ಇತಿಹಾಸ ಬರೆದ ಎಸ್ಸೆಸ್ಸೆಲ್ಸಿ ಫಲಿತಾಂಶ
ಹಿಂದೆ ಬಿದ್ರು 'ಕನ್ನಡ'ದ ಮಂದಿ, ಇಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗು ಗುರೂ
ಕ.ಪ್ರ. ವಾರ್ತೆ ಬೆಂಗಳೂರು ಮೇ 12
ಎಸ್ಎಸ್ಎಲ್ಸಿ ಇತಿಹಾಸಾದಲ್ಲಿಯೇ ಅತಿ ಹೆಚ್ಚು ಫಲಿತಾಂಶ ದಾಖಲೆಯಾಗಿದ್ದು, 2013-14ನೇ ಶೈಕ್ಷಣಿಕ ವರ್ಷದಲ್ಲಿ ಶೇ.81.19ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಶೇ.3.72ರಷ್ಟು ಫಲಿತಾಂಶ ಏರಿಕೆಯಾಗಿದೆ. ಆದರೆ ಈ ಫಲಿತಾಂಶವು ಸಾರ್ವಕಾಲಿಕ ದಾಖಲೆ ಎಂದು ತೋರಿಸಲು ಪ್ರೌಢ ಶಿಕ್ಷಣ ಮಂಡಳಿ ಅಥವಾ ಶಿಕ್ಷಣ ಸಚಿವರ ಬಳಿ ಯಾವುದೇ ದಾಖಲೆಗಳಿಲ್ಲ.
ಚಿಕ್ಕೋಡಿ, ಶಿರಸಿ, ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳು ಮೊದಲ ಮೂರು ಸ್ಥಾನ ಹೊಂದಿದ್ದರೆ, ಬೀದರ್, ಬೆಂಗಳೂರು ದಕ್ಷಿಣ ಹಾಗೂ ಬಿಜಾಪುರ ಶೈಕ್ಷಣಿಕ ಜಿಲ್ಲೆಗಳು ಕೊನೆ ಸ್ಥಾನದಲ್ಲಿವೆ. ಮೈಸೂರು ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ನಿತ್ಯಾ ಸುರಭಿ 622 ಅಂಕ ಗಳಿಸಿದ್ದು, 4 ವಿದ್ಯಾರ್ಥಿಗಳು 621 ಅಂಕ ಗಳಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ ಯಾವುದೇ ವಿದ್ಯಾರ್ಥಿಯು ಟಾಪ್-10ರ ಪಟ್ಟಿಯಲ್ಲಿ ಸ್ಥಾನ ಹೊಂದಿಲ್ಲ. ಚಿಕ್ಕೋಡಿಯ ವಿಶಾಲು ಸಂಗಬಸವ ಗದಗ್ ಅವರು 617 ಅಂಕ ಗಳಿಸಿ ಮೊದಲಿಗರೆನಿಸಿಕೊಂಡಿದ್ದಾರೆ.
ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು ಶೇ.85.46ರಷ್ಟು ಪಾಸಾಗಿದ್ದಾರೆ. ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಶೇ.5ರಷ್ಟು ಅಧಿಕ ಫಲಿತಾಂಶ ಪ್ರಕಟವಾಗಿದ್ದು, ಪಿಯುಸಿಯಂತೆ ಎಸ್ಎಸ್ಎಲ್ಸಿಯಲ್ಲಿಯೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಆದರೆ ಕಳೆದ ಸಾಲಿಗಿಂತ ಉತ್ತೀರ್ಣರಾದವರ ಸಂಖ್ಯೆಯಲ್ಲಿ ಸುಮಾರು 17 ಸಾವಿರದಷ್ಟು ಇಳಿಕೆಯಾಗಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಕೂಡ 23 ಸಾವಿರದಷ್ಟು ಕುಸಿತವಾಗಿದೆ.
ಶತಕ ವೀರರು, ಶೂನ್ಯ ಸಾಧಕರು
ಈ ಬಾರಿ ಫಲಿತಾಂಶದಲ್ಲಿ ಶೂನ್ಯ ಸಾಧಕರು ಹಾಗೂ ಶತಕವೀರರ ಸಂಖ್ಯೆ ಹೆಚ್ಚಾಗಿದೆ. ಒಟ್ಟು ಆರು ವಿಷಯಗಳಲ್ಲಿ 2962 ಶತಕ ಪ್ರಕರಣ ದಾಖಲಾದರೆ, 1104 ವಿದ್ಯಾರ್ಥಿಗಳು ಶೂನ್ಯ ಸಂಪಾದನೆ ಮಾಡಿದ್ದಾರೆ. ಇದಲ್ಲದೇ 17 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದು, ಇದರಲ್ಲಿ 16 ಖಾಸಗಿ ಶಾಲೆಗಳು! ರಾಜ್ಯಾದ್ಯಂತ 2023 ಶಾಲೆಗಳು ಪೂರ್ಣ ಫಲಿತಾಂಶ ದಾಖಲಿಸಿವೆ. ಶತಕ ಹೊಡೆದ ಶಾಲೆಗಳಿಗೆ ಅಭಿನಂದನೆ ಸಲ್ಲಿಸಿರುವ ಮಂಡಳಿ, ಶೂನ್ಯ ಫಲಿತಾಂಶದ ಶಾಲೆಗಳಿಗೆ ಗಂಭೀರ ಕ್ರಮದ ಎಚ್ಚರಿಕೆ ನೀಡಿದೆ.
ಗೊಂದಲದಲಿ ಪ್ರಕಟಿಸಿದ ಸಚಿವರು
ಫಲಿತಾಂಶ ಪ್ರಕಟಿಸುವಾಗ ಪ್ರೌಢ ಶಿಕ್ಷಣ ಮಂಡಳಿ ನೀಡಿದ ಮಾಹಿತಿಗಳು ಸಂಪೂರ್ಣ ಗೊಂದಲಮಯವಾಗಿವೆ. ಒಟ್ಟಾರೆ ಫಲಿತಾಂಶದಲ್ಲಿ ಹೊಸಬರು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ಸೇರಿಸಲಾಗಿದೆ. ಆದರೆ ಕಾಲೇಜು, ಜಿಲ್ಲೆ ಹಾಗೂ ಮಾಧ್ಯಮವಾರು ನೀಡುವಾಗ ಗೊಂದಲದ ದಾಖಲೆ ನೀಡಲಾಗಿದೆ. ಈ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ ನಮಗೆ ನೂತನ ವಿದ್ಯಾರ್ಥಿಗಳು ಮಾತ್ರ ಮುಖ್ಯ ಎಂಬ ಹಾರಿಕೆ ಉತ್ತರ ನೀಡಿದರು. ಇನ್ನೊಂದೆಡೆ ಪ್ರೌಢ ಶಿಕ್ಷಣ ಮಂಡಳಿ ನೀಡಿರುವ ಅನುಬಂಧ-1ರ ಪ್ರಕಾರ ಉತ್ತೀರ್ಣರಾದ ನೂತನ ವಿದ್ಯಾರ್ಥಿಗಳ ಸಂಖ್ಯೆ 6,40,674. ಆದರೆ ಅನುಬಂಧ-3 ಹಾಗೂ 10ರಲ್ಲಿ ಇಬ್ಬರು ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳ ಪ್ರಕಾರ ಫಲಿತಾಂಶವನ್ನು ಸೋಮವಾರ ಪ್ರಕಟಿಸಲು ಅಧಿಕಾರಿಗಳು ತಯಾರಿರಲಿಲ್ಲ. ಆದರೆ ಸಚಿವರ ಒತ್ತಾಯಕ್ಕೆ ಮಣಿದು ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಶನಿವಾರ ತಡರಾತ್ರಿಯವರೆಗೂ ಫಲಿತಾಂಶದ ಮಾಡ್ಯುಲೇಶನ್ ಪ್ರಕ್ರಿಯೆ ಮುಗಿದಿರಲಿಲ್ಲ.
ರಾಜ್ಯಕ್ಕೆ ಮೊದಲಿಗರಿವರು
ಇಂಗ್ಲಿಷ್ ಮಾಧ್ಯಮ
ಟ ಅಭಿಜ್ಞಾ ಜಿ(621)- ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಪ್ರೌಢ ಶಾಲೆ- ಬೆಂಗಳೂರು ಉತ್ತರ
- ತಂದೆ- ಗಣೇಶ್, ತಾಯಿ-ವೀಣಾ, ಎಂಜಿನಿಯರ್ ಆಗುವ ಬಯಕೆ
ಟ ಅಭಿಲಾಷ್ ಆರ್ ಜಿ- ಎಂಇಎಸ್ ಕಿಶೋರ ಕೇಂದ್ರ ಪ್ರೌಢ ಶಾಲೆ- ಬೆಂಗಳೂರು ಉತ್ತರ
- ತಂದೆ- ಗುರುರಾಜ್, ತಾಯಿ-ವಸುಮತಿ, ಆಟೋಮೊಬೈಲ್ ಎಂಜಿನಿಯರ್ ಕನಸು
ಟ ಸಿಂಧು ಬದರೀಶ್- ಶ್ರೀ ವಿದ್ಯಾಮಂದಿರಾ ಪ್ರೌಢಶಾಲೆ- ಬೆಂಗಳೂರು ಉತ್ತರ
- ತಂದೆ- ಬದರೀಶ್ ಅಪ್ಪಣ್ಣ, ತಾಯಿ-ರಾಧಾ, ವೈದ್ಯೆಯಾಗುವ ಆಸೆ ಹೊಂದಿದ್ದಾಳೆ.
ಟ ಧನ್ಯಾ ಭರತ್- ಶ್ರೀ ವಿದ್ಯಾಮಂದಿರ ಪ್ರೌಢ ಶಾಲೆ- ಬೆಂಗಳೂರು ಉತ್ತರ
- ತಂದೆ- ಭರತ್, ಮೂಲ ವಿಜ್ಞಾನದಲ್ಲಿ ಸಂಶೋಧನೆ ಮಾಡುವ ಆಸೆ ಹೊಂದಿದ್ದಾಳೆ.
ಶೈಕ್ಷಣಿಕ ಜಿಲ್ಲೆಗಳ ಶೇಕಡಾವಾರು ಫಲಿತಾಂಶ
ಕ್ರ.ಸಂ ಜಿಲ್ಲೆ ಮಾ.2014 ಮಾ.2013
1. ಚಿಕ್ಕೋಡಿ 91.70 89.86
2. ಶಿರಸಿ 90.73 79.92
3. ಬೆಳಗಾವಿ 89.91 84.63
4. ಮಂಡ್ಯ 89.10 88.56
5. ಮಧುಗಿರಿ 88.41 85.52
6. ಹಾವೇರಿ 87.99 85.37
7. ಕೋಲಾರ 87.78 86.30
8. ಉತ್ತರ ಕನ್ನಡ 87.22 83.25
9. ತುಮಕೂರು 86.83 83.98
10. ಬಾಗಲಕೋಟೆ 86.62 81.92
11. ಯಾದಗಿರಿ 86.55 78.47
12. ದಾವಣಗೆರೆ 86.33 81.35
13. ಗದಗ 85.56 81.43
14. ಹಾಸನ 85.54 86.00
15. ಧಾರವಾಡ 85.44 80.09
16. ಉಡುಪಿ 85.36 87.68
17. ರಾಮನಗರ 85.22 85.32
18. ಚಿತ್ರದುರ್ಗ 84.77 80.25
19. ಚಿಕ್ಕಮಗಳೂರು 84.35 82.93
20. ಚಾಮರಾಜನಗರ 83.92 82.13
21. ಬೆಂ.ಗ್ರಾ. 83.47 82.95
22. ಕೊಪ್ಪಳ 82.47 81.93
23. ರಾಯಚೂರು 82.08 82.42
24. ಬೆಂ. ಉತ್ತರ 81.81 80.14
25. ಕೊಡಗು 81.31 79.46
26. ಮೈಸೂರು 80.58 81.05
27. ಶಿವಮೊಗ್ಗ 80.03 78.87
28. ಚಿಕ್ಕಬಳ್ಳಾಪುರ 79.80 77.00
29. ಮಂಗಳೂರು 79.31 78.77
30. ಗುಲ್ಬರ್ಗ 79.08 71.30
31. ಬಳ್ಳಾರಿ 78.80 75.50
32. ಬಿಜಾಪುರ 78.70 78.67
33. ಬೆಂ. ದಕ್ಷಿಣ 76.16 76.42
34. ಬೀದರ್ 75.35 67.95
ಫಲಿತಾಂಶ ವಿವರ
ವಿದ್ಯಾರ್ಥಿಗಳು ಬಾಲಕರು ಬಾಲಕಿಯರು ಒಟ್ಟು ಶೇ.
ನೂತನ 3,21,256 3,19,418 6,40,674 85.37
ಪುನರಾವರ್ತಿತ 11,776 5,077 16,853 40.85
ಖಾಸಗಿ 1893 1095 2988 22.80
ಸರ್ಕಾರಿ 1,18,644 1,28,683 2,47,327 80.22
ಅನುದಾನಿತ 1,00,719 1,05,107 2,05,826 82.77
ಖಾಸಗಿ 1,03,784 86,723 1,90,507 88.49
ಗ್ರಾಮೀಣ 1,90,741 1,77,500 3,68,241 85.33
ನಗರ 1,32,406 1,43,013 2,75,419 80.84
ಒಟ್ಟು 3,34,925 3,25,590 6.60,515 81.19
ಮಾಧ್ಯಮವಾರು ಮಾಹಿತಿ
ಮಾಧ್ಯಮ ಹಾಜರಿ ಉತ್ತೀರ್ಣ ಶೇಕಡ
ಕನ್ನಡ 5,48,542 4,31,612 78.68
ಇಂಗ್ಲಿಷ್ 2,25,160 1,96,449 87.25
ಉರ್ದು 24,027 19,046 79.27
ಹಿಂದಿ 216 157 72.69
ಮರಾಠಿ 14,819 12,786 86.28
ತಮಿಳು 256 145 56.64
ಅಂಕವಾರು ಮಾಹಿತಿ
ವಿಷಯ ಶತಕ ಶೂನ್ಯ
ಪ್ರಥಮ 942 224
ದ್ವಿತೀಯ 328 224
ತೃತೀಯ 376 241
ಗಣಿತ 242 308
ವಿಜ್ಞಾನ 16 64
ಸಮಾಜ 1058 43
ಶೈಕ್ಷಣಿಕ ಕ್ಷೇತ್ರವಾರು ಫಲಿತಾಂಶ (ಆರಂಭಿಕ 5 ಮತ್ತು ಕೊನೆಯ 5)
ಕ್ಷೇತ್ರ ಶಿಕ್ಷಣ ಕಚೇರಿ ಫಲಿತಾಂಶ
ಜೋಯಿಡಾ 97.26
ಮೂಡಲಗಿ 96.19
ಗೋಕಾಕ 95.11
ಮುಂಡಗೋಡ 94.29
ಮದ್ದೂರು 94.03
ಸೇಡಂ 70.82
ಬಿಜಾಪುರ ನಗರ 69.69
ಬಳ್ಳಾರಿ 68.32
ನವಲಗುಂದ 67.56
ಗೌರಿಬಿದನೂರು 64.07
ಪರೀಕ್ಷೆಯಲ್ಲಿ ವಿಕಲಚೇತನರ ಹುಮ್ಮಸ್ಸು ಹೀಗಿದೆ...
ವಿಭಾಗ ಹಾಜರಿ ಉತ್ತೀರ್ಣ ಶೇಕಡ
ಶ್ರವಣ ಧೋಷ 226 155 68.58
ದೈಹಿಕ 925 624 67.46
ಕಿವುಡ, ಮೂಗ 600 354 59
ದೃಷ್ಟಿ 428 376 87.85
ಇತರೆ 116 73 62.93
ಕಲಿಕಾ ನ್ಯೂನ್ಯತೆ 538 367 68.22