ಮೋದಿ ಪ್ರಮಾಣ ವಚನ ಸಮಾರಂಭ
ಈ ಹಿಂದಿನ ಪ್ರಧಾನಿಗಳ ಪ್ರಮಾಣ ವಚನ ಸಮಾರಂಭಕ್ಕಿಂತ ಮೂರು ಪಟ್ಟು ದೊಡ್ಡಮಟ್ಟದಲ್ಲಿ ಮೋದಿಯವರ ಪ್ರಮಾಣ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ನೆರೆದೇಶಗಳ ವಿವಿಧ ನಾಯಕರಲ್ಲದೇ, ದೇಶದ ಹಿರಿಯ ರಾಜಕಾರಣಿಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಸಿನಿಮಾ ಹಾಗೂ ಕ್ರೀಡಾಲೋಕದ ತಾರೆಯರು ಆಗಮಿಸಿ ಮೋದಿಯವರಿಗೆ ಶುಭ ಕೋರಲಿದ್ದಾರೆ.
ದಿನಾಂಕ
ಮೇ 26,
ಸೋಮವಾರ
ಸ್ಥಳ
ರಾಷ್ಟ್ರಪತಿ ಭವನದ ಮುಂಭಾಗ
ಸಮಯ
ಸಂಜೆ 6 ಗಂಟೆಗೆ
ವಾಜಪೇಯಿ (1998-2004), ಚಂದ್ರಶೇಖರ್ (1990-91) ನಂತರ, ಪ್ರಧಾನಿಯಾಗಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೂರನೇ ವ್ಯಕ್ತಿ ಮೋದಿ. ಸಾಮಾನ್ಯವಾಗಿ, ಪ್ರಧಾನಿ ಪ್ರಮಾಣ ವಚನ ದರ್ಬಾರ್ ಹಾಲ್ನಲ್ಲಿ ನಡೆಯುತ್ತಿತ್ತು. ಅಲ್ಲಿ, ಸುಮಾರು 450-500 ಜನರಿಗೆ ಆಸನ ವ್ಯವಸ್ಥೆ ಮಾಡಬಹುದು. ಈ ಬಾರಿ, ಮೋದಿಯವರ ಆಯ್ಕೆಯಂತೆ ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಇಲ್ಲಿ ಸುಮಾರು 5000 ಜನರ ಆಸನ ವ್ಯವಸ್ಥೆಗೆ ಅವಕಾಶವಿದೆ.