ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾರ್ಕ್ ಮುಖಂಡರಿಗೆ ರಾಷ್ಟ್ರಪತಿ ಔತಣ

Mainashree
Updated On : 26 May 2014, 12:10 pm

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಲಿರುವ ಸಾರ್ಕ್ ರಾಷ್ಟ್ರಗಳ ನಾಯಕರು ಹಾಗೂ ಪ್ರತಿನಿಧಿಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 'ಖಾಸಗಿ ಔತಣಕೂಟ' ಏರ್ಪಡಿಸಿದ್ದಾರೆ.  ರಾಷ್ಟ್ರಪತಿ ಭವನದ 'ಗ್ರೇ ಡ್ರಾಯಿಂಗ್ ರೂಂ'ನಲ್ಲಿ ಈ ಔತಣಕೂಟ ನಡೆಯಲಿದ್ದು, ಇದರಲ್ಲಿ ನೂತನ ಪ್ರಧಾನಿ ಹಾಗೂ ಸಚಿವರೂ ಪಾಲ್ಗೊಳ್ಳಲಿದ್ದಾರೆ. ಗುಜರಾತ್‌ನ 'ಕೇಲಾ ಮೇಥಿ ನು ಶಾಕ್‌', 'ಢೋಕ್ಲಾ', ತಮಿಳುನಾಡಿನ 'ಚಿಕನ್ ಚೆಟ್ಟಿನಾಡ್‌', ಪಂಜಾಬ್‌ನ 'ದಾಲ್ ಮಖಾನಿ' ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಸಿದ್ಧ ಖಾದ್ಯಗಳನ್ನು ಔತಣಕೂಟದಲ್ಲಿ ಸವಿಯುವ ಅವಕಾಶವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement