ಕೋಮುಘರ್ಷಣೆ ಮೂರು ಸಾವು
ಹೈದರಾಬಾದ್: ಆಂಧ್ರದ ಹೈದರಾಬಾದ್ನಲ್ಲಿ ಬುಧವಾರ ಕೋಮುಘರ್ಷಣೆ ನಡೆದಿದ್ದು, ಪೊಲೀಸರ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ಕಿಷನ್ಬಾಗ್ನಲ್ಲಿ ಧರ್ಮವೊಂದರ ಧ್ವಜಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದೇ ಕೋಮುಘರ್ಷಣೆ ಉಂಟಾಗಲು ಕಾರಣ. ಘಟನೆ ಹಿನ್ನೆಲೆಯಲ್ಲಿ ರಾಜೇಂದ್ರನಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದೆ.