ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚಿಕನ್ ಟಿಕ್ಕಾಗೆ ಕೊಕ್, ಖಮನ್-ಡೋಕ್ಲಾ ಪಿಕ್

Mainashree
Updated On : 23 May 2014, 10:31 am

ಮೇ 26ರಂದು ನಡೆಯಲಿರುವ ಮೋದಿ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಚಿಕನ್ ಟಿಕ್ಕಾ ಔಟ್ ಆಗಿದೆ, ಅದರ ಬದಲಾಗಿ ಖಮನ್-ಡೋಕ್ಲಾಗೆ ಜಾಗ ಕಲ್ಪಿಸಲಾಗಿದೆ. ಅರ್ಥ ಆಗಲಿಲ್ಲವೇ? ಈ ಬಾರಿ ಸಮಾರಂಭದಲ್ಲಿ ಮಾಂಸಾಹಾರಿ ಖಾದ್ಯಗಳ ಬದಲಾಗಿ ಸಂಪೂರ್ಣ ಸಸ್ಯಾಹಾರಿ ಖಾದ್ಯಗಳನ್ನೇ ನೀಡಲು ನಿರ್ಧರಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಗುಜರಾತ್‌ನ ತಿನಿಸುಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ಇತ್ತೀಚೆಗಷ್ಟೇ ಮೋದಿ ಅವರು, 'ಪ್ರಧಾನಿ ಕಾರ್ಯಾಲಯದಲ್ಲಿ ಗುಜರಾತಿ ಭಾಷೆ ಕೇಳಬೇಕು. ಖಮನ್-ಡೋಕ್ಲಾ ಖಾದ್ಯ ಇರಬೇಕು' ಎಂದಿದ್ದರು. ಹಾಗಾಗಿ ಈ ಬಾರಿ ಖಾದ್ಯಗಳಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement