ಡಿಗ್ಗಿ ಪರಿಣಯಕ್ಕೆ ಅಡ್ಡಿ?
ಟಿವಿ ನಿರೂಪಕಿ ಅಮೃತಾ ರಾಯ್ ಜತೆ ಮಧುಚಂದ್ರದ ಕನಸು ಕಾಣುತ್ತಿದ್ದ 67ರ ಯುವಕ ದಿಗ್ವಿಜಯ್ ಸಿಂಗ್ಗೆ ಭಾರಿ ಫಜೀತಿ...
ನವದೆಹಲಿ: ಟಿವಿ ನಿರೂಪಕಿ ಅಮೃತಾ ರಾಯ್ ಜತೆ ಮಧುಚಂದ್ರದ ಕನಸು ಕಾಣುತ್ತಿದ್ದ 67ರ ಯುವಕ ದಿಗ್ವಿಜಯ್ ಸಿಂಗ್ಗೆ ಭಾರಿ ಫಜೀತಿ. ಇತ್ತ ಮನದನ್ನೆ ಕೈ ಬಿಡುವಂತಿಲ್ಲ, ಅತ್ತ ಗುರುವಿನ ಗೆರೆ ದಾಟುವಂತಿಲ್ಲ. ಎಐಸಿಸಿ ಕಾರ್ಯದರ್ಶಿ ತಾವಾಗೇ ಅಡಕತ್ತರೀಲಿ ಸಿಕ್ಕ್ದಿದ್ದಾರೆ. ಅಮೃತಾ ಜತೆಗಿನ ಪರಿಣಯಕ್ಕೆ ಆಶೀರ್ವಾದ ಪಡೆಯಲು ಮಧ್ಯಪ್ರದೇಶ ಮಂಡಿದ್ವೀಪದ ಪರಮಹಂಸಿ ಗಂಗಾ ಆಶ್ರಮಕ್ಕೆ ತೆರಳಿದ್ದರು ಡಿಗ್ಗಿ. ಅಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿ, ಎರಡನೇ ಮದುವೆಗೆ ಅಸಮ್ಮತಿ ಸೂಚಿಸಿ, ಇಂಥದಕ್ಕೆ ಆಶೀರ್ವಾದ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಕನಸಲ್ಲಿ ತೇಲುತ್ತಿದ್ದ ದಿಗ್ವಿಜಯ್ ಬೇಸರದ ಮುಖ ಹೊತ್ತು ವಾಪಸಾಗಿದ್ದಾರೆ.