಿ ಜಮಖಂಡಿ-ಅಥಣಿ ತಾಲೂಕಿನ...

Rashmi Kasaragodu
Updated On : 12 May 2014, 12:47 pm

ಅಥಣಿ: ಬರದಿಂದ ಕಂಗೆಟ್ಟ ರಾಜ್ಯದಲ್ಲಿ ನೀರಿಗಾಗಿ ಅಕ್ಷರಶಃ ಯುದ್ಧ ಆರಂಭವಾಗಿದೆ. ಇದಕ್ಕೆ ಸಾಕ್ಷಿ ಜಮಖಂಡಿ-ಅಥಣಿ ತಾಲೂಕಿನ ಗ್ರಾಮಸ್ಥರ ನಡುವಿನ ಶನಿವಾರ ರಾತ್ರಿಯ ಜಲಸಂಘರ್ಷ.
ಒಡ್ಡು ಒಡೆದು ನೀರು ಕದ್ದೊಯ್ಯುವ ಪ್ರಯತ್ನದಲ್ಲಿ ಕಲ್ಲು ತೂರಾಟ, ಸಂಘರ್ಷ ನಡೆದಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯದಿದ್ದರೆ ಇತರೆಡೆಯೂ ಇಂದು ಮರುಕಳಿಸಬಹುದು.
ಯಾಕೆ ಜಗಳ? ಅಥಣಿ ರೈತರು ಕೃಷ್ಣಾ ನದಿಗೆ ಜುಂಜರವಾಡ ಬಳಿ ಹಾಕಿದ್ದ ಒಡ್ಡನ್ನು ಶನಿವಾರ ರಾತ್ರಿ ನೂರಾರು ಜನರ ಗುಂಪು ಒಡೆಯಲು ಯತ್ನಿಸಿದೆ. ಈ ಸಂದರ್ಭದಲ್ಲಿ ಒಡ್ಡು ಕಾಯಲು ಇದ್ದ ಜನ, ಗ್ರಾಮಸ್ಥರು ತೀವ್ರ ಪ್ರತಿರೋಧ ನಡೆದಿದೆ. ಕೈಕೈ ಮಿಲಾಯಿಸುವ ಹಂತ ತಲುಪಿದೆ. ಸಂಘರ್ಷದ ವಾತಾವರಣ ನಿರ್ಮಾಣವಾಗಿ, ಅಥಣಿ ರೈತರು ಕಲ್ಲು ತೂರಿದರು. ಈ ಹಂತ ಉದ್ರಿಕ್ತ ತಂಡ ಒಡ್ಡಿಗೆ ಹಾನಿ ಮಾಡಿತು.
ಕೃತ್ಯಕ್ಕೆ ಜಮಖಂಡಿ ಅಧಿಕಾರಿಗಳೇ ಹೊಣೆ ಎಂಬುದು ಅಥಣಿ ಗ್ರಾಮಸ್ಥರ ಆರೋಪ. ಜಮಖಂಡಿ ರೈತರು ಇಂಥ ಕೃತ್ಯ ಮಾಡುವುದಿಲ್ಲ. ಒಡ್ಡು ನಿರ್ಮಿಸುವಾಗ ಜಮಖಂಡಿಗೆ ಪ್ರತಿ ದಿನ 6000 ಕ್ಯುಸೆಕ್ ನೀರು ಹರಿವ ವ್ಯವಸ್ಥೆ ಮಾಡಲಾಗಿದೆ. ರೈತರು ಒಡ್ಡು ಒಡೆಯಲಾರರು. ಅಧಿಕಾರಿಗಳೇ ಬಾಡಿಗೆ ಜನರೊಂದಿಗೆ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು. ಎರಡೂ ಜಿಲ್ಲೆ ಹಾಗೂ ತಾಲೂಕಿನ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.


ಇದೊಂದು ಪುಟ್ಟ ಬ್ಯಾರೇಜು. ಇಲ್ಲಿ ನೀರು ಬಿಟ್ಟರೂ ಜಮ ಖಂಡಿಗೆ ಸಿಗದು. ಇದರಿಂದ 18 ಹಳ್ಳಿಗಳಿಗೆ ನೀರು ಪೂರೈಸಲಾಗುತ್ತದೆ. ಕೊಯ್ನಾದಿಂದ 3 ಟಿಎಂಸಿ ಬಿಡುಗಡೆಗೆ ಯತ್ನ ನಡೆದಿದೆ. ಮುಂದಿನ ವಾರ ನೀರು ಬಿಡುಗಡೆ ನಿರೀಕ್ಷೆ ಇದೆ.
- ಎನ್.ಜಯರಾಂ, ಡಿಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement