ರಾಗಾ ವಿರುದ್ಧ ಅಂತರ್ಯುದ್ಧ
ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ನಲ್ಲಿ ಆಂತರಿಕ ಸಮರ ಆರಂಭವಾಗಿದೆ...
ನವದೆಹಲಿ: ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ನಲ್ಲಿ ಆಂತರಿಕ ಸಮರ ಆರಂಭವಾಗಿದೆ. ಮಾತ್ರವಲ್ಲದೆ ಪರಾಭವದ ಹೊಣೆಯನ್ನು ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕಗಳಿಗೆ ವರ್ಗಾಯಿಸುವ ಯತ್ನವೂ ನಡೆದಿದೆ. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದಿದ್ದ ಸಿಡಬ್ಲ್ಯೂಸಿ ಸಭೆಯಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ರಕ್ಷಿಸಿ, ವೈಫಲ್ಯಕ್ಕೆ ಒಟ್ಟಾರೆ ನಾಯಕತ್ವವೇ ಹೊಣೆ ಎಂದು ಬಿಂಬಿಸಲಾಗಿತ್ತು.