ಇತಿಹಾಸ ಬರೆದ ನಿಫ್ಟಿ
ಮತಗಟ್ಟೆ ಸಮೀಕ್ಷೆಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವ ಭವಿಷ್ಯ ನುಡಿಯಲಿದೆ ಎಂಬ ...
ಮತಗಟ್ಟೆ ಸಮೀಕ್ಷೆಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವ ಭವಿಷ್ಯ ನುಡಿಯಲಿದೆ ಎಂಬ ನಿರೀಕ್ಷೆಯೇ ಷೇರುಪೇಟೆ ಸೆನ್ಸೆಕ್ಸ್ ಅನ್ನು ದಾಖಲೆ ಮಟ್ಟಕ್ಕೇರಿಸಿತು. ವಿಶೇಷವೆಂದರೆ, ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಿಫ್ಟಿ 7 ಸಾವಿರದ ಗಡಿ ದಾಟಿ ದಾಖಲೆ ಮಾಡಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 556 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 23,551ರಲ್ಲಿ ಕೊನೆಗೊಂಡಿತು.
ರುಪಾಯಿಯೂ ಏರಿಕೆ: ಡಾಲರ್ ಎದುರು ರುಪಾಯಿ ಮೌಲ್ಯವೂ ಭಾರಿ ಏರಿಕೆ ಕಂಡಿದೆ. ಸೋಮವಾರ ರುಪಾಯಿ ಮೌಲ್ಯ 59.51ಕ್ಕೆ ತಲುಪಿದ್ದು, 10 ತಿಂಗಳಲ್ಲೇ ಇದು ಅತ್ಯಧಿಕ ಏರಿಕೆ.