ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮನಸ್ಸು ಮಾಡಿದ್ರೆ ಪಿಎಂ ಆಗ್ತಿದ್ರಂತೆ!

ನಾ ಮನಸ್ಸು ಮಾಡಿದ್ರೆ ಸಂಸದ, ಮುಖ್ಯಮಂತ್ರಿ ಏನು, ಪ್ರಧಾನಿಯೇ...

Mainashree
Updated On : 24 May 2014, 11:04 am

ನವದೆಹಲಿ: ನಾ ಮನಸ್ಸು ಮಾಡಿದ್ರೆ ಸಂಸದ, ಮುಖ್ಯಮಂತ್ರಿ ಏನು, ಪ್ರಧಾನಿಯೇ ಆಗಬಹುದಿತ್ತು. ಆದರೆ ಬೇಡ ಎಂದು ಬಿಟ್ಟೆ...
ಇದು ಯೋಗಗುರು ಬಾಬಾ ರಾಮ್‌ದೇವ್ ಅವರ 'ವೀರೋಚಿತ' ಹೇಳಿಕೆ.
ಆಂಗ್ಲ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು ತಾವು ಮೋದಿ ಸರ್ಕಾರದಲ್ಲಿ ಸಚಿವಾಕಾಂಕ್ಷಿಯಲ್ಲ ಎಂದು ಹೇಳಲು ಹೋಗಿ ಈ ರೀತಿಯೆಲ್ಲಾ ಮಾತನಾಡಿದ್ದಾರೆ!
ಇತ್ತೀಚೆಗಷ್ಟೇ ರಾಮ್‌ದೇವ್ ಮೋದಿ ಸಂಪುಟ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತಂತೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಮ್‌ದೇವ್, 'ನಾನೇನಾದರೂ ಸಚಿವನಾಗಬೇಕು ಅಂತ ಮನಸ್ಸು ಮಾಡಿದ್ದರೆ, ಒಂದಲ್ಲ, ಹತ್ತುಹಲವು ಖಾತೆಗಳಿಗೆ ಏಕೈಕ ಸಚಿವನಾಗಿಬಿಡಬಲ್ಲೆ. ಆದರೆ, ನಾನು ಅಂಥ ಆಸೆಬುರುಕನಲ್ಲ' ಎಂದಿರುವ ಅವರು, 'ಬಿಜೆಪಿಗೆ ಪ್ರಚಂಡ ಬಹುಮತ ಸಿಕ್ಕಕೂಡಲೇ ನಾನು ಹರಿದ್ವಾರಕ್ಕೆ ವಾಪಸ್ ಬಂದೆ. ನನಗೇನಾದರೂ, ಸಚಿವನಾಗುವ ಆಸೆಯಿದ್ದಿದ್ದರೆ, ಚುನಾವಣೆ ಫಲಿತಾಂಶ ಬಂದ ದಿನ ದೆಹಲಿಯಲ್ಲಿ ಬಿಡಾರ ಹೂಡಿ, ಮೋದಿ ಅವರಲ್ಲಿ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಡುತ್ತಿದ್ದೆ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement