ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭಾರತಕ್ಕೆ ಗುಜರಾತ್ ಮೋದಿರಿ

* ರಾಜೀವ್ ಹಾದಿಯಲ್ಲಿ ಸದೃಢ ಮೋದಿ * ಮೋದಿಯ ಬಿಜೆಪಿಗೆ 281, ಎನ್‌ಡಿಎಗೆ 339 ಸ್ಥಾನ...

Vishwanath S
Updated On : 17 May 2014, 3:51 am

* ರಾಜೀವ್ ಹಾದಿಯಲ್ಲಿ ಸದೃಢ ಮೋದಿ
* ಮೋದಿಯ ಬಿಜೆಪಿಗೆ 281, ಎನ್‌ಡಿಎಗೆ 339 ಸ್ಥಾನ
* ಮೂರು ದಶಕಗಳ ನಂತರ ಮೊದಲ ಬಾರಿಗೆ ರಾಷ್ಟ್ರದಲ್ಲಿ ಏಕ ಪಕ್ಷದ ಸರ್ಕಾರ
*  ಫಲ ನೀಡಿದ ಸುಸ್ಥಿರ ಅಭಿವೃದ್ಧಿ, ಸುಭದ್ರ ಸರ್ಕಾರದ ಮೋದಿ ಭರವಸೆ 
* 285 ಸ್ಥಾನ ಪಡೆದಿರುವ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಮರ್ಥ
* ರಾಷ್ಟ್ರದಲ್ಲಿ ಕೊನೆಯಾದ ಮೂರು ದಶಕಗಳ 'ಸಮ್ಮಿಶ್ರ ಸರ್ಕಾರ ಯುಗ'
* ಉತ್ತರ ಪ್ರದೇಶ, ಮಧ್ಯಪ್ರದೇಶದ ಮಹತ್ವದ ಕೊಡುಗೆ
* ರೈಸಿನಾ ಹಿಲ್‌ನತ್ತ ಬಿಜೆಪಿ ದಾಪುಗಾಲು
* ರಾಜಸ್ಥಾನ, ಗುಜರಾತ್, ದೆಹಲಿ, ಹಿಮಾಚಲ ಪ್ರದೇಶ, ಗೋವಾ, ಉತ್ತರಾಖಂಡ್ ಬಿಜೆಪಿ ಕ್ಲೀನ್ ಸ್ವೀಪ್
*  ಹರ್ಯಾಣ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರದಲ್ಲೂ ಉತ್ತಮ ಸಾಧನೆ.
* ಮೊದಲ ಬಾರಿಗೆ ಡಬಲ್ ಡಿಜಿಟ್‌ಗೆ ಇಳಿದ ಕಾಂಗ್ರೆಸ್
* ತತ್ತರಿಸಿ ಹೋದ ಆಡಳಿತಾರೂಢ ಯುಪಿಎ
*  ಒಂದೂಕಾಲು ಶತಮಾನ ಇತಿಹಾಸದ ಪಕ್ಷ ಮೂಲೆಗುಂಪು
*  ಕೈ ಪಕ್ಷಕ್ಕೆ ಕೇವಲ 46 ಸ್ಥಾನ, ಮಿತ್ರರೂ ಸೇರಿದ್ರೆ ಮಾತ್ರ 60 
* 16ನೇ ಲೋಕಸಭೆಯಲ್ಲಿ ಅಧಿಕೃತ ಲೋಕಸಭಾ ನಾಯಕನೇ ಇಲ್ಲ 
* ಕಾಂಗ್ರೆಸ್‌ಗಿಂತ ಇತರೆ ಪಕ್ಷಗಳಿಗೇ ಹೆಚ್ಚು ಸ್ಥಾನ
* ನರೇಂದ್ರ ಮೋದಿ ಅಬ್ಬರಕ್ಕೆ ತರಗೆಲಗಳಂತೆ ಉದುರಿ ಹೋದ ಪ್ರಾದೇಶಿಕ ಪಕ್ಷಗಳು
* ನೆಲೆ ಕಳೆದುಕೊಂಡ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಜೆಡಿಯು ಸೇರಿ ಪ್ರಾದೇಶಿಕ ಪಕ್ಷಗಳು
* ಪಂಜಾಬ್ ಬಿಟ್ಟರೆ ಆಪ್ ಸದ್ದೇ ಇಲ್ಲ, ಕೇಜ್ರಿ ನಿಶ್ಯಬ್ಧ
*  ಉತ್ತರ ಪ್ರದೇಶದಲ್ಲಿ ಸಂಪೂರ್ಣ ಕುಟುಂಬ ರಾಜಕಾರಣ!
*  ಕಾಂಗ್ರೆಸ್‌ನಲ್ಲಿ ಗಾಂಧಿಮಯ, ಎಸ್‌ಪಿಯಲ್ಲಿ ಮುಲಾಯಂಮಯ
* ಮೋದಿ ವಿರೋಧಿ ನಿತೀಶ್ ಪಕ್ಷ ನಿರ್ನಾಮ
* ಬಿಹಾರದಲ್ಲಿ ಲಾಲು ಪತ್ನಿ, ಪುತ್ರಿಗೆ ಒಲಿಯದ ಜಯ
* ಆಪ್‌ಗಿಂತ ಹೆಚ್ಚು ಮತ (ಶೇ.0.4) ನೋಟಾಗೆ, ರಾಜ್ಯದ ಉತ್ತರ ಕನ್ನಡದಲ್ಲಿ ಅತಿ ಹೆಚ್ಚು(16,277) ನೋಟಾ ದಾಖಲು
* ಸರಕಾರಕ್ಕೆ ಜಯಾ, ಮಮತಾ ಮಾಯಾ ಬೆಂಬಲ ಬೇಕಿಲ್ಲ, ಮೊದಲ ಬಾರಿಗೆ ತಮಿಳುನಾಡಿನ ರಾಜಕೀಯ ಪಕ್ಷಗಳಿಲ್ಲದ ಸರಕಾರ

ಮೇ 2ರಂದು ಪ್ರಮಾಣ ವಚನ
ಕಾಂಗ್ರೆಸ್‌ನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಭಾನುವಾರ ಮಧ್ಯಾಹ್ನ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಿಂಗ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಮೋದಿ ಅವರು ಮೇ 21ರಂದು ದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ಪೀಕರಿಸಲಿದ್ದಾರೆ.

ಮೋದಿ ಗೆಲವಿಗೆ 5 ಕಾರಣಗಳು
1. ಕುಸಿದ ಆರ್ಥಿಕತೆ
2. ಯುಪಿಎ ಭ್ರಷ್ಟಾಚಾರ
3. ನಿರ್ಣಾಯಕ ಯುವಜನತೆ
4. ತಂತ್ರಜ್ಞಾನಪ್ರಿಯತೆ
5. ಮೂಲಸೌಲಭ್ಯ

ಎಲ್ಲವೂ ಟೀಂ ಮೋದಿ ನಿಯಂತ್ರಣದಲ್ಲಿ
ಮೋದಿ ಅಲೆ ಎಬ್ಬಿಸಿದ್ದೂ ಅಲ್ಲದೆ ಅದನ್ನು ಕೊನೆಯವರೆಗೂ ಜೀವಂತವಾಗಿಟ್ಟಿದ್ದು ಮೋದಿ ಟೀಂ. ಈ ತಂಡದಲ್ಲಿರುವವರು ನಾಲ್ಕೇ ಮಂದಿ. ಆಪ್ತ ಅಮಿತ್ ಶಾ, ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್, ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕ ಅರುಣ್ ಜೇಟ್ಲಿ. ಪ್ರಮುಖ ತೀರ್ಮಾನ, ತಂತ್ರ ಹೆಣೆಯುವುದು ಇದೇ ತಂಡ. ಈಗಲೂ ಅಷ್ಟೆ, ಮೋದಿ ಸಂಪುಟ ನಿರ್ಧರಿಸುವುದೂ ಈ ತಂಡವೇ. ಇದಲ್ಲದೇ ರಾಜಕೀಯೇತರ ತಂಡವಿದೆ. 'ಮೋದಿ ಕುರ್ತಾ' ಜನಪ್ರಿಯಗೊಳಿಸಿದ ಬಿಪಿನ್ ಚವಾಣ್ ಮೋದಿ ದಿರಿಸಿನ ಬಗ್ಗೆ ಗಮನ ನೀಡುತ್ತಾರೆ. ಬಿಜೆಪಿ ರಾಷ್ಟ್ರೀಯ ಖಜಾಂಚಿ ಪಿಯೂಷ್ ಘೋಷ್ ಸಾಮಾಜಿಕ ಜಾಲತಾಣಗಳ ನಿರ್ವಹಣೆ. ಹಿರೇನ್ ಜೋಶಿಗೆ ಮಾಧ್ಯಮ ಅಭಿಯಾನದ ನೇತೃತ್ವ. ಮೋದಿಯವರ ಪ್ರಧಾನ ಕಾರ್ಯದರ್ಶಿ ಕೆ.ಕೈಲಾಶ್‌ನಾಥ್ ಸಮನ್ವಯದ ಜವಾಬ್ದಾರಿ ನಿರ್ವಹಿಸುತ್ತಾರೆ.

ರಾಜ್ಯದಿಂದ ಯಾರು ಮೋದಿ ಸಂಪುಟಕ್ಕೆ ರೇಸ್‌ನಲ್ಲಿರುವ ಪ್ರಮುಖರು
ಯಡಿಯೂರಪ್ಪ
ಅನಂತಕುಮಾರ್
ಡಿ.ವಿ. ಸದಾನಂದಗೌಡ
ಪ್ರಹ್ಲಾದ್ ಜೋಶಿ
ರಮೇಶ್ ಜಿಗಜಿಣಗಿ
ರಾಜ್ಯ ಸಚಿವ ಸ್ಥಾನದ ನಿರೀಕ್ಷೆ
ಅನಂತಕುಮಾರ ಹೆಗಡೆ
ನಳಿನ್ ಕುಮಾರ್
ಜಿ.ಎಂ. ಸಿದ್ದೇಶ್
ಪ್ರತಾಪ್ ಸಿಂಹ

ಜಯ ಭಾರತ
ಒಬ್ಬ ಅಭ್ಯರ್ಥಿಯಾಗಿ ನನಗೆ ಎರಡು ವಿಚಾರಗಳು ಅನುಭವಕ್ಕೆ ಬಂದವು. ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ನಾನು ನಿಮಗೆ 50 ನಿಮಿಷಗಳನ್ನಷ್ಟೇ ನೀಡಲು ಶಕ್ತನಾದೆ. ಆದರೆ ನೀವು ನನಗೆ 5,70,000 ಮತಗಳನ್ನು ನೀಡಿದಿರಿ. ವಾರಾಣಸಿಯಲ್ಲಿ ನನ್ನ ಚಿಂತನೆಗಳನ್ನು ಹೊರಹಾಕಲು ಅವಕಾಶವೂ ಸಿಗಲಿಲ್ಲ. ಆದರೂ ಅಲ್ಲಿನ ಜನ ನನ್ನನ್ನು ಬೆಂಬಲಿಸಿದರು. ಈ ಎರಡೂ ಘಟನೆಗಳನ್ನು ನಾನು ಮರೆಯಲಾರೆ.
- ನರೇಂದ್ರ ಮೋದಿ

ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ. ಬರುವ ಸರ್ಕಾರ ಏಕತೆ, ದೇಶದ ಹಿತದ ಜತೆ ರಾಜಿ ಮಾಡಿಕೊಳ್ಳದಿರಲಿ. ಪಕ್ಷದ ಅಧ್ಯಕ್ಷೆಯಾಗಿ ಕಾಂಗ್ರೆಸ್ ಸೋಲಿನ ಹೊಣೆ ಹೊರುತ್ತೇನೆ. - ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

ದೇಶ ಯಾವತ್ತೂ ಇಂತಹ ಐತಿಹಾಸಿಕ ಜಯವನ್ನು ಕಂಡಿಲ್ಲ. ಭ್ರಷ್ಟಾಚಾರ, ದುರಾಡಳಿತ, ವಂಶಪರಂಪರೆ ಆಡಳಿತದ ವಿರುದ್ಧ ಜನ ಮತ ಹಾಕಿದ್ದಾರೆ.
- ಎಲ್.ಕೆ. ಆಡ್ವಾಣಿ, ಬಿಜೆಪಿ ಹಿರಿಯ ನಾಯಕ

ಇದು ಬಿಜೆಪಿಯ ನೀತಿ, ನಿಯತ್ತು ಮತ್ತು ನೇತೃತ್ವಕ್ಕೆ ಸಂದ ಜನಾದೇಶ. ಇದು ದೇಶದ ಹೊಸ ಯಶಸ್ಸಿನ ಕಥೆಗೆ ಮುನ್ನುಡಿ. ದೇಶವನ್ನು ಮೋದಿ ಸಮರ್ಥವಾಗಿ ಮುನ್ನಡೆಸಬಲ್ಲರು.
- ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ

ಜಾತಿ, ಮತ, ಸಮುದಾಯಗಳ ಪರಿಧಿಗಳನ್ನು ಮೀರಿ ಮೋದಿಯವರ ಉತ್ತಮ ಆಡಳಿತ, ಅಭಿವೃದ್ಧಿ ಭರವಸೆಗೆ ಭಾರತೀಯರು ಮುಕ್ತ ಹೃದಯದಿಂದ ಬೆಂಬಲಿಸಿದ್ದಾರೆ. ಯಾರೂ ಎದುರಿಸದಷ್ಟು ವಿಮರ್ಶೆ, ಟೀಕೆ ಎದುರಿಸಿ ಮೋದಿ ಜಯಶಾಲಿಯಾಗಿದ್ದಾರೆ. ಈಗ  ಅವರಿಗೆ ತಮ್ಮ ಆಯ್ಕೆಯ ಸಚಿವ ಸಂಪುಟ ರಚಿಸುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರೆಯಬೇಕಿದೆ.
- ರಾಜೀವ್ ಚಂದ್ರಶೇಖರ್, ರಾಜ್ಯಸಭೆ ಸದಸ್ಯ

ಜನ ಬದಲಾವಣೆ ಬಯಸಿ ಮೋದಿ ನಾಯಕತ್ವವನ್ನು ಒಪ್ಪಿರಬಹುದು. ಕಾಂಗ್ರೆಸ್‌ಗೆ ನಿರೀಕ್ಷಿತ ಗೆಲವು ದೊರಕದೇ ಇರುವುದು ಪಕ್ಷದ ವಿರುದ್ಧದ ಜನಾದೇಶವಲ್ಲ. ಹಾಗಾಗಿ ನಾನು ರಾಜಿನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಬ್ ಕಾ ವಿಕಾಸ್...
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನನ್ನ ಧ್ಯೇಯ. ದೇಶ ಮುನ್ನಡೆಸುವಾಗ ಎಲ್ಲರನ್ನೂ ಜತೆಗೆ ಕರೆದೊಯ್ಯುವ ಹೊಣೆ ನನ್ನ ಮೇಲಿದೆ..! ಬಿಜೆಪಿ ಐತಿಹಾಸಿಕ ಗೆಲವಿನ ಹಿನ್ನೆಲೆಯಲ್ಲಿ ಮೋದಿ ವಡೋದರಾದಲ್ಲಿ ನಡೆಸಿದ ರ್ಯಾಲಿಯಲ್ಲಿ ಹೇಳಿದ್ದು ಹೀಗೆ. ನನ್ನ ಸರ್ಕಾರ ಯಾವುದೇ ಒಂದು ಪಕ್ಷ, ವ್ಯಕ್ತಿಗೆ ಸೇರಿದ್ದಲ್ಲ. ಅದು ದೇಶದ ಎಲ್ಲ ಜನರ ಸರ್ಕಾರ. ಪ್ರಜಾಪ್ರಭುತ್ವದಲ್ಲಿ ಯಾರೂ ವೈರಿಗಳಿಲ್ಲ. ಇದ್ದರೆ ಪ್ರತಿಸ್ಪರ್ಧಿಗಳು ಮಾತ್ರ. ಪ್ರಜಾಪ್ರಭುತ್ವದ ಸ್ಪರ್ಧೆಗಳು ಚುನಾವಣೆಗಳೊಂದಿಗೆ ಅಂತ್ಯಗೊಳ್ಳುತ್ತವೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement