ಅಭ್ಯರ್ಥಿ ಆಖೈರು
ಮೇಲ್ಮನೆ ಚುನಾವಣೆ ತಯಾರಿ ಪ್ರಾರಂಭಿಸಿರುವ ರಾಜ್ಯ ಬಿಜೆಪಿ, 3 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಂತಿಮಗೊಳಿಸಿದೆ. ಈಶಾನ್ಯ...
ಬೆಂಗಳೂರು: ಮೇಲ್ಮನೆ ಚುನಾವಣೆ ತಯಾರಿ ಪ್ರಾರಂಭಿಸಿರುವ ರಾಜ್ಯ ಬಿಜೆಪಿ, 3 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಂತಿಮಗೊಳಿಸಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶಶೀಲ್ ನಮೋಶಿ, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಡಾ. ಎ.ಎಚ್. ಶಿವಯೋಗಿಸ್ವಾವು ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನೀಲಯ್ಯ ಹೆಸರು ಶಿಫಾರಸು ಮಾಡಲಾಗಿದೆ. ವಾಯವ್ಯ ಪದವೀಧರ ಕ್ಷೇತ್ರ, ವಿಧಾನಸಭೆಯಿಂದ ಮೇಲ್ಮನೆಗೆ ಅಭ್ಯರ್ಥಿಗಳನ್ನು ಫಲಿತಾಂಶದ ನಂತರ ಪ್ರಕಟಿಸುವ ಸಾಧ್ಯತೆಯಿದೆ. ಮತ್ತೊಂದೆಡೆ ಪ್ರಭಾಕರ್ ಕೋರೆ ಹಾಗೂ ನ್ಯಾ. ರಾಮಾ ಜೋಯಿಸ್ರಿಂದ ಖಾಲಿಯಾಗುವ ರಾಜ್ಯಸಭಾ ಸ್ಥಾನಗಳಿಗೂ ಫಲಿತಾಂಶದ ಬಳಿಕವೇ ಅಭ್ಯರ್ಥಿ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.