ಎನ್ಡಿಎ ತೆಕ್ಕೆಗೆ ಎನ್ಸಿಪಿ?
ಸಮೀಕ್ಷೆಗಳಿಂದ ಉತ್ತೇಜನಗೊಂಡಿರುವ ಬಿಜೆಪಿ, ಎನ್ಡಿಎ ಮೈತ್ರಿಕೂಟಕ್ಕೆ ಮತ್ತಷ್ಟು ಪಕ್ಷಗಳನ್ನು ಸೇರಿಸಿಕೊಳ್ಳಲು..
ನವದೆಹಲಿ: ಸಮೀಕ್ಷೆಗಳಿಂದ ಉತ್ತೇಜನಗೊಂಡಿರುವ ಬಿಜೆಪಿ, ಎನ್ಡಿಎ ಮೈತ್ರಿಕೂಟಕ್ಕೆ ಮತ್ತಷ್ಟು ಪಕ್ಷಗಳನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ದೆಹಲಿಯಲ್ಲಿ ಈ ಸುಳಿವು ನೀಡಿದ್ದಾರೆ. ಪೂರಕವಾಗಿ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಕೂಡ ದೇಶಕ್ಕೆ ಈಗ ಸುಭದ್ರ ಸರ್ಕಾರ ಬೇಕಾಗಿದೆ ಎನ್ನುವ ಮೂಲಕ ಕಾಂಗ್ರೆಸ್ಗೆ ಕೈ ಕೊಟ್ಟು ಎನ್ಡಿಎಯತ್ತ ನೆಗೆವ ಸುಳಿವು ನೀಡಿದ್ದಾರೆ. ಜನರು ನೀಡಿದ ತೀರ್ಪನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ.
305 ಸ್ಥಾನ: ಅಮಿತ್ ಶಾ ಪ್ರಕಾರ ಎನ್ಡಿಎಗೆ 290-305 ಸ್ಧಾನಗಳು ಸಿಗಲಿವೆ. ಮೈತ್ರಿಕೂಟಕ್ಕೆ 272 ಸ್ಥಾನಗಳು ಸಿಕ್ಕರೂ ಇನ್ನಷ್ಟು ಪಕ್ಷಗಳನ್ನು ಆಹ್ವಾನಿಸಲಾಗುತ್ತದೆ. ಮೋದಿ ಸಹ ಇತ್ತೀಚಿನ ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ
ಸರಣಿ ಸಭೆ: ಈ ನಡುವೆ ಸಮೀಕ್ಷೆಗಳಲ್ಲಿ ಉತ್ತಮ ಫಲಿತಾಂಶದ ದಿಕ್ಸೂಚಿ ಲಭಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಸರಣಿ ಸಭೆ ನಡೆಸಿದರು. ಮೇ 16ರ ಫಲಿತಾಂಶದ ಬಳಿಕದ ಸಂಭಾವ್ಯ ರಾಜಕೀಯ ಪರಿಸ್ಥಿತಿಗಳ ಬಗ್ಗೆ ನರೇಂದ್ರ ಮೋದಿ, ಎಲ್.ಕೆ.ಆಡ್ವಾಣಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಚರ್ಚಿಸಿದರು.