ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮನೆಮನಗಳಲ್ಲಿ ನೆಲೆನಿಂತ ಮಹಾನಾಯಕ

ಸರ್ಕಾರವು ಜನರಿಗೆ ಸೇರಿದ್ದು. ಅದು...

Vishwanath S
Updated On : 17 May 2014, 1:07 am

ನರೇಂದ್ರ ಮೋದಿ
Narendra Modi  @narendramodi
ಪ್ರಧಾನಮಂತ್ರಿ
ಭಾರತ ಸರ್ಕಾರ
ಗುಜರಾತ್‌ನಲ್ಲಿ ನಾಲ್ಕು ಬಾರಿ ಸಿಎಂ
ವಾದ್ನಾಗರ, ಗುಜರಾತ್
ಪಕ್ಷ - ಬಿಜೆಪಿ

ಸರ್ಕಾರವು ಜನರಿಗೆ ಸೇರಿದ್ದು. ಅದು ಯಾವುದೇ ಕುಟುಂಬ ಅಥವಾ ವಿಶೇಷ ಗುಂಪಿನ ಸೊತ್ತಲ್ಲ. ನನ್ನಷ್ಟು ಪರಿಶ್ರಮ ವಹಿಸಿ ಕೆಲಸ ಮಾಡುವವರು ದೇಶದಲ್ಲಿ ಯಾರಾದರೂ ಇದ್ದಾರಾ? ಮುಂದಿನ ದಿನಗಳಲ್ಲಿ ದೇಶವು ನನ್ನಂತಹ ವ್ಯಕ್ತಿಗಳನ್ನು ಬಯಸುತ್ತದೆ.           
- ನರೇಂದ್ರ ಮೋದಿ

ಪ್ರಧಾನಿ ಮೋದಿಪ್ರಧಾನಿ
ಆಡ್ವಾಣಿ ಮತ್ತು ಪ್ರಭಾರ ಪ್ರಧಾನಿ ಮೋದಿ
2014ರ ಲೋಕಸಭಾ ಚುನಾವಣೆ
ಮೋದಿ ವಿರುದ್ಧ ನಿತೀಶ್ ನೇತೃತ್ವದಲ್ಲಿ ತೃತೀಯ ರಂಗ ಪ್ರಸ್ತಾಪ
ಮರುದಿನವೇ ನಿರ್ಧಾರ ವಾಪಸ್ ಪಡೆದ ಆಡ್ವಾಣಿ
ಬಿಜೆಪಿಯ ಎಲ್ಲಾ ಹುದ್ದೆಗಳ ತ್ಯಜಿಸಿದ ಆಡ್ವಾಣಿ
2014 ಲೋಕಸಭಾ ಚುನಾವಣೆಗಾಗಿ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ನೇಮಕ.
2012 ಸತತ 4ನೇ ಬಾರಿಗೆ ಸಿಎಂ ಪದವಿಗೇರಿದ ನರೇಂದ್ರ ಮೋದಿ
2013 ಜನವರಿಮೋದಿಯನ್ನು ಮಹಾತ್ಮ ಗಾಂಧಿಗೆ ಹೋಲಿಕೆ ಮಾಡಿದ ಅನಿಲ್ ಅಂಬಾನಿ
2013 ಫೆಬ್ರವರಿ ಇಂಗ್ಲೆಂಡ್ ಪ್ರತಿಭಟನೆಯಿಂದ ಮೋದಿ ನಿಷೇಧ ವಾಪಸ್ ಪಡೆದ ಐರೋಪ್ಯ ಒಕ್ಕೂಟ.
2013 ವಾರ್ಟನ್ ಇಂಡಿಯಾ ಎಕಾನಾಮಿಕ್ ಫೋರಮ್‌ನಿಂದ ನೀಡಿದ್ದ ಆಹ್ವಾನ ವಾಪಸ್.
2013 ಗುಜರಾತ್‌ನ 6 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲವು.
ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೊಟ್ಟೆನೋವಿನ ಕಾರಣ ಹೇಳಿ ಗೈರಾದ ಎಲ್.ಕೆ. ಆಡ್ವಾಣಿ.
2012 ಮೋದಿ ನಿಷೇಧವನ್ನು ರದ್ದು ಮಾಡಿದ ಇಂಗ್ಲೆಂಡ್
2012 ಅಕ್ಟೋಬರ್‌ನಲ್ಲಿ ಟ್ವೀಟರ್‌ನಲ್ಲಿ 10 ಲಕ್ಷ ಮೀರಿದ ಫಾಲೋವರ್‌ಗಳು.
2012 ಆಗಸ್ಟ್‌ನಲ್ಲಿ ಮೋದಿ ಸರ್ಕಾರದಲ್ಲಿದ್ದ ಮಾಯಾ ಕೊಡ್ನಾನಿಗೆ 28 ವರ್ಷಗಳ ಜೈಲುಶಿಕ್ಷೆ
ಮಿತ್ರ ಕೇಶುಭಾಯ್ ಪಟೇಲ್ ಬಂಡಾಯ
ಏ.2012 ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ರಿಂದ ಸುಪ್ರೀಂಗೆ ಮೋದಿ ವಿರುದ್ಧ ಅಫಿಡವಿಟ್
“ಒಂದು ರುಪಾಯಿಯ ಒಂದು ಎಸ್‌ಎಂಎಸ್‌ನಿಂದ ಗುಜರಾತ್‌ಗೆ ನ್ಯಾನೋ ಫ್ಯಾಕ್ಟರಿ’.
2009 ಗುಜರಾತ್ ವೈಭ್ರಂಟ್ ಶೃಂಗದಲ್ಲಿ 8,500 ಕೋಟಿ ಮೌಲ್ಯದ ಒಪ್ಪಂದಗಳಿಗೆ ಸಹಿ.
2010 ಬಿಹಾರದಿಂದ ದೂರ ಇರುವಂತೆ ಮೋದಿಗೆ ಸೂಚಿಸಿದ ನಿತೀಶ್ ಕುಮಾರ್.
2011 ಸುಪ್ರೀಂ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡದಿಂದ ಏಪ್ರಿಲ್‌ನಲ್ಲಿ ಕ್ಲೀನ್‌ಚಿಟ್.
2011 ಸೆಪ್ಟೆಂಬರ್‌ನಲ್ಲಿ ಗುಜರಾತ್‌ನಲ್ಲಿ ಸದ್ಭಾವನಾ ಯಾತ್ರೆ ಕೈಗೊಂಡ ಮೋದಿ.
ಮುಸ್ಲಿಮರ ಸ್ಕಲ್ ಕ್ಯಾಪ್ ಧರಿಸಲು ನಿರಾಕರಣೆ, ವಿವಾದ.
2008 ಪ.ಬಂಗಾಳದಿಂದ ಹೊರದೂಡಲ್ಪಟ್ಟ ಟಾಟಾ ನ್ಯಾನೋಗೆ ಗುಜರಾತ್‌ನಲ್ಲಿ ಜಾಗ
2007 ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಜಯಭೇರಿ.
2007 ಜನವರಿಯಲ್ಲಿ ವೈಭ್ರಂಟ್ ಸಮ್ಮೇಳನ. 6.6 ಲಕ್ಷ ಕೋಟಿ ಒಪ್ಪಂದ
2005 ಮಾರ್ಚ್‌ನಲ್ಲಿ ವೀಸಾ ನಿರಾಕರಿಸಿದ ಅಮೆರಿಕ. ವಾರದ ನಂತರ ಸಿಐಐನಿಂದ ಮೋದಿ ಕ್ಷಮೆ ಕೋರಿಕೆ.
2003 ಫೆಬ್ರವರಿಯಲ್ಲಿ ಗುಜರಾತ್ ಗಲಭೆ ಸಂಬಂಧ ಉದ್ಯಮಿಗಳೊಂದಿಗೆ ಮಾತಿನ ಚಕಮಕಿ.
ಪ್ರಮಾಣವಚನಕ್ಕೆ ಆಡ್ವಾಣಿ
2002 ಫೆಬ್ರವರಿ - ಮಾರ್ಚ್‌ನಲ್ಲಿ ಸಂಭವಿಸಿದ ಗುಜರಾತ್ ಗಲಭೆಯಲ್ಲಿ ಸಾವಿರಾರು ಮಂದಿ ಸಾವು.
ರಾಜಧರ್ಮ ಪಾಲಿಸುವಂತೆ ಅಟಲ್ ಹೇಳಿಕೆ, ಸಿಎಂ ಪದವಿಯಿಂದ ವಜಾ ಚಿಂತನೆ. ಆಡ್ವಾಣಿ ಮಧ್ಯಸ್ಥಿಕೆ
2002 ಟೀಕೆಗಳಿಂದಾಗಿ ವಿಧಾನಸಭೆ ವಿಸರ್ಜನೆ. ಡಿಸೆಂಬರ್ ಚುನಾವಣೆಯಲ್ಲಿ ಭಾರಿ ಗೆಲವು.
2001 ಅಕ್ಟೋಬರ್
ಆಗಿನ ಪ್ರಧಾನಿ ವಾಜಪೇಯಿ ಅವರಿಂದ ಗುಜರಾತ್ ಸಿಎಂ ಆಗಿ ಮೋದಿ
ಆಡ್ವಾಣಿ, ಆರ್‌ಎಸ್‌ಎಸ್‌ನಿಂದ ಬೆಂಬಲ, ಮೋದಿ ಸಿಎಂ ಮಾಡಲು ನಿರ್ಧಾರ
ಗುಜರಾತ್ ಸಿಎಂ ಕೇಶುಭಾಯ್ ಪಟೇಲ್ ರಾಜಿನಾಮೆ. ಪುನರ್ವಸತಿ ಹಣ ಬಳಕೆ ಆರೋಪ.
2001 ಜ.26 ರಂದು ಭುಜ್‌ನಲ್ಲಿ ಭಾರಿ ಭೂಕಂಪ
1998 ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
1995 ಗುಜರಾತ್‌ನ ಬಿಜೆಪಿ ಹಿರಿಯ ನಾಯಕರ ಜೊತೆ ವಿರಸ, ಪಕ್ಷದಲ್ಲಿ ನಿರ್ಲಕ್ಷ್ಯ
1950 ವಾದ್ನಾನಗರದ ಕಿರಾಣಿ ವ್ಯಾಪಾರಿ ಕುಟುಂಬದಲ್ಲಿ ಸೆ.17 ರಂದು ಜನನ.
ಟೀ ಅಂಗಡಿಯಲ್ಲಿ ಕೆಲಸ ಆರ್‌ಎಸ್‌ಎಸ್‌ಗೆ ಸೇರ್ಪಡೆ
1971 ಗುಜರಾತ್‌ನ ಆರು ಜಿಲ್ಲೆಗಳ ಆರ್‌ಎಸ್‌ಎಸ್ ಪ್ರಚಾರಕ್ ಆಗಿ ನೇಮಕ
1987 ಬಿಜೆಪಿಗೆ ಸೇರ್ಪಡೆ
1990 ಎಲ್.ಕೆ. ಆಡ್ವಾಣಿ ರಥಯಾತ್ರೆಯ ರೂಪಕ
1995 ಗುಜರಾತ್‌ನಲ್ಲಿ ಮೋದಿ ತಂತ್ರದ ಮೂಲಕ ಬಿಜೆಪಿಗೆ ಗೆಲವು
1990 ಎಲ್.ಕೆ. ಆಡ್ವಾಣಿ ರಥಯಾತ್ರೆಯ ರೂಪಕ

ಮೋದಿ ನೂರಾರು ಸಾಧುಗಳನ್ನು ಬಲ್ಲರು. ವಿಹಿಂಪದಲ್ಲಿದ್ದಾಗ ಸಾಧ್ವಿ ರಿತಂಬರಾಗೆ ಗುಜರಾತಿ ಕಲಿಸಿಕೊಟ್ಟಿದ್ದಾರೆ.
ಆಪ್ತಮಿತ್ರರೆಂಬವರು ಯಾರೂ ಇಲ್ಲ. ಅವರು ಏಕಾಂಗಿ.
ಗುಜರಾತಿನ ಎಲ್ಲ ಮನೆಗಳಿಗೂ ವಿದ್ಯುತ್ ಒದಗಿಸಿಕೊಟ್ಟಿದ್ದಾರೆ ಎಂಬುದು ಸುಳ್ಳಲ್ಲ. ಆದರೆ ಇದಕ್ಕಾಗಿ ಸಾಕಷ್ಟು ಚೀನಾ ಮಾದರಿ ಕಠಿಣ ಕ್ರಮ ಕೈಗೊಂಡಿದ್ದಾರೆ.
ಎಷ್ಟೇ ಹೊತ್ತಿಗೆ ಮಲಗಲಿ, ಮುಂಜಾನೆ 5 ಗಂಟೆಗೆ ಕಡ್ಡಾಯವಾಗಿ ಎದ್ದೇಳುತ್ತಾರೆ. ಬೆಳಗ್ಗೆ 10 ಗಂಟೆಯ ಒಳಗೆ ರಾಜ್ಯ ಬಿಜೆಪಿಯ ಕೆಲಸಗಳನ್ನೆಲ್ಲ ಮುಗಿಸಿರುತ್ತಾರೆ. ಅವರು ವರ್ಕೋಹಾಲಿಕ್.
ತನ್ನ ಹೊರನೋಟದ ಬಗ್ಗೆ ಪ್ರಜ್ಞಾಪೂರ್ವಕವಾಗಿರುತ್ತಾರೆ. ಕನ್ನಡಿಯ ಮುಂದೆ ಕೊಂಚ ಹೊತ್ತು ಕಳೆಯುತ್ತಾರೆ. ಜೇಬಿನಲ್ಲಿ ಪಾಕೆಟ್ ಬಾಚಣಿಗೆ, ಕಾರಿನಲ್ಲಿ ಹತ್ತನ್ನೆರಡು ಬಗೆಯ ಅಂಗವಸ್ತ್ರಗಳು ಕಡ್ಡಾಯ.
ಜನ್ಮಕುಂಡಲಿಯ ಪ್ರಕಾರ ಮೋದಿ ಅವರಿಗೆ ಈಗ ಏಳರಾಟ ಶನಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಲವರನ್ನು ಶನಿ ಉಚ್ಛ್ರಾಯಕ್ಕೆ ಕೊಂಡೊಯ್ಯುತ್ತಾನೆ ಎನ್ನುತ್ತಾರೆ ಜ್ಯೋತಿಷ್ಯ ಬಲ್ಲವರು.


Narendra Modi  @narendramodi
ನೀವು ನನ್ನ ಮೇಲೆ ಕೆಸರು ಎರಚಿದಷ್ಟೂ, ಅರಳುವ ಕಮಲಗಳ ಸಂಖ್ಯೆ
ಹೆಚ್ಚಾಗುತ್ತದೆ.(ವಿರೋಧಿಗಳಿಗೆ ಹೇಳಿದ್ದು)
Narendra Modi  @narendramodi
ನೀವು ನನಗೆ ಶಕ್ತಿಯುತ ಸರಕಾರ ಕೊಡಿ, ನಾನು ನಿಮಗೆ ಶಕ್ತಿಯುತ
ಭಾರತವನ್ನು ಕೊಡುತ್ತೇನೆ.
Narendra Modi  @narendramodi
ಅವರ ಏಕೈಕ ಅಜೆಂಡಾ ಮೋದಿ, ನಮ್ಮ ಏಕೈಕ ಅಜೆಂಡಾ ಭಾರತ.
Narendra Modi  @narendramodi
ನಾನು ಟೀ ಮಾರಿರಬಹುದು, ಆದರೆ ದೇಶವನ್ನು ಮಾರಿಲ್ಲ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ರಾಜ್ಯದಲ್ಲೂ ಎರಡಂಕಿ ಸ್ಥಾನ ಪಡೆಯುವುದಿಲ್ಲ.

ಟೀವಾಲಾ ನರೇಂದ್ರನಿಂದ ನಮೋವರೆಗೆ
1960ರಲ್ಲಿ ಈ 10ರ ಹರೆಯದ ಹುಡುಗ ಟೀ ಕೆಟಲ್ ಹೊರುತ್ತಿದ್ದ. 1965ರಲ್ಲಿ ಭಾರತ- ಪಾಕ್  ಯುದ್ಧ ನಡೆದಾಗ, ರೈಲ್ವೆ ಸ್ಚೇಶನ್‌ನಲ್ಲಿ ಸೈನಿಕರ ಬ್ಯಾಗ್ ಹೊತ್ತಿದ್ದ. 17ರ ಹರೆಯದಲ್ಲಿ, ನೆರೆ ಹಾವಳಿಗೀಡಾದ ಗುಜರಾತ್ ಜನತೆಯ ಹೊಣೆ ಹೊತ್ತಿದ್ದ. ಈಗ ಇಡೀ ದೇಶದ ಹೊಣೆ!
  ನರೇಂದ್ರ ದಾಮೋದರದಾಸ್ ಮೋದಿ. ಅತ್ಯಂತ ಹಿಂದುಳಿದ ಜಾತಿಯಲ್ಲಿ ಜನಿಸಿದ ಈ ವ್ಯಕ್ತಿಗೆ ಬಾಲ್ಯದಿಂದ ಸನ್ಯಾಸಿಯಾಗುವ ಕನಸು. ಶಾಲಾ ಶಿಕ್ಷಣ ಮುಗಿಸಿದ ಬಳಿಕ ಮನೆಯಿಂದ ಓಡಿಹೋಗಿ ಹಿಮಾಲಯ ಸುತ್ತಿದರು. ಕೈಯಲ್ಲಿ ಕಾಸಿಲ್ಲದೆ, ಎರಡೇ ಜತೆ ಬಟ್ಟೆಯಲ್ಲಿ ಬೆಟ್ಟಗುಡ್ಡ ಹತ್ತಿಳಿದು ಸನ್ಯಾಸಿಯಾಗುವ ಆಸೆ ಬಿಟ್ಟು, ಹಿಂದಿರುಗಿ ಅಣ್ಣನ ಜತೆ ಅಹ್ಮದಾಬಾದ್‌ನಲ್ಲಿ ಟೀ ಮಾರಿದರು.
ಧ್ಯೇಯ, ಪರಿಶ್ರಮ ಮತ್ತು ಮಹತ್ವಾಕಾಂಕ್ಷೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮೋದಿ ಉತ್ತಮ ಉದಾಹರಣೆ. ಆರೆಸ್ಸೆಸ್ ಸೇರಿದಾಗ ಅವರ ಧ್ಯೇಯ ದೇಶಸೇವೆ. ಪತ್ನಿಯನ್ನು ತೊರೆದ ಗೌತಮ ಬುದ್ಧನಾದದ್ದಕ್ಕೂ, ಪತ್ನಿಯನ್ನು ತೊರೆದ ಮೋದಿ ಪ್ರಧಾನಿಯಾದದ್ದಕ್ಕೂ ಧ್ಯೇಯದಲ್ಲಿ ಸಾಮ್ಯತೆಯಿದೆ.
1995ರ ಆಸುಪಾಸಿನಲ್ಲಿ ಈ ವ್ಯಕ್ತಿ ಯಾರ ದೇಶದ ರಾಜಕೀಯ ರಂಗದಲ್ಲೇ ಇರಲಿಲ್ಲ. ಕೆಲ ವರ್ಷಗಳ ಹಿಂದಷ್ಟೇ ಆರ್‌ಎಸ್‌ಎಸ್‌ನ  ಉನ್ನತ ಸ್ಥಾನಕ್ಕೆ ಕಾಲಿಟ್ಟಿದ್ದ ಇವರ ಸಂಘಟನಾ ಶಕ್ತಿ ಬಿಜೆಪಿಯವರಿಗೆ ಬೆರಗು ಮೂಡಿಸಿತ್ತು. ಗುಜರಾತ್ ಚುನಾವಣೆಯನ್ನು ಗೆಲ್ಲಿಸಿಕೊಟ್ಟ ಇವರ ಬುದ್ಧಿಮತ್ತೆ ಆಡ್ವಾಣಿ ಅವರಿಗೆ ಹಿಡಿಸಿತ್ತು. ಹೀಗಾಗಿಯೇ 1998ರ ಹೊತ್ತಿಗೆ ಮೋದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವಷ್ಟು ಎತ್ತರಕ್ಕೆ ಬೆಳೆದಿದ್ದರು.
ಕೇಶುಭಾಯ್ ಪಟೇಲ್ ಅವರ ವೈಫಲ್ಯ, ಮೋದಿ ದಿಕ್ಕನ್ನೇ ಬದಲಿಸಿತು ಎಂದರೆ ತಪ್ಪಾಗದು. ಭುಜ್ ಭೂಕಂಪ ಅವರನ್ನು ಮುಖ್ಯಮಂತ್ರಿ ಗಾದಿಗೆ ತಂದು ಕುಳ್ಳಿರಿಸಿತು. 2002ರ ಗುಜರಾತ್ ಗಲಭೆ, ಮೋದಿ ಅವರನ್ನು ನೈತಿಕವಾಗಿ ಪಾತಾಳಕ್ಕೇ ಇಳಿಸಿತ್ತು. ತಕ್ಷಣವೇ ವಿಧಾನಸಭೆ ವಿಸರ್ಜಿಸಿ ಹೊಸ ಜನಮತ ಪಡೆದುಕೊಂಡು ಬಂದವರು, ತದನಂತರ ಹಿಂದಿರುಗಿ ನೋಡಿಯೇ ಇಲ್ಲ. ಇದುವರೆಗೆ ಮೂರು ಬಾರಿ ಮುಖ್ಯಮಂತ್ರಿಯಾಗಿ, ಈಗ ನಾಲ್ಕನೇ ಬಾರಿಗೆ ಸಿಎಂ ಗಾದಿಯಲ್ಲಿರುವ ಮೋದಿ ಈಗ ಅಭಿವೃದ್ಧಿಗೆ ಇನ್ನೊಂದು ಹೆಸರು.

ವಿವಾದದಿಂದ  ವಿಶ್ವವಿಜೇತ
2002ರ ಗೋಧ್ರೋತ್ತರ ಹಿಂಸಾಚಾರದಿಂದಲೂ ಮೋದಿ ಅವರದ್ದು ವಿವಾದಿತ ವ್ಯಕ್ತಿತ್ವವೇ. ಗುಜರಾತ್ ಗಲಭೆಯಲ್ಲಿ ಇವರ ಪಾಲಿಲ್ಲ ಎಂಬುದನ್ನು ಉಚ್ಚ ನ್ಯಾಯಾಲಯಗಳು ಮತ್ತೆ ಮತ್ತೆ ಹೇಳಿವೆ. ಆದರೆ ವಿಪಕ್ಷಗಳು ಇದಕ್ಕೆ ಅವರನ್ನು ಬೊಟ್ಟು ಮಾಡುವುದು ಬಿಟ್ಟಿಲ್ಲ.  ಗೋಧ್ರಾ ಗಲಭೆ ಎಲ್ಲ ಮಾಧ್ಯಮಗಳಲ್ಲೂ ಅದೆಷ್ಟು ಗಂಟೆಗಳ ಕಾಲ ಚರ್ಚೆಯಾಗಿವೆಯೋ ಗೊತ್ತಿಲ್ಲ. ಪಕ್ಷದಲ್ಲಿ ಅವರು ತೆಗೆದುಕೊಂಡ ಹಲವು ನಿರ್ಧಾರಗಳು ಅವರಲ್ಲಿರುವ ಸರ್ವಾಧಿಕಾರ ಮನೋಭಾವವನ್ನು ತೋರಿಸುತ್ತವೆ. ಆದ್ದರಿಂದ ಆವರು ಅಪಾಯಕಾರಿ ಎಂಬ ವಿಶ್ಲೇಷಣೆಯ ಮಾದರಿ ರಾಜಕೀಯ ತಜ್ಞರಲ್ಲಿ ಚಾಲ್ತಿಯಲ್ಲಿದೆ.

ಅಡೆ ತಡೆ ಓಟ
2002 ಗುಜರಾತ್ ಗಲಭೆ

ಫೆ. 27, 2002ರಂದು ಹಿಂದೂ ಯಾತ್ರಿಕರನ್ನು ಸಾಗಿಸುತ್ತಿದ್ದ ರೈಲಿನ ಬೋಗಿ ಬೆಂಕಿಯಲ್‌ಲ್ಲ ಸುಟ್ಟು 60 ಮಂದಿ ಸುಟ್ಟು ಕರಕಲಾದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗುಜರಾತಿನೆಲ್ಲೆಡೆ ಕೋಮು ಗಲಭೆಗಳಾದವು. ಇದರ ಹಿಂದೆ ಮೋದಿ ಕೈವಾಡವಿದೆ ಎಂಬ ಆಪಾದನೆಗೆ ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿತು. ಈ ಪ್ರಕರಣದ ವಿಚಾರಣೆಯಲ್ಲಿ ಮೋದಿ  ದೋಷಮುಕ್ತರಾಗಿ ಹೊರ ಬಂದರು.
ಮುಸ್ಲಿಮರ ಟೋಪಿ
ಪಿರಣವಾಸ್ ದರ್ಗಾದ ಇಸ್ಲಾಂ ಧರ್ಮಗುರು ಸೈಯದ್ ಇಮಾಂ ಶಾಹಿ, ಮುಸ್ಲಿಮರ ಟೋಪಿ ನೀಡಿದರೆ, ಮೋದಿ ಅದನ್ನು ಧರಿಸಲು ನಿರಾಕರಿಸಿದ್ದರು. ಧರ್ಮ ಗುರುಗಳನ್ನು ಅವಮಾನಿಸಿದರು ಎಂದು ಮೋದಿ ಆಕ್ರೋಶಕ್ಕೆ ಗುರಿಯಾದರು.
ಸದ್ಭಾವನಾ ಮಿಷನ್
2011ರಿಂದ 2012ರಲ್ಲಿ, ಕೋಮು ಸೌಹಾರ್ದ ಕಾಪಾಡಲು ಮೋದಿ ಹಲವು ಬಾರಿ ಉಪವಾಸ ಮಾಡಿದ್ದರು. ಆದರೆ ಮೋದಿಯ ಈ ಉಪವಾಸಗಳನ್ನು ಮುಸ್ಲಿಮರ ಮನವೊಲಿಸಲು ಮಾಡಿದ ನಾಟಕ ಎಂದು ಲೇವಡಿ ಮಾಡಲಾಯಿತು.
ಬಾಲ್ಯಕಾಲ ಸಖಿ
2014ರ ಚುನಾವಣೆ ಪ್ರಚಾರ ವೇಗ ಪಡೆದುಕೊಂಡ ಬಳಿಕ, ಮೋದಿಯ ವಿವಾಹದ ಹಿನ್ನೆಲೆಯನ್ನು ಮುನ್ನೆಲೆಗೆ ತರುವ ಯತ್ನ ವಿರೋಧಿಗಳಿಂದ ನಡೆಯಿತು. ಜಶೋದಾಬೆನ್ ಎಂಬಾಕೆಯನ್ನು ಬಾಲ್ಯದಲ್ಲಿ ವಿವಾಹವಾಗಿದ್ದ ಮೋದಿ, ನಂತರ ಅವರನ್ನು ಕಡೆಗಣಿಸಿದ್ದರು ಎಂದು ಆರೋಪಿಸಲಾಯ್ತು. ಆದರೆ ಇದು ಬಾಲ್ಯವಿವಾಹ, ಜಶೋದಾಬೆನ್  ಕೂಡ ತನ್ನ ಪತಿಯ ಹಾದಿಗೆ ಅಡ್ಡ ಬರಲು ಇಚ್ಛಿಸುವುದಿಲ್ಲ ಎಂದು ಎಲ್ಲರಿಗೂ ಗೊತ್ತಾಯಿತು. ಮೋದಿ ಮಾತ್ರ ಈ ಕುರಿತು ಎಲ್ಲೂ ಚಕಾರವೆತ್ತದೆ ಘನತೆ ಕಾಪಾಡಿಕೊಂಡರು.

ತನ್ನ ಉಡುಗೆ ತೊಡುಗೆಗಳ ವಿಚಾರದಲ್ಲಿ ಚ್ಯೂಸಿ, ಅಚ್ಚುಕಟ್ಟಾಗಿರುವ ಮೋದಿ, ಅಹ್ಮದಾಬಾದ್‌ನ ಜೇಡ್ ಬ್ಲೂ ಮಳಿಗೆಯ ಗ್ರಾಹಕ.
ಮೋದಿಯವರ ಅತ್ಯಂತ ಹತ್ತಿರದ ಸಂಬಂಧಿ ತಾಯಿ ಹೀರಾಬೆನ್. ಯಾವುದೇ ಹೊಸ ಹೊಣೆ ಹೊರುವ ಮುನ್ನ ಅವರ ಆಶೀರ್ವಾದ ಕಡ್ಡಾಯವಾಗಿ ಪಡೆಯುತ್ತಾರೆ. ವಿವೇಕಾನಂದರೇ ಮಾದರಿ.
ಮೋದಿ ಸಂಪೂರ್ಣ ಸಸ್ಯಾಹಾರಿ. ಭಕ್ರಿ ಮತ್ತು ಖಿಚಡಿ ಇಷ್ಟ. ಮದ್ಯ ಸೇವಿಸುವುದಿಲ್ಲ, ಧೂಮಪಾನವೂ ಇಲ್ಲ. ನವರಾತ್ರಿಯಲ್ಲಿ 9 ದಿನವೂ ಉಪವಾಸ ಮಾಡುತ್ತಾರೆ.
ಮೋದಿ ಕವಿ ಎಂಬುದು ನಿಮಗೆ ಗೊತ್ತೆ? ಅವರು ಗುಜರಾತಿ ಭಾಷೆಯಲ್ಲಿ ಕವಿತೆ ಬರೆಯುತ್ತಾರೆ.
ಹಿಂದೆಂದೂ ಭಾರತದಲ್ಲಿ ಯಾವ ರಾಜಕಾರಣಿಯೂ ಈ ಪರಿ 'ಬ್ರಾಂಡ್‌' ಆದದ್ದಿಲ್ಲ. ಮೋದಿ ತೊಡುವ ದಿರಿಸು, ಅವರ ಭೂಷಣಗಳು, ಅವರ ನಿಲುವು , ಅವರ ಭಾಷಣದ ಶೈಲಿ ಎಲ್ಲವೂ ಕೂಡ ಜನಪ್ರಿಯ 'ಬ್ರಾಂಡ್‌' ಎನಿಸಿಕೊಂಡವು.
ಭಾರತ ಕಂಡ ಅತ್ಯಂತ 'ನೆಟ್ ಸೇವಿ' ಮುತ್ಸದ್ಧಿ. ಅವರಿಗೆ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸ್ಯಾಪ್ ಯಾವ ಮಾಧ್ಯಮವೂ ವರ್ಜ್ಯವಲ್ಲ. ಅವರು ಮತಗಟ್ಟೆಯ ಹೊರಗೆ ಕೂಡ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿವಾದ ಆಗಿತ್ತು. ಇದಕ್ಕಾಗಿಯೇ ಅವರು ಯುವಜನರಿಗೆ ಅತ್ಯಂತ ಹತ್ತಿರ.
ಅವರ ತೂಕ 84 ಕಿಲೋ, ಎದೆಯ ಸುತ್ತಳತೆ 52 ಇಂಚು. ರಾಶಿ ವೃಶ್ಚಿಕ, ನಕ್ಷತ್ರ ಅನುರಾಧ. ಮಾತಿನಲ್ಲಿ ಹಿಂದಿ ನಿರರ್ಗಳ, ಇಂಗ್ಲಿಷ್ ಕೊಂಚ ತುಟ್ಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement