ಬಿಮ್ಸ್‌ಲ್ಲಿ ಮತ್ತೆ 7 ಪಿಜಿ ಕೋರ್ಸ್
ಬೆಳಗಾವಿ: ಉನ್ನತ ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಏಳು ಸ್ನಾತಕೋತ್ತರ ಕೋರ್ಸ್‌ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಿದೆ.
ದೇಶದ ಟಾಪ್ ಟೆನ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಒಂದಾಗಿರುವ ಬಿಮ್ಸ್‌ನಲ್ಲಿ 2015-16 ರಿಂದಲೇ ಸ್ನಾತಕೋತ್ತರ ಸರ್ಜರಿ, ಗೈನೋಕಾಲಜಿ, ಇಎನ್‌ಟಿ, ಆಥೋಲ್ಮೋಲಾಜಿ, ಸೈಕ್ಯಾಟ್ರಿಕ್, ಆರ್ಥೋಪೆಡಿಕ್ ಮತ್ತು ರೇಡಿಯೋಲಾಜಿ ಕೋರ್ಸ್‌ಗಳು ಆರಂಭಗೊಳ್ಳಲಿವೆ. ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯರ ತಂಡ ಶೀಘ್ರ ಬಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಯ ಸೌಲಭ್ಯಗಳು ಹಾಗೂ ಸಿಬ್ಬಂದಿ ಕುರಿತು ಪರಿಶೀಲನೆ ನಡೆಸಲಿದೆ.
ಇದೇ ವರ್ಷದಿಂದಲೇ ಈ ಕೋರ್ಸ್‌ಗಳನ್ನು ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈ ಕೋರ್ಸ್ ಆರಂಭಿಸಲು ಬಿಮ್ಸ್ ಮತ್ತು ಅದರ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಬೇಕೇ ಬೇಕು ಎಂದು ಭಾರತೀಯ ವೈದ್ಯಕೀಯ ಮಂಡಳಿ (ಐಎಂಸಿ) ಸ್ಪಷ್ಟವಾಗಿ ಸೂಚಿಸಿರುವ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭವಾಗಲಿದೆ. ಇನ್ನೆರಡು ತಿಂಗಳಲ್ಲಿ ಸಿಟಿ ಸ್ಕ್ಯಾನ್ ಘಟಕ ಆಸ್ಪತ್ರೆಗೆ ಬರಲಿದೆ.
ಬಿಮ್ಸ್‌ನಲ್ಲಿ ಹೊಸದಾಗಿ 7 ಕೋರ್ಸ್‌ಗಳು ಆರಂಭವಾಗುತ್ತಿರುವುದರಿಂದ ಕಡು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸಾಗಲಿದೆ. ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕಾದರೆ ರು. 80 ಲಕ್ಷದಿಂದ 2 ಕೋಟಿ ವರೆಗೆ ವೆಚ್ಚಾಗುತ್ತದೆ. ರೇಡಿಯೋಲಾಜಿ ಕೋರ್ಸ್‌ಗೆ ಖಾಸಗಿ ಮಹಾವಿದ್ಯಾಲಯದಲ್ಲಿ 2 ರಿಂದ 2.5 ಕೋಟಿ ವರೆಗೆ ನೀಡಬೇಕಾಗುತ್ತದೆ. ಆದರೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕ ನೀಡಿದರೆ ಆಯ್ತು. ಇದರಿಂದ ಬಡ ಪ್ರತಿಭಾವಂತರೂ ಸಹ ಅತ್ಯುನ್ನತ ಶಿಕ್ಷಣ ಪಡೆಯುವದು ಸುಲಭವಾಗಲಿದೆ.
ಹೊಸ ಕೋರ್ಸ್‌ಗಳಿಗೆ ಅನುಮತಿ ಕೋರಿ ಭಾರತೀಯ ವೈದ್ಯಕೀಯ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಬಿಮ್ಸ್‌ನಲ್ಲಿ 10 ಸ್ನಾತಕೋತ್ತರ ಕೋರ್ಸ್‌ಗಳಿವೆ. ಬಯೋಕೆವುಸ್ಟ್ರಿ, ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕೋಲಾಜಿ, ಮೈಕ್ರೋಬಾಯೋಲಾಜಿ, ಪಿಡಿಯಾಟ್ರಿಕ್ಸ್, ಪೆಥಾಲಜಿ, ಫಾರ್ಮಾಕೋಲಾಜಿ, ಫಿಸಿಯೋಲಾಜಿ, ಸೋಶಿಯಲ್ ಆ್ಯಂಡ್ ಪ್ರಿವೆಂಟಿವ್ ಅಥವಾ ಕಮ್ಯೂನಿಟಿ ಮೆಡಿಸಿನ್ ಮತ್ತು ಅನಾಟೋಮಿ ವಿಭಾಗಗಳಿವೆ.
ಕಿಮ್ಸ್ ಪ್ರಭಾರಿ ನಿರ್ದೇಶಕ
ಪಟ್ಟಕ್ಕೆ ಇಲಾಖೆಯೇ ಹೈಜಾಕ್
ಹುಬ್ಬಳ್ಳಿ: ತೆರವಾಗಲಿರುವ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಸ್ಥಾನ ಭರ್ತಿ ವಿಷಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯೇ ಕಾನೂನು ಗಾಳಿಗೆ ತೂರಿದೆ. ಕಿಮ್ಸ್ ಹಾಲಿ ನಿರ್ದೇಶಕಿ ಡಾ. ವಸಂತಾ ಕಾಮತ್ ಮೇ 26ರಂದು ನಿವೃತ್ತಿಯಾಗಲಿದ್ದಾರೆ. ತೆರವಾಗಲಿರುವ ಸ್ಥಾನ ಭರ್ತಿಗೆ ನೇಮಕಾತಿ ಪ್ರಕ್ರಿಯೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮೂರು ತಿಂಗಳ ಮೊದಲೇ ಕೈಗೊಳ್ಳಬೇಕೆಂಬ ನಿಯಮಾವಳಿ ಇದೆ. ಇನ್ನೆರಡು ದಿನದಲ್ಲಿ ಕಾಮತ್ ನಿವೃತ್ತಿಯಾಗುತ್ತಿದ್ದರೂ ನೇಮಕಾತಿ ಪ್ರಕ್ರಿಯೆಗೆ ಇಲಾಖೆ ಇನ್ನೂ ಕೈ ಹಾಕಿಲ್ಲ. ಸರ್ಕಾರ ಮೂರು ತಿಂಗಳ ಮೊದಲು ಪತ್ರಿಕಾ ಜಾಹೀರಾತು ನೀಡಿ, ಆ ಸ್ಥಾನಕ್ಕೆ ಅರ್ಜಿ ಆಹ್ವಾನಿಸಬೇಕು. ಆಸಕ್ತರು, ಅರ್ಹರು ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಿ ಸಂದರ್ಶನ ಪ್ರಕ್ರಿಯೆ ನಡೆಸಬೇಕು. ಸಂದರ್ಶನದಲ್ಲಿ ಆಯ್ಕೆಯಾಗುವವರಿಗೆ ನಿವೃತ್ತಿ ಹೊಂದುವ ನಿರ್ದೇಶಕರು ಅಧಿಕಾರ ವಹಿಸಿಕೊಡಬೇಕು. ಆದರೆ, ಈ ಸಲ ಸಂದರ್ಶನ ಪ್ರಕ್ರಿಯೆಯೇ ನಡೆದಿಲ್ಲ. ನೂತನ ಕಿಮ್ಸ್ ನಿರ್ದೇಶಕರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಸಾಧ್ಯವಿಲ್ಲ. ಸರ್ಕಾರ ಸಂದರ್ಶನ ಪ್ರಕ್ರಿಯೆ ಕೈಗೊಳ್ಳದೇ ಕೈ ಕಟ್ಟಿ ಕುಳಿತಿದ್ದೇಕೆ ಎನ್ನುವ ಪ್ರಶ್ನೆ ಎದುರಾಗಿದೆ.
ಶ್ರೀಶೈಲ ಮಠದ