ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮತ ಎಣಿಕೆ ಸಿಬ್ಬಂದಿಗೆ ಕೇಂದ್ರ ರಹಸ್ಯ

ಲೋಕಸಭಾ ಮತ ಎಣಿಕೆ ಸಿಬ್ಬಂದಿ ನಿಯೋಜನೆಗೆ ಚುನಾವಣಾ ಆಯೋಗ ಈ ಬಾರಿ...

Rashmi Kasaragodu
Updated On : 15 May 2014, 11:33 am

ಬೆಂಗಳೂರು: ಲೋಕಸಭಾ ಮತ ಎಣಿಕೆ ಸಿಬ್ಬಂದಿ ನಿಯೋಜನೆಗೆ ಚುನಾವಣಾ ಆಯೋಗ ಈ ಬಾರಿ  'ರಹಸ್ಯ ಮಾದರಿ' ಅನುಸರಿಸುತ್ತಿದೆ.
ಎಣಿಕೆ ಸಿಬ್ಬಂದಿ ಕಾರ್ಯ ನಿರ್ವಹಿಸುವ ಸ್ಥಳವನ್ನು ಗೌಪ್ಯವಾಗಿಡಲಾಗುತ್ತದೆ. ಹಿಂದಿನ ಚುನಾವಣೆಗಳಲ್ಲಿ ಸಿಬ್ಬಂದಿ ಯಾವ ಕ್ಷೇತ್ರದಲ್ಲಿ ಮತ್ತು ಯಾವ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎನ್ನುವುದು 2-3 ದಿನ ಮೊದಲೇ ತಿಳಿಯುತ್ತಿತ್ತು. ಇದರಿಂದ ಎಣಿಕೆ ಕಾಲದಲ್ಲಿ ಅಕ್ರಮಗಳ ಸಾಧ್ಯತೆಗಳಿದ್ದವು. ದೋಷಪೂರಿತ ಎಣಿಕೆ ಮತ್ತಿತರ ಕರ್ತವ್ಯ ಲೋಪಕ್ಕೂ ದಾರಿಯಾಗುತ್ತಿತ್ತು.                  

ಇದನ್ನು ತಪ್ಪಿಸಲು ಆಯೋಗ ಎಣಿಕೆ ಆರಂಭವಾಗುವ ಒಂದೆರಡು ಗಂಟೆಮುಂಚಿನವರೆಗೂ ಸಿಬ್ಬಂದಿ ಯಾವ ಸ್ಥಳದಲ್ಲಿ ಸೇವೆ ಸಲ್ಲಿಸಬೇಕು ಎಂದು ಹೇಳುವುದಿಲ್ಲ. ಬದಲಾಗಿ ಮೂರು ಹಂತಗಳಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿ, ಅಂತಿಮವಾಗಿ ಎಣಿಕೆ ಕೇಂದ್ರದ ಯಾವುದಾದರೂ ಒಂದು ಟೇಬಲ್‌ಗೆ ನಿಯೋಜಿಸಲಾಗುತ್ತದೆ.
ಕ್ಲೈಮಾಕ್ಸ್‌ನಲ್ಲಿ: ಆಯೋಗ ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳಿಂದ ಸಿಬ್ಬಂದಿ ಮಾಹಿತಿ ಪಡೆದಿದೆ. 13000 ಸಿಬ್ಬಂದಿಗೆ ಈಗ ಒಂದು ದಿನದ ತರಬೇತಿಯನ್ನೂ ನೀಡಲಾಗಿದೆ. ಲಭ್ಯ ಸಿಬ್ಬಂದಿ ಮಾಹಿತಿ ಆಧರಿಸಿ ಮೊದಲು ಲೋಕಸಭಾ ಕ್ಷೇತ್ರಕ್ಕೆ ನಿಯೋಜಿಸಲಾಗುತ್ತದೆ. ಆನಂತರ ಆ ಕ್ಷೇತ್ರ ವ್ಯಾಪ್ತಿಯ ಯಾವ  ವಿಧಾನಸಭಾ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಲಾಗುತ್ತದೆ. ಅಂತಿಮವಾಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದು ಮತ ಎಣಿಕೆ ಕೇಂದ್ರಕ್ಕೆ ನಿಯೋಜನೆಯಾಗುತ್ತದೆ. ಇದೆಲ್ಲವೂ ಆನ್‌ಲೈನ್‌ನಲ್ಲೇ ಹಂತಹಂತವಾಗಿ ನಡೆದು ಅಂತಿಮ ಹಂತದಲ್ಲಿ ಸಿಬ್ಬಂದಿಗೆ ಕೆಲಸ ನಿರ್ವಹಿಸುವ ಸ್ಥಳ ತಿಳಿಸಲಾಗುತ್ತದೆ.


ಎಣಿಕೆ ವ್ಯವಸ್ಥೆ ಹೇಗೆ?


ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 08  ವಿಧಾನಸಭಾ ಕ್ಷೇತ್ರ
224 ಕ್ಷೇತ್ರಕ್ಕೆ ತಲಾ ಒಂದು ಹಾಲ್

54,264 ಕಂಟ್ರೋಲ್ ಯೂನಿಟ್

75357 ಬ್ಯಾಲೆಟ್ ಯೂನಿಟ್


ಮತದಾನಕ್ಕೆ ಬಳಸಿದ ಇವುಗಳನ್ನು ಹಾಲ್‌ನಲ್ಲಿ ಸಕಲ ಭದ್ರತೆಯೊಂದಿಗೆ ಎಣಿಕೆಗೆ ಸಿದ್ಧಪಡಿಸಲಾಗುತ್ತದೆ.
14
ಒಂದು ಹಾಲ್‌ನಲ್ಲಿ ಇಷ್ಟು ಮತ ಎಣಿಕೆ ಟೇಬಲ್, ಕೆಲವೆಡೆ ಟೇಬಲ್‌ಗಳ ಸಂಖ್ಯೆ ಹೆಚ್ಚು ಕಡಿಮೆ ಕೂಡ ಇರಬಹುದು.
10,000
ಪ್ರತಿ ಟೇಬಲ್‌ಗೆ 3 ರಂತೆ ಒಟ್ಟು ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿ
3000
ಸಹಾಯಕ ಸೇವೆಗೆ ನಿಯೋಜಿತ ಸಿಬ್ಬಂದಿ
6000
ಭದ್ರತೆಗೆ ನಿಯೋಜನೆಯಾದ ಕೇಂದ್ರ ಸಶಸ್ತ್ರ ಮೀಸಲು ಪಡೆ, ರಾಜ್ಯ ಪೊಲೀಸ್, ಸ್ಥಳೀಯ ಪೊಲೀಸ್ ಸಿಬ್ಬಂದಿ




ಈ ಬಾರಿ ಆಕ್ಯಿಲರಿ ಡಿಸ್‌ಪ್ಲೇ ಇರುತ್ತೆ
ಈ ಬಾರಿ ಪ್ರಿಂಟರ್ ಆಕ್ಯಿಲರಿ ಡಿಸ್‌ಪ್ಲೇ ಯೂನಿಟ್ ಬಳಸಲಾಗುತ್ತಿದೆ. ಅಂದರೆ, ಮತಗಳನ್ನು ಎಣಿಸುವಾಗ ಯಂತ್ರದಲ್ಲಿ ಮಾಹಿತಿ ಸರಿಯಾಗಿ ಕಾಣಿಸದಿದ್ದರೆ, ಲೆಕ್ಕಾಚಾರ ಕೈ ತಪ್ಪಬಾರದು ಎಂಬುದಕ್ಕೆ ಕಂಟ್ರೋಲ್ ಯೂನಿಟ್‌ಗೆ ಪ್ರತ್ಯೇಕ ಉಪಕರಣ ಜೋಡಿಸಲಾಗುತ್ತಿದೆ. ಅದೇ ಪ್ರಿಂಟರ್ ಆಕ್ಯಿಲರಿ ಡಿಸ್‌ಪ್ಲೇ ಯೂನಿಟ್. ಇದರಿಂದ ಎಣಿಕೆ ಇನ್ನಷ್ಟು ಸ್ಪಷ್ಟ ಹಾಗೂ ನಿಖರವಾಗಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸ್‌ಪ್ಲೇ ಸಮಸ್ಯೆ ಸಾಮಾನ್ಯ 2014ಕ್ಕೂ ಹಿಂದೆ ಬಳಸಿದ್ದ ಮತಯಂತ್ರಗಳಲ್ಲಿ ಇಲ್ಲ. ಆದರೆ ಇತ್ತೀಚಿನ ಹೊಸ ಯಂತ್ರಗಳಲ್ಲಿ ಡಿಸ್‌ಪ್ಲೇ ಸಮಸ್ಯೆ ಕಾಡುವ ಆತಂಕವಿದೆ.


ಮತ ಎಣಿಕೆ ಸಿಬ್ಬಂದಿಗೆ ಮೂರು ಹಂತಗಳಲ್ಲಿ ಸ್ಥಳ ನಿಯೋಜನೆ ಮಾಡುತ್ತೇವೆ. ಆದರೆ ಕೊನೆ ಘಳಿಗೆ ವರೆಗೂ ಸ್ಥಳ ಮತ್ತು ಟೇಬಲ್‌ಗಳ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡುವುದಿಲ್ಲ. ಇಂಥ ಪ್ರಯೋಗ ಇದೇ ಪ್ರಥಮ.
 ಅನಿಲ್‌ಕುಮಾರ್ ಝಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ

-ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement