ಈಗ ಶೂ ಪಾಲಿಶ್ ಮಾಡ್ತಿದ್ದಾನೆ ಅಭ್ಯರ್ಥಿ!
ಮಧುಬನಿ: 'ಸಾಲ ಮಾಡಿಯಾದ್ರೂ ತುಪ್ಪ ತಿನ್ನು' ಎಂಬುದನ್ನು ಕೇಳಿರುವಿರಿ. ಅದನ್ನೀತ 'ಸಾಲ ಮಾಡಿಯಾದ್ರೂ ಸ್ಪರ್ಧಿಸು' ಎಂಬಂತೆ ಬದಲಿಸಿ ಚಾಚೂ ತಪ್ಪದೆ ಪಾಲಿಸಿದ್ದಾನೆ. ಬಿಹಾರದ ಜಂಜಾರ್ಪುರದಿಂದ ಪಕ್ಷೇತರನಾಗಿ ಸ್ಪರ್ಧಿಸಿರುವ ಚೀಡಿ ರಾಮ್‌ನ ಕಥೆಯಿದು. ಅವರಿವರಿಂದ ಸಾಲ ಮಾಡಿ ಚುನಾವಣಾ ಕಣಕ್ಕಿಳಿದಿರುವ ರಾಮ್ ಈಗೇನು ಮಾಡ್ತಿದ್ದಾನೆ ಗೊತ್ತೇ? ಚಪ್ಪಲಿ ರಿಪೇರಿ, ಶೂ ಪಾಲಿಶ್. ನಿಜ, ಈತನೇನೋ ಚಪಲ ತೀರಿಸಿಕೊಳ್ಳಲು ಸ್ಪರ್ಧಿಸಿದ್ದಾನೆ. ಆದರೆ ಸಾಲ ಕೊಟ್ಟವರು ಸುಮ್ಮನೇ ಬಿಡುತ್ತಾರಾ? ಹಾಗಾಗಿ ಪ್ರತಿದಿನ ಬೆಳಗ್ಗಿಂದ ರಾತ್ರಿವರೆಗೆ ಶೂ ಪಾಲಿಶ್, ಚಪ್ಪಲಿ ರಿಪೇರಿ ಮಾಡಿ ರಾಮ್ ಸಾಲ ತೀರಿಸುತ್ತಿದ್ದಾನೆ. ಅಲ್ಲಾ, ಇಷ್ಟೆಲ್ಲ ಕಷ್ಟಪಟ್ಟು ಚುನಾವಣೆಗೆ ಸ್ಪರ್ಧಿಸಬೇಕಿತ್ತೇ ಎಂದು ನೀವು ಪ್ರಶ್ನಿಸಿದ್ರೆ ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ!