ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಗೆಲವಿಗೆ 5 ಕಾರಣಗಳು

Vishwanath S
Updated On : 17 May 2014, 12:46 pm

ಆರ್ಥಿಕತೆಯ ಸೋಲು
ಕಳೆದ ದಶಕದಲ್ಲಿ ಸುಮಾರು 8ರಷ್ಟಿದ್ದ ಆರ್ಥಿಕತೆಯ ದರ ಕಳೆದ ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ 5ಕ್ಕಿಳಿದಿತ್ತು. ಚುನಾವಣೆಯ ಘೋಷಣೆಗೂ ಮೊದಲೇ ಬಿಜೆಪಿಗರು ತಳಕಚ್ಚಿದ ಎಕಾನಮಿಯ ಚಿತ್ರವನ್ನು ಜನತೆಯ ಮುಂದಿಟ್ಟು, ಅದನ್ನೇ ಪ್ರಮುಖ ವಿಚಾರವಾಗಿಸಿದರು. ಇದಕ್ಕೆ ಎದುರಾಗಿ, ಗುಜರಾತ್‌ನ ಅಭಿವೃದ್ಧಿಯನ್ನು ದೇಶದ ಮುಂದೆ ಭೂತಗನ್ನಡಿಯಲ್ಲಿ ತೋರಿಸಿದರು.

ಯುಪಿಎ ಭ್ರಷ್ಟಾಚಾರ
ಯುಪಿಎ ಆಡಳಿತದ ಸಚಿವರ ಭ್ರಷ್ಟಾಚಾರ, ಹಗರಣಗಳಿಂದ ಬೇಸತ್ತ ಜನತೆ, ಅಣ್ಣಾ ಹಾಗೂ ಕೇಜ್ರಿವಾಲ್‌ರ ಹೋರಾಟಗಳಿಂದಾಗಿ ಭ್ರಷ್ಟಾಚಾರ ವಿರೋಧಿ ಪ್ರಜ್ಞೆಯನ್ನು ಮೂಡಿಸಿಕೊಂಡಿದ್ದರು. ಅದಕ್ಷತೆಯನ್ನು ಸಹಿಸದ, ಅಭಿವೃದ್ಧಿ ಮಾದರಿಯಾಗಿ ಕಾಣಿಸಿಕೊಂಡ ಮೋದಿಯ ಸೆಳೆತಕ್ಕೊಳಗಾದರು.

ಯುವಜನತೆ
ದೇಶದ ಮತದಾರರಲ್ಲಿ ಅರ್ಧದಷ್ಟು ಯುವಜನತೆ. ಜಾತಿ, ವರ್ಗಗಳ ಆಧಾರದ ಮೇಲಿನ  ವೋಟ್ ಬ್ಯಾಂಕ್ ರಾಜಕಾರಣ ಇವರಿಗೆ ಆಗಿ ಬರದು. ಉದ್ಯೋಗಾವಕಾಶ ಇವರ ಪ್ರಮುಖ ಆದ್ಯತೆ. ಈ ಬಹುಸಂಖ್ಯಾತಯುವಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಉದ್ಯೋಗ ಕೊಡಿಸುವ ಭರವಸೆಯನ್ನೂ ಮೋದಿ ನೀಡಿದ್ದಾರೆ.

ತಂತ್ರಜ್ಞಾನ
ಮೋದಿ ಮತ್ತು ಬಿಜೆಪಿಯ ನಾಯಕರು ನೇರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಟೆಕ್ನಾಲಜಿ ಪ್ರೇಮಿಗಳಾದ ಯುವಜನಾಂಗವನ್ನು ತಲುಪಿದರು. ಚುನಾವಣೆಗೂ ವರ್ಷಗಳ ಮೊದಲಿನಿಂದಲೇ ಮೋದಿ ಫೇಸ್‌ಬುಕ್, ಟ್ವಿಟರ್ ಬಳಸುತ್ತ ಬಂದಿದ್ದಾರೆ. ವ್ಯತಿರಿಕ್ತವಾಗಿ, ರಾಹುಲ್ ಟ್ವಿಟರ್ ಬಳಸಲೂ ಹಿಂಜರಿದರು.

ಮೂಲಸೌಲಭ್ಯ
ದೇಶದ ಹಾಳಾದ ರಸ್ತೆಗಳು, ನಿರಂತರವಾಗಿ ದೊರೆಯದ ವಿದ್ಯುತ್ ಇತ್ಯಾದಿಗಳಿಂದಾಗಿ ಉದ್ಯಮಗಳು ಮಂಕಾಗಿವೆ. ಪಟ್ಟಣಗಳಲ್ಲಿ ವಾಸಿಸುವ ದೇಶದ ಮೂರನೇ ಒಂದು ಭಾಗ ಜನತೆಯೂ ಬೇಸತ್ತಿದೆ. ಮೂಲಸೌಲಭ್ಯವನ್ನು ಮೋದಿ ಆದ್ಯತೆಯಾಗಿ ಇಟ್ಟುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement