ಬ್ಯಾಸಗಿ ಬಿಸಿಯೂಟಕ್ ಮಕ್ಳು ಬರಂಗಿಲ್ಲ, ಮಾಸ್ತರ್ ಬಿಡಂಗಿಲ್ಲ
ಮಕ್ಕಳಿಗೆ ಬಿಸಿ ಬಿಸಿಯೂಟ, ಶಿಕ್ಷಕರಿಗೆ ತಲೆಬಿಸಿ! ಬರ ನಿರ್ವಹಣೆ ಅಂಗವಾಗಿ ರಾಜ್ಯದ ಬಡ ...
-ಪ್ರಚಾರದ ಕೊರತೆಯಿಂದ ಹಳ್ಳ ಹಿಡಿದ ಮಹತ್ವಾಕಾಂಕ್ಷಿ ಯೋಜನೆ
-ರಾಜ್ಯದ 12 ಲಕ್ಷ ಮಕ್ಕಳ ಹಸಿವು ತಣಿಸುವ ಶಿಕ್ಷಕರಿಗೆ ಸಜೆ
ಬೆಂಗಳೂರು: ಮಕ್ಕಳಿಗೆ ಬಿಸಿ ಬಿಸಿಯೂಟ, ಶಿಕ್ಷಕರಿಗೆ ತಲೆಬಿಸಿ!
ಬರ ನಿರ್ವಹಣೆ ಅಂಗವಾಗಿ ರಾಜ್ಯದ ಬಡ ಮಕ್ಕಳ ಹೊಟ್ಟೆ ತಣಿಸಲು ರಾಜ್ಯ ಸರ್ಕಾರ ಬೇಸಿಗೆ ಬಿಸಿಯೂಟ ಯೋಜನೆ ಹಮ್ಮಿಕೊಂಡಿದೆ. ಯೋಜನೆ 12 ಲಕ್ಷಕ್ಕೂ ಅಧಿಕ ಮಕ್ಕಳನ್ನೊಳಗೊಂಡಿದೆ. ಹಾಗೆಯೇ 35 ಸಾವಿರಕ್ಕೂ ಅಧಿಕ ಶಿಕ್ಷಕರ ಬೇಸಿಗೆ ರಜೆಯನ್ನೂ ಕಸಿದಿದೆ. ಇಷ್ಟಿದ್ದರೆ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರದ ಕಾಳಜಿಗೆ ಸ್ಪಂದಿಸಿಲ್ಲ. ರಜೆಯಲ್ಲಿಯೂ ಶಾಲೆ ಕಡೆ ತಲೆ ಹಾಕಲು ಮಕ್ಕಳು ಸಿದ್ಧರಿಲ್ಲ. ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದಲೂ ಯೋಜನೆ ಉದ್ದೇಶ ಬಡವರಿಗೆ ಸಿಗುತ್ತಿಲ್ಲ. ಕಳೆದ ರಜೆಯಿಂದ ವಿಶೇಷ ಬಿಸಿಯೂಟ ಯೋಜನೆ ಪ್ರಾರಂಭವಾಯಿತು. ಹಿಂದಿನ ವರ್ಷದ ತಪ್ಪುಗಳನ್ನು ತಿದ್ದಿಕೊಳ್ಳಲು ವಿಫಲವಾಗಿರುವ ಇಲಾಖೆ, ಪ್ರಚಾರಕ್ಕೆ ಆಸಕ್ತಿ ತೋರುತ್ತಿಲ್ಲ. ಬರ ನಿರ್ವಹಣೆ ಅನುದಾನದಿಂದ ಬಿಸಿಯೂಟಕ್ಕೆ 53 ಕೋಟಿ ಖರ್ಚು ಮಾಡಲಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಸ್ವಲ್ಪ ತಲೆಕೆಡಿಸಿಕೊಂಡರೆ ಬರ ಪೀಡಿತ ಜನರ ನೆರವಿಗೆ ನೈಜವಾಗಿ ಬರಲು ಸಾಧ್ಯ. ಇನ್ನು ಯೋಜನೆ ನೆಪ ಮಾತ್ರಕ್ಕಾಗದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ರಜೆಯ ಸಜೆಯಾಗದಂತೆ ರೂಪಿಸುವತ್ತ ಸರ್ಕಾರ ಗಮನನೀಡಬೇಕಿದೆ.
ಯೋಜನೆಯ ಸ್ಥಿತಿಗತಿ
ಜಿಲ್ಲೆಗಳು-28
ತಾಲೂಕು- 125
ಒಟ್ಟು ಶಾಲೆ-35,334
ಫಲಾನುಭವಿಗಳು-31.21ಲಕ್ಷ
ಪ್ರಾಥಮಿಕ ಶಾಲೆ-12,09,166
ಹಿ.ಪ್ರಾ.ಶಾಲೆ-6,67,411
ಊಟಕೆ ಹಾಜರ್12,07,000
ಅಡುಗೆ ವೆಚ್ಚ-6.13ಕೋಟಿ
ಸಾರಿಗೆ ವೆಚ್ಚ-81.23ಲಕ್ಷ
ಸಂಬಳ-12.50ಕೋಟಿ
ಮೇಲುಸ್ತುವಾರಿ ವೆಚ್ಚ-50.35ಲಕ್ಷ
ಧಾನ್ಯಗಳಿಗೆ ಖರ್ಚು-3.27 ಕೋಟಿ
ಒಟ್ಟು ಧಾನ್ಯಗಳ ಬಳಕೆ-10,830 ಮೆಟ್ರಿಕ್ ಟನ್
- ರಾಜೀವ ಹೆಗಡೆ