ಮೋದಿ ಅಲೆಯಲ್ಲಿ ಸೆನ್ಸೆಕ್ಸ್
ಷೇರುಪೇಟೆ ಹೂಡಿಕೆದಾರರ ತಣಿಯದ ಉತ್ಸಾಹದಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮಂಗಳವಾರ....
ಮುಂಬೈ: ಷೇರುಪೇಟೆ ಹೂಡಿಕೆದಾರರ ತಣಿಯದ ಉತ್ಸಾಹದಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮಂಗಳವಾರ 320 ಅಂಕಗಳ ಏರಿಕೆಯಾಗಿ, 23,871ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದೇ ವೇಳೆ ಸೋಮವಾರ 7 ಸಾವಿರದ ಗಡಿ ದಾಟಿದ್ದ ನಿಫ್ಟಿ ಮತ್ತೆ 94 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 7,108ರಲ್ಲಿ ಕೊನೆಗೊಂಡು ಹೊಸ ದಾಖಲೆ ಬರೆಯಿತು.