25 ಮೋದಿ ಪ್ರಮಾಣದ ಕೌತುಕಗಳು
ಸ್ಮೃತಿ ಇರಾನಿ ಮೊದಲ ಬಾರಿಗೆ ಕಪಿಲ್ ಸಿಬಲ್ ವಿರುದ್ಧ ಕಣಕ್ಕಿಳಿದು...
- ಸ್ಮೃತಿ ಇರಾನಿ ಮೊದಲ ಬಾರಿಗೆ ಕಪಿಲ್ ಸಿಬಲ್ ವಿರುದ್ಧ ಕಣಕ್ಕಿಳಿದು(2004) ಸೋತಿದ್ದರು. 10 ವರ್ಷಗಳ ಬಳಿಕ ಈಗ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್ಆರ್ಡಿ) ಸಚಿವರಾಗಿದ್ದಾರೆ.
- ಜೆಎನ್ ಯುನಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಶಹಜಾದ್ ಇಬ್ರಾಹಿಂ ಈಗ ವಿವಿ ಆವರಣದಲ್ಲೇ ಚಹಾ ಮಾರುತ್ತಾರೆ. ಸಮಾರಂಭಕ್ಕೆ ಈ ಚಾಯ್ವಾಲಾಗೂ ಆಹ್ವಾನ ಬಂದಿತ್ತು. ಇಬ್ರಾಹಿಂಗೆ ಖುಷಿಯೋ ಖುಷಿ.
- ಟಿಡಿಪಿ ನಾಯಕ ಅಶೋಕ್ ಗಜಪತಿ ರಾಜು ಸಚಿವರಾಗಿ ಪ್ರಮಾಣ ಸ್ವೀಕರಿಸುವಾಗ ತಮ್ಮ ಹೆಸರನ್ನೇ ಮರೆತುಬಿಟ್ಟಿದ್ದರು. ಆಗ ರಾಷ್ಟ್ರಪತಿ ಅವರೇ 'ನಿಮ್ಮ ಹೆಸರು ಹೇಳಿ' ಎಂದರು. 'ಹೆಸರಲ್ಲೇನಿದೆ' ಎನ್ನುವಂತಿಲ್ಲ.
- ಸಾರ್ವಜನಿಕ ಸಮಾರಂಭದಲ್ಲಿ ಎಲ್ಲ ಅಸಮಾಧಾನ, ಜಗಳ ಮರೆಯಲೇಬೇಕು. ಬಿಜೆಪಿಯ ಬಹುತೇಕ ನಾಯಕರು ಆಡ್ವಾಣಿ ಕಾಲು ಮುಟ್ಟಿ ನಮಸ್ಕರಿಸಿದರು.
- ಐಶ್ ಬೇಬಿ ವಿಚಾರದಲ್ಲಿ ಹಿಂದೊಮ್ಮೆ ಕಾದಾಡಿಕೊಂಡು ಪರಸ್ಪರ ಕಣ್ಣೆತ್ತಿ ಕೂಡ ನೋಡದ ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಬ್ಬರೂ ಪಾಲ್ಗೊಂಡಿದ್ದರು. ಆಹಾ ಏನು ಮೋಡಿ ನೋಡಿ, 'ಐಶ್ವರ್ಯಾಳಿಂದ ದೂರವಾಗಿ, ಮೋದಿಯಿಂದ ಒಂದಾದರು'.
- ಎಲ್ಲ ಸಚಿವರೂ ದೇವರ ಹೆಸರಲ್ಲೇ ಪ್ರಮಾಣ ಸ್ವೀಕರಿಸಿದರು. ಹಾಗಾಗಿ ಸಚಿವ ಸಂಪುಟದಲ್ಲಿ ನಾಸ್ತಿಕರಾರೂ ಇಲ್ಲ.
- ಎಲ್ಲರಿಗೂ ದಾಹವಿತ್ತು, ಆದರೆ ಎಲ್ಲೂ ನೀರಿರಲಿಲ್ಲ. ಬಿಸಿಲು ಹೇಗಿತ್ತೆಂದರೆ ಜೇಟ್ಲಿ ಪುತ್ರ ರೋಹನ್ ಪ್ರಜ್ಞೆ ತಪ್ಪಿಬಿಟ್ಟರು.
- ಅಮೃತಸರದಲ್ಲಿ ಸೋಲುಂಡ ಅರುಣ್ ಜೇಟ್ಲಿ ತಮ್ಮ ಕ್ಷೇತ್ರವನ್ನು ಕ್ಷಮಿಸುತ್ತಾರಾ? ತಾವು ಚುನಾವಣೆ ವೇಳೆ ನೀಡಿದ ಆಶ್ವಾಸನೆಈಡೇರಿಸುತ್ತಾರಾ ಎಂದು ಕಾಯುತ್ತಿದ್ದಾರಂತೆ.
- ಬಿಜೆಪಿಯನ್ನು ಕಂಡರಾಗದ ಮುಲಾಯಂ ಸಮಾರಂಭಕ್ಕೆ ಬಂದಿದ್ದೇಕೆ ಗೊತ್ತಾ? ಮಗನಿಗಾಗಿ. ತಾನು ಬರದಿದ್ದರೆ ಎಲ್ಲಿ ಮೋದಿ ಉತ್ತರಪ್ರದೇಶಕ್ಕೆ ನೀಡುವ ಅನುದಾನ ಕಡಿತಗೊಳಿಸುತ್ತಾರೋ ಎಂಬ ಭಯ ಅವರಲ್ಲಿತ್ತಂತೆ.
- ಗೆದ್ದ ಮೋದಿ ಅವರು ಠಾಕುಠೀಕಾದ ವಸ್ತ್ರ ಧರಿಸಿ ಸ್ಟೈಲಾಗಿ ಬಂದರೆ, ಸೋತ ಬಪ್ಪಿ ಲಹಿರಿ ಕೂಡ ಭಾರಿ ಆಭರಣಗಳನ್ನು ತೊಟ್ಟು ತಾನೇನೂ ಕಡಿಮೆಯಿಲ್ಲ ಎಂಬಂತೆ ಕೆಂಪುಹಾಸಿನಲ್ಲಿ ನಡೆದಾಡಿದರು.
- ವೆಂಕಯ್ಯ ನಾಯ್ಡು ವೇದಿಕೆ ಹತ್ತುವವರೆಗೆ ಎಲ್ಲರೂ ಹಿಂದಿಯಲ್ಲೇ ಪ್ರಮಾಣ ಸ್ವೀಕರಿಸಿದರು. ನಂತರ ಬಂದ ಹೆಚ್ಚಿನವರು ಇಂಗ್ಲಿಷ್ ಬಳಸಿದರು.
- ಬಿಸಿಲ ಬೇಗೆಗೆ ಎಲ್ಲರ ತಲೆಯೂ ಕಾದ ಬಾಣಲೆಯಂತಾಗಿತ್ತು. ಒಮ್ಮೆ ಮುಗಿದರೆ ಸಾಕಿತ್ತು. ಅಧಿಕೃತ ದಾಖಲೆಗೆ ಸ್ಮೃತಿ ಸಹಿ ಹಾಕುತ್ತಿದ್ದರೆ, ಮುಂದಿನ ಹೆಸರು ಘೋಷಣೆ ಮಾಡಿ, ಬೇಗ ಬೇಗ ಮುಗಿಸಿ ಎಂದು ರಾಷ್ಟ್ರಪತಿ ತನ್ನ ಕಾರ್ಯದರ್ಶಿಗೆ ಸೂಚಿಸಿದರು.
- ಅದೃಷ್ಟದ ಗಾಲಿ ಹೇಗೆ ತಿರುಗುತ್ತದೆ ನೋಡಿ. ಕಳೆದ ಎನ್ಡಿಎ ಸಂಪುಟದಲ್ಲಿ ಸಚಿವ ಎಂ.ಎಂ. ಜೋಶಿ ಕೈಕೆಳಗೆ ಕೆಲಸ ಮಾಡಿ ರೋಸಿಹೋಗಿದ್ದರು ಉಮಾಭಾರತಿ. ಈ ಬಾರಿ ಸಂಪುಟ ಸೇರಿದ ಉಮಾ ಮುಖದಲ್ಲಿ ನಗು, ಜೋಶಿ ಮುಖ ಬಾಡಿತ್ತು.
- ಚಿತ್ರೋದ್ಯಮದ ಅನೇಕರು ಪಾಲ್ಗೊಂಡಿದ್ದರು. ಜಾವೇದ್ ಅಖ್ತರ್, ಸಲ್ಮಾನ್, ಅನುಪಮ್ಖೇರ್, ಹೇಮಾಮಾಲಿನಿ, ಧರ್ಮೇಂದ್ರ, ವಿನೋದ್ ಖನ್ನಾ ಉಪಸ್ಥಿತರಿದ್ದರು. ಅಮಿತಾಭ್, ಜಯಾ ಅನುಪಸ್ಥಿತಿ ಕಾಣುತ್ತಿತ್ತು.
- ಅಂಬಾನಿ ಸಹೋದರರು ತಮ್ಮ ಖಾಂದಾನ್ ಜತೆಗೇ ಬಂದಿದ್ದರು. ಮುಕೇಶ್ ಮತ್ತು ಅಂಬಾನಿ ಕುಟುಂಬ ದೂರ ದೂರ ಕುಳಿತಿತ್ತು. ಗೌತಮ್ ಅದನಿ ಮುಂಭಾಗದಲ್ಲೇ ಸ್ಥಾನ ಪಡೆದಿದ್ದರು.
- ಮೋದಿ ಬೆಂಬಲಿಗರು ಗಂಗಾ ತೀರದಲ್ಲಿ ಸಂಸತ್ನ ಮರಳುಶಿಲ್ಪ ರಚಿಸಿ ಖುಷಿ ಪಟ್ಟರು. ಸಿಹಿ ಹಂಚಿ ಸಂಭ್ರಮಿಸಿದರು.
- ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ ಅವರೇ ಮುಂದಿನ ಅಧ್ಯಕ್ಷ ಎಂಬ ಗುಸುಗುಸು ಕೇಳಿಬರುತ್ತಿತ್ತು. ನಡ್ಡಾ ಆಗಮಿಸುತ್ತಿದ್ದಂತೆ ಎಲ್ಲರೂ ಅವರಿಗೆ ಅಭಿನಂದಿಸಿದರು. ಅವರು ಮಾತ್ರ ಅದನ್ನು ಅಲ್ಲಗಳೆದರು.
- ವಕ್ತಾರರಾಗಿ ಕಾರ್ಯನಿರ್ವಹಿಸಿದ ರವಿಶಂಕರ್ ಪ್ರಸಾದ್, ನಿರ್ಮಲಾ, ಜಾವ್ಡೇಕರ್, ಇರಾನಿ ಎಲ್ಲರಿಗೂ ಸಚಿವ ಸ್ಥಾನ ನೀಡಿ ಅವರ 'ಮಾತಿಗೆ' ಬೆಲೆ ನೀಡಲಾಯಿತು.
- ಕುಮಾರಮಂಗಲಂ ಬಿರ್ಲಾ ಆಗಮಿಸಿದಾಗ ಆಸನವೇ ಇರಲಿಲ್ಲ. ತಕ್ಷಣ ಮುಕೇಶ್ ಅಂಬಾನಿಯವರು ತಮ್ಮ ಪಕ್ಕದ ಆಸನವನ್ನು ಬಿರ್ಲಾರಿಗೆ ಮೀಸಲಿರಿಸಿದರು.
- ಸೋಮವಾರ ಬೆಳ್ಳಂಬೆಳಗ್ಗೆಯೇ ಸುಷ್ಮಾ ಸ್ವರಾಜ್ ತಮ್ಮ ಟ್ವಿಟರ್ ಹ್ಯಾಂಡಲ್ ಅನ್ನು ಅಖ್ಡಝಟಛಖಢಿಛ್ಠಛಞಇಞಠ ಯಿಂದ ಅಖ್ಡಝಟಛಖಢಿಛ್ಠಛಞ. ಆಗಿ ಬದಲಿಸಿದರು. ಅವರೂ ಸಚಿವರಾಗಿ ಬದಲಾದ್ರಲ್ಲ ಅದಕ್ಕೆ.
- ರಾಜೀವ್ ಪ್ರತಾಪ್ ರೂಡಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದು ಗೊತ್ತಾದೊಡನೆ ಅನೇಕರಿಗೆ ಆಘಾತವಾಯಿತು.
- ಕಾಂಗ್ರೆಸ್ನ ಹೆಚ್ಚಿನ ನಾಯಕರೇನೂ ಕಂಡುಬರಲಿಲ್ಲ. ಸಿಂಘ್ವಿ, ಇ. ಅಹ್ಮದ್, ರೇಣುಕಾ ಚೌಧರಿ, ಜೈರಾಂ, ಪಿ.ಜೆ. ಕುರಿಯನ್, ಚಿದಂಬರಂ ಮತ್ತಿತರ ಮುಖಗಳಷ್ಟೇ.
- ಅಸ್ಸಾಂ ಕಲಾವಿದ ಗೌತಮ್ ಬರ್ಧನ್ ತಮ್ಮ ರಕ್ತದಲ್ಲೇ ಮೋದಿ ಚಿತ್ರ ಬಿಡಿಸಿದ್ದರು. 35 ಇಂಚಿನ ರೇಖಾಚಿತ್ರದಲ್ಲಿ ಪಾರಿವಾಳ, ವಿವೇಕಾನಂದರನ್ನೂ ಚಿತ್ರಿಸಲಾಗಿತ್ತು.
- ಸ್ಮೃತಿ ಇರಾನಿ ಉಟ್ಟ ಸೀರೆಯಲ್ಲೂ ಪಕ್ಷದ ಬಗೆಗಿನ ಪ್ರೀತಿ ಎದ್ದುಕಾಣುತ್ತಿತ್ತು. ಸೀರೆ ಮೇಲೆ ಕಮಲ ಇತ್ತು.
- ಅಮಿತ್ ಷಾ, ಮುಲಾಯಂ ಸಿಂಗ್ ಶುಭಾಷಯ ವಿನಿಯ ಮಾಡು ತ್ತಿರುವುದು ಟ್ವಿಟರ್ರಲ್ಲಿ ಹೆಚ್ಚು ಷೇರ್ ಆಗಿತ್ತು.