ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿಯೇ ಸಿಮಿ ಟಾರ್ಗೆಟ್?

ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ನಿಷೇಧಿತ ಉಗ್ರಗಾಮಿ ಸಂಘಟನೆ...

Vishwanath S
Updated On : 19 May 2014, 1:21 am

ಭೋಪಾಲ್:  ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ನಿಷೇಧಿತ ಉಗ್ರಗಾಮಿ ಸಂಘಟನೆ ಸಿಮಿಯ ಮುಂದಿನ ಟಾರ್ಗೆಟ್?
ಇಂಥದ್ದೊಂದು ಕಳವಳಕಾರಿ ಪ್ರಶ್ನೆ ಹುಟ್ಟುಹಾಕಿದ್ದು ಶಂಕಿತ ಉಗ್ರರ ವರ್ತನೆ. ಶನಿವಾರ ಭೋಪಾಲ್ ನ್ಯಾಯಾಲಯದಿಂದ ಜೈಲಿಗೆ ಕರೆದೊಯ್ಯುವಾಗ ಕೋರ್ಟ್ ಆವರಣದಲ್ಲಿಯೇ ಸಿಮಿ ನಾಯಕ ಫೈಜಲ್, 'ಅಬ್ ಮೋದಿ ಕೀ ಬಾರಿ ಹೈ' (ಈಗ ಮೋದಿ ಬಾರಿ) ಎಂದು ಘೋಷಣೆ ಕೂಗಿದ್ದಲ್ಲದೆ ವಿಜಯದ ಸಂಕೇತ ತೋರಿಸಿದ್ದ.
'ಕೇವಲ ಗಮನ ಸೆಳೆಯಲು ಇಂಥ ಘೋಷಣೆ ಕೂಗಿದ್ದ' ಎಂದು ಪೊಲೀಸರು ತೇಪೆ ಸಾರಿಸುತ್ತಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಪೂರ್ವಗ್ರಹ ಹೊಂದಿರುವ, ಕೋಮುಭಾವನೆ ಕೆರಳಿಸುವ ಘೋಷಣೆ ಕೂಗಿದ, ಸುಳ್ಳು ಆರೋಪ ಮಾಡಿದ ಪ್ರಕರಣಗಳನ್ನು ಪೊಲೀಸರು ಫೈಜಲ್ ಮತ್ತು ಬೆಂಬಲಿಗರ ವಿರುದ್ಧ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement