ಮೋದಿ ಅಭಿನಂದಿಸಿದ ಕರುಣಾ, ನಿತೀಶ್
ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಮುನಿಸಿಕೊಂಡು...
ನವದೆಹಲಿ: ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಮುನಿಸಿಕೊಂಡು ಬಿಜೆಪಿ ಸಖ್ಯ ತೊರೆದಿರುವ ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಬುಧವಾರ ಮೋದಿಯವರನ್ನು ಅಭಿನಂದಿಸಿದ್ದಾರೆ. 'ಬಿಜೆಪಿಗೆ ಪ್ರಚಂಡ ಗೆಲುವು ತಂದುಕೊಟ್ಟ ಮೋದಿಯವರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ಶುಭ ಹಾರೈಸುತ್ತೇನೆ' ಎಂದು ಜೆಡಿಯು ಮುಖಂಡ ಹೇಳಿದ್ದಾರೆ.
'ಮೋದಿಯವರಿಗೆ ಕರೆ ಮಾಡಿ ಅಭಿನಂದಿಸುವ ಧೈರ್ಯ ಈಗಲೂ ನಿತೀಶ್‌ಗೆ ಇಲ್ಲದಿದ್ದರೆ ಫೇಸ್‌ಬುಕ್ ಮೂಲಕ ಅಭಿನಂದಿಸಲಿ' ಎಂದು ಬಿಹಾರ ಬಿಜೆಪಿ ಮುಖಂಡ ಸುಶೀಲ್‌ಕುಮಾರ್ ಟ್ವೀಟಿಸಿದ ಬಳಿಕ ನಿತೀಶ್ ಮೋದಿಯವರನ್ನು ಅಭಿನಂದಿಸಿದ್ದಾರೆ.
ಕರುಣಾನಿಧಿ ಶ್ಲಾಘನೆ: 'ಜನ್ಮಜಾತ ಬುದ್ಧಿವಂತಿಕೆ ಮತ್ತು ಪರಿಶ್ರಮದ ಫಲವಾಗಿ ನೀವು ಉದಾತ್ತ ನಾಯಕನಾಗಿ ಉದಯಿಸಿದ್ದೀರಿ' ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಬುಧವಾರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಶ್ಲಾಘಿಸಿದ್ದಾರೆ. 'ಬಡವರು, ಯುವಕರು, ಮಹಿಳೆಯರ ಅಭಿವೃದ್ಧಿಗೆ ನಿಮ್ಮ ಸರ್ಕಾರ ಶ್ರಮಿಸಲಿದೆ ಎಂದು ಮಂಗಳವಾರ ಹೇಳಿದ್ದೀರಿ. ನಿಮ್ಮ ಬಗ್ಗೆ ಜನರ ನಿರೀಕ್ಷೆಯೂ ದೊಡ್ಡದಿದೆ' ಎಂದು ಕರುಣಾನಿಧಿ ಹೇಳಿದ್ದಾರೆ.