ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸ್ತ್ರೀ ಶಕ್ತಿ ಸಂಘಗಳ ಸುತ್ತು ನಿಧಿ ಏರಿಕೆ

ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗುತ್ತಿರುವ ಸುತ್ತು ನಿಧಿಯನ್ನು ರು...

Mainashree
Updated On : 26 May 2014, 10:23 am

25 ಸಾವಿರಕ್ಕೆ ಹೆಚ್ಚಳ  ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರುವುದಾಗಿ ಘೋಷಿಸಿದ ಸಿದ್ದರಾಮಯ್ಯ    ಸಂಘಟನೆಗಳಿಗೆ ಪ್ರತಿ ವರ್ಷ ರು. 5 ಸಾವಿರದಂತೆ ಐದು ವರ್ಷ ಅನುದಾನ  ಮಹಿಳಾ ದಿನಾಚರಣೆ, ಕಿತ್ತೂರು ರಾಣಿ ಚೆನ್ನಮ್ಮ, ಇತರ ಪ್ರಶಸ್ತಿಗಳ ಪ್ರದಾನ

ಕ.ಪ್ರ.ವಾರ್ತೆ|ಬೆಂಗಳೂರು|ಮೇ 26

ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗುತ್ತಿರುವ ಸುತ್ತು ನಿಧಿಯನ್ನು ರು. 5000ದಿಂದ ರು. 25 ಸಾವಿರಕ್ಕೆ ಹೆಚ್ಚಿಸಿದ್ದು, ಅದನ್ನು ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಯಯ್ಯ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇತರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.  ಸಂಘಟನೆಗಳಿಗೆ ಪ್ರತಿ ವರ್ಷ ರು. 5 ಸಾವಿರದಂತೆ ಐದು ವರ್ಷಗಳ ಕಾಲ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಶೇ.20 ಮೀಸಲು: ರಾಜ್ಯದಲ್ಲಿ 8,500 ಪೊಲೀಸ್ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಿದ್ದು, ಮಹಿಳೆಯರಿಗೆ ಶೇ.20 ಮೀಸಲು ನೀಡಲಾಗುವುದು. ಮಹಿಳೆಯರಿಗೆ ಶೇ.6 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ 'ಅಂತರಾಳ' ಹಾಗೂ ' ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆ' ಕೈಪಿಡಿ ಬಿಡುಗಡೆ ಮಾಡಲಾಯಿತು.
ಮಹಿಳಾ ಅಭಿವೃದ್ಧಿ ಕ್ಷೇತ್ರ-ಸಂಸ್ಥೆ ವಿಭಾಗದಲ್ಲಿ ಬೆಂಗಳೂರಿನ ರಾಜಾಜಿನಗರದ ಅವೇಕ್-ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ, ಕೋಲಾರದ ಶುಭೋಧಯ ಮಹಿಳಾ ಮಂಡಲಿ, ದಾವಣಗೆರೆಯ ಸ್ಪೂರ್ತಿ, ಹಾಸನದ ಸಾಯಿರಾಂ ಮಹಿಳಾ ಸಮಾಜ, ಬಳ್ಳಾರಿಯ ಪ್ರತಿಭಾ ಮಹಿಳಾ ಮಂಡಳಿ, ರಾಯಚೂರಿನ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಘ, ವ್ಯಕ್ತಿಗಳ ವಿಭಾಗದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆಯ ರಹೀನಾ ಬೇಗಂ, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವಿ.ಯೋಗೇಶ್ವರಿ ವಿಜಯ್, ಮೈಸೂರಿನ ಇಟ್ಟಿಗೆಗೂಡಿನ ಭವನೇಶ್ವರಿ.ವಿ, ಹಾಸನ ಜಿಲ್ಲೆ, ಚೆನ್ನರಾಯಪಟ್ಟಣದ ನೇರಲೆಕೆರೆಯ ರಶ್ಮಿ, ಉಡುಪಿ ಜಿಲ್ಲೆಯ ಕೆಮ್ಮಣ್ಣು ಗ್ರಾಮದ ಸರಳಾ ಬಿ.ಕಾಂಚನ್, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿ ನಅನಿತಾ ಡಿಸೋಜಾ, ಗಂಗಾವತಿಯ ಜಯನಗರದ ಪದ್ಮಾವತಿ ಆಂಜನೇಯ, ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಯಲಹಂಕ ಉಪನಗರದ ಎಸ್.ಬಬಿತಾ ಪೈ, ಲಕ್ಕಸಂದ್ರದ ಸುಕನ್ಯಾ ವಿಜಯ್‌ಕುಮಾರ್, ಮೈಸೂರಿನ ಕಾಶೀಪತಿ ಅಗ್ರಹಾರದ ಸುಮಾ ರಾಜ್‌ಕುಮಾರ್, ಬಿಜಾಪುರ ಜಿಲ್ಲೆ ಬಸವನಬಾಗೇವಾಡಿಯ ಮಾತಂಗೆವ್ವ ಯ.ಮಾದರ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಪ್ರೇಮಾ ಬಸವರಾಜ ಪಾಟೀಲ ಗುಳೇದ ಗುಡ್ಡ, ಶಿಕ್ಷಣ ಕ್ಷೇತ್ರದಲ್ಲಿ ತುಮಕೂರಿನ ಎಸ್‌ಐಟಿ ಬಡಾವಣೆಯ ಗೀತಾ, ಸಾಹಿತ್ಯ ವಿಭಾಗದಲ್ಲಿ ಬೆಂಗಳೂರಿನ ನಾಗರಬಾವಿ ಮುಖ್ಯರಸ್ತೆಯ ವಿದ್ಯಾ ವಿ.ಹಾಲಬಾವಿ, ಉಡುಪಿ ಜಿಲ್ಲೆಯ ಬ್ರಹ್ಮಾವರ ಜಾನಕಿ ಬ್ರಹ್ಮಾವರ್, ಮೈಸೂರಿನ ಕುವೆಂಪುನಗರದ ಶ್ಯಾಮಲ ಮೂರ್ತಿ, ಕ್ರೀಡಾ ವಿಭಾಗದಲ್ಲಿ ಜಯನಗರ 2ನೇ ಬ್ಲಾಕ್‌ನ ಬಂಗಾರಮ್ಮ, ಧಾರವಾಡದ ಬೇನಝೀರ ಮಹಬೂಬ ಅಲಿ ಬುಡನ್ ಖಾನ, ವೀರಮಹಿಳೆ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ದಂಡುಪಾಳ್ಯದ ಮಮತ ಅವರಿಗೆ ರಾಜ್ಯ ಮಟಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ರಾಜೇನಹಳ್ಳಿಯ ಮಹೇಶ್ವರಿ ಸ್ತ್ರೀಶಕ್ತಿ ಸಂಘ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗಂಗಾಂಬಿಕ ಸ್ತ್ರೀಶಕ್ತಿ ಸ್ವಸಹಾಯ ಸಂಘ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಶ್ರೀನಿಧಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳಿಗೆ ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪುಗಳು ಪ್ರಶಸ್ತಿ ನೀಡಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕಸವನಹಳ್ಳಿಯ ಕೀರ್ತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗುಹ್ಯಾ ಗ್ರಾಮದ ರಶ್ಮೀ ಸ್ತ್ರೀಶಕ್ತಿ ಗುಂಪು, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ವೈಷ್ಣವಿದೇವಿ ಸ್ತ್ರೀಶಕ್ತಿ ಸಂಘ, ಬಳ್ಳಾರಿ ಜಿಲ್ಲೆಯ ಎಮ್ಮಿಗನೂರಿ ರಜಿಯಾ ಸ್ತ್ರೀಶಕ್ತಿ ಗುಂಪುಗಳಿಗೆ 'ಶ್ರೀಮತಿ ಯಶೋಧರಮ್ಮ ದಾಸಪ್ಪ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಅಲ್ಲದೆ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಗದಗ ಶಿರಹಟ್ಟಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟಕ್ಕೆ 'ಅತ್ಯುತ್ತಮ ತಾಲೂಕು ಸ್ತ್ರೀಶಕ್ತಿ ಒಕ್ಕೂಟ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಆಂಜನೇಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಉಪಸ್ಥಿತರಿದ್ದರು.

ಅಧ್ಯಕ್ಷರ ನೇಮಕ ಕೋರಿ ಪ್ರತಿಭಟನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಪ್ರಾಸ್ತಾವಿಕ ನುಡಿಗಳನ್ನಾಡುತ್ತಿದ್ದಂತೆ, ಕೆಲ ಮಾನವ ಹಕ್ಕು ಹೋರಾಟಗಾರರು, ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನ ತೆರವಾಗಿ 1 ವರ್ಷ 4 ತಿಂಗಳು ಕಳೆದಿದ್ದರೂ, ನೂತನ ಆಯೋಗ ರಚಿಸಿಲ್ಲವೇಕೆ ಎಂದು ಪ್ರತಿಭಟನೆ ನಡೆಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ ಅಧ್ಯಕ್ಷರ ಸ್ಥಾನಕ್ಕೆ ಪ್ರಸ್ತಾವ ಬಂದಿದ್ದು, ಒಂದು ತಿಂಗಳಲ್ಲಿ ಅದನ್ನು ಅಂತಿಮಗೊಳಿಸಿ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದರು. ಮುಖ್ಯಮಂತ್ರಿಗಳು ಸಹ ಭಾಷಣದಲ್ಲಿ ಈ ಭರವಸೆಯನ್ನು ಪುನರುಚ್ಚರಿಸಿದರು. ನಂತರ, ಮುಖ್ಯಮಂತ್ರಿಗಳ ಭಾಷಣ ಕೊನೆಗೊಳ್ಳುತ್ತಿದ್ದಂತೆಯೇ, ತಮ್ಮ ವೇತನ ಹಾಗೂ ಸೌಕರ್ಯಗಳ ಹೆಚ್ಚಳ ಕೋರಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಸಚಿವೆ ಉಮಾಶ್ರೀ, ತಮ್ಮ ಸರ್ಕಾರ ಎರಡು ಬಾರಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ದೊರೆಯಬೇಕು ಎಂಬ ಬೇಡಿಕೆಯನ್ನು ಕೂಡ ಪರಿಗಣಿಸಲಾಗಿದೆ. ಇನ್ನುಳಿದ ಬೇಡಿಕೆಗಳನ್ನು ಕೂಡ ಪರಿಗಣಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement