ಗಣರಾಜ್ಯ ದಿನಕ್ಕಿಂತಲೂ ಹೆಚ್ಚು ಭದ್ರತೆ
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಮೂರು ಹಂತಗಳ ಭದ್ರತೆಯಡಿ ನಡೆಯಲಿದೆ. ಗಣರಾಜ್ಯೋತ್ಸವದಂದು ಕಲ್ಪಿಸಲಾಗುವ ಭದ್ರತೆಗಿಂತಲೂ ಹೆಚ್ಚಿನ ಭದ್ರತೆಯಲ್ಲಿ ಮೋದಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಸಮಾರಂಭ ಆರಂಭವಾಗುವ 4 ಗಂಟೆಗಳ ಮುನ್ನವೇ ರಾಷ್ಟ್ರಪತಿ ಭವನದ ಸುತ್ತಲಿನ ಎಲ್ಲ ರಸ್ತೆಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಅಲ್ಲಿರುವ ಎಲ್ಲ ಕಚೇರಿಗಳನ್ನೂ ಮುಚ್ಚಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆ ಮತ್ತು ಭೂಸೇನೆಯೂ ಭದ್ರತೆಯಲ್ಲಿ ಕೈಜೋಡಿಸಲಿವೆ.