ಅಮೆರಿಕಕ್ಕೆ ಟ್ವೀಟ್ ಟು ರಿಮೆಂಬರ್
ಭಾರತದಲ್ಲಿ ಬಳಸಲಾದ 'ಟ್ವೀಟ್ ಟು ರಿಮೆಂಬರ್' ಅನ್ನು ಅಮೆರಿಕದಲ್ಲೂ ಬಳಸಲು ಟ್ವಿಟರ್ ಯೋಜಿಸುತ್ತಿದೆ. ಟ್ವೀಟ್ ಮೂಲಕ ಮೊಬೈಲ್ ಕ್ಯಾಲೆಂಡರ್‌ನಲ್ಲಿ ಮತದಾನದ ದಿನವನ್ನು ಸೇರಿಸುವ ಹಾಗೂ ನೆನಪಿಸುವ ತಂತ್ರವಿದು. 'ಟ್ವಿಟರ್ ರಾಜಕೀಯ'ವು ಮೊದಲು ಶುರುವಾಗಿದ್ದೇ ಅಮೆರಿಕದಲ್ಲಿ. 2012ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹೆಚ್ಚಿನವರು ಟ್ವಿಟರ್‌ನ ಪ್ರಭಾವವನ್ನು ಅರಿತರು. ನಂತರ ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯದಲ್ಲೂ ಇದರ ಪ್ರಭಾವ ಕಾಣಿಸಿಕೊಂಡಿತು.
ಮೋದಿಗೆ ಟ್ವಿಟರ್ ಗೆಲವು
ಭಾರತದ ಚುನಾವಣೆ ವೇಳೆ ಟೆಕ್ ಸ್ಯಾವಿ ಮೋದಿ ಅವರು ನಿರಂತರವಾಗಿ ಟ್ವಿಟರ್ ವೇದಿಕೆಯನ್ನು ಬಳಸಿಕೊಂಡರು. ತನ್ನ ತಾಯಿಯೊಂದಿಗೆ ಸೆಲ್ಫಿಗಳನ್ನು ತೆಗೆದು, ಫೋಟೋಗಳನ್ನು ಅಪ್‌ಲೋಡ್ ಮಾಡಿದರು. ಮೇ 16ರಂದು ತಮ್ಮ ವಿಜಯವನ್ನು ಸಾರುವ ಟ್ವೀಟ್ ಮಾಡಿ ಟ್ವಿಟರ್ ದಾಖಲೆ ಸೃಷ್ಟಿಸಿದರು. ಆದರೆ, ಅವರ ಪ್ರತಿಸ್ಪರ್ಧಿಗಳು ಈ ವಿಚಾರದಲ್ಲಿ ತುಂಬಾ ಹಿಂದೆ ಬಿದ್ದಿದ್ದರು ಎನ್ನುತ್ತಾರೆ ಟ್ವಿಟರ್‌ನ ಭಾರತದ ಮಾರುಕಟ್ಟೆ ನಿರ್ದೇಶಕ ರಿಷಿ ಜೇಟ್ಲಿ. ಟ್ವಿಟರ್‌ಗೆ ಎಂಟ್ರಿಯಾದ ಭಾರತದ ಮೊದಲ ರಾಜಕಾರಣಿಯೆಂದರೆ ಶಶಿ ತರೂರ್. ಈ ಹಿಂದೆಯೇ, ಟ್ವಿಟರ್ ಖಾತೆ ತೆರೆಯುವಂತೆ ತರೂರ್ ಅವರು ರಾಹುಲ್‌ಗೆ ಸಲಹೆ ನೀಡಿದ್ದರು. ಆದರೆ ರಾಹುಲ್ ಅದಕ್ಕೆ ಒಪ್ಪಿರಲಿಲ್ಲ.
ಸಿದ್ಧತೆ ಶುರು
ಕಳೆದ ವಾರ ಟ್ವಿಟರ್‌ನ ಪ್ರಮುಖ ರಾಜಕೀಯ ಕಾರ್ಯತಂತ್ರಜ್ಞರು ಬ್ರೆಜಿಲ್‌ಗೆ ತೆರಳಿ, ಅಲ್ಲಿನ ಸೆನೇಟರ್‌ಗಳಿಗೆ ಸಾಮಾಜಿಕ ತಾಣಗಳ ಸಾಮರ್ಥ್ಯದ ಬಗ್ಗೆ ವಿವರಿಸಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ರಾಜಕಾರಣಿಗಳಂತೆ ಅಲ್ಲಿನವರೂ ಟ್ವಿಟರ್‌ನ ಆರು ಸೆಕೆಂಡುಗಳ ವಿಡಿಯೋ ಆ್ಯಪ್ 'ವೈನ್' ಅನ್ನು ಪ್ರಚಾರಕ್ಕಾಗಿ ಬಳಸುವ ಇಂಗಿತ ವ್ಯಕ್ತಪಡಿಸಿದ್ದಾರೆ.