ಡೀಸೆಲ್ ದರ ಹೆಚ್ಚಳ
ಮತದಾನ ಮುಕ್ತಾಯವಾಗುತ್ತಿದ್ದಂತೆ ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಒಂದಕ್ಕೆ 1.09ರಷ್ಟು...
ನವದೆಹಲಿ: ಮತದಾನ ಮುಕ್ತಾಯವಾಗುತ್ತಿದ್ದಂತೆ ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಒಂದಕ್ಕೆ 1.09ರಷ್ಟು ಹೆಚ್ಚಳ ಮಾಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿ. ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದಾಗಿ ದುಬಾರಿ ವಸ್ತುಗಳ ಪಟ್ಟಿಗೆ ಡೀಸೆಲ್ ಕೂಡ ಸೇರಿದಂತಾಗಿದೆ. ಪ್ರತಿ ರಾಜ್ಯಗಳು ವಿಧಿಸುವ ಸ್ಥಳೀಯ ತೆರಿಗೆ ಅಥವಾ ವ್ಯಾಟ್ ಈ ದರದಲ್ಲಿ ಸೇರಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯವಾರು ವ್ಯತ್ಯಾಸವಾಗಲಿದೆ. ಕಳೆದ ವರ್ಷದ ಜನವರಿಯಲ್ಲಿ ದರವನ್ನು 40-50 ಪೈಸೆ ಹೆಚ್ಚಿಸಲಾಗಿತ್ತು.