ದಾಖಲೆಯೊಂದಿಗೆ ಮುಗೀತು ಚುನಾವಣೆ
ಕೊನೆಯ ಹಾಗೂ 9ನೇ ಹಂತದಲ್ಲಿ ದಾಖಲೆ ಮತದಾನದೊಂದಿಗೆ ಪ್ರಸಕ್ತ...
ಕೊನೆಯ ಹಾಗೂ 9ನೇ ಹಂತದಲ್ಲಿ ದಾಖಲೆ ಮತದಾನದೊಂದಿಗೆ ಪ್ರಸಕ್ತ ಲೋಕಸಭೆ ಚುನಾವಣೆಗೆ ತೆರೆಬಿದ್ದಿದೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರದ ಒಟ್ಟು 41 ಸ್ಥಾನಗಳಿಗೆ ಸೋಮವಾರ ನಡೆದ ಮತದಾನ ಶಾಂತಿಯುತವಾಗಿ ಕೊನೆಗೊಂಡಿತು. ಅಲ್ಲಿಗೆ ಚುನಾವಣೆ ಹಬ್ಬವೂ ಮುಗಿಯಿತು.
ಕೊನೇ ಹಂತದಲ್ಲಿ...
41 ಮತದಾನ ನಡೆದ ಸ್ಥಾನಗಳು
606 ಒಟ್ಟು ಅಭ್ಯರ್ಥಿಗಳು
ಉತ್ತರಪ್ರದೇಶ
18 ಸ್ಥಾನ
ಅಭ್ಯರ್ಥಿಗಳು
328
55.29 %
ಪಶ್ಚಿಮ ಬಂಗಾಳ
17 ಸ್ಥಾನ
ಅಭ್ಯರ್ಥಿಗಳು
188
79.3%
ಬಿಹಾರ
6 ಸ್ಥಾನ
ಅಭ್ಯರ್ಥಿಗಳು
90
58 %
ವಾರಾಣಸಿ- 55.34 %
ಫಲಿತಾಂಶ - ಮೇ 16
1984ರ ದಾಖಲೆ ಮುರಿದೆವು
ಈ ಬಾರಿಯ ಚುನಾವಣೆಯಲ್ಲಿ ಭಾರತವು ಹೊಸ ದಾಖಲೆ ಸೃಷ್ಟಿಸಿದೆ. ಪ್ರಸಕ್ತ ಚುನಾವಣೆಯಲ್ಲಿ ಶೇ.66.38 ಮತದಾನ ದಾಖಲಾಗಿದ್ದು, 1984-85ರ ದಾಖಲೆ ಮುರಿಯಲಾಗಿದೆ. ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ಅನುಕಂಪದ ಅಲೆಯು ರಾಜೀವ್ ಗಾಂಧಿ ಮೇಲೆ ಬಿದ್ದ ಪರಿಣಾಮ 1984ರಲ್ಲಿ ಶೇ.64.01 ಮತದಾನ ದಾಖಲಾಗಿತ್ತು. ತದನಂತರ ಅತಿ ಹೆಚ್ಚು ಮತದಾನ ದಾಖಲಾಗಿದ್ದು ಇದೇ ಬಾರಿ.