ಬೆಂಗಳೂರು: ಜೆಡಿಎಸ್‌ನ ಮಾಜಿ ಎಂಎಲ್‌ಸಿ ಅಬ್ದುಲ್ ಅಜೀಂ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಎಸ್ ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಜೆಡಿಎಸ್‌ನಲ್ಲಿ ಕಾರ್ಯನಿರ್ವಹಿಸಿದ್ದು ಕೆಲ ಭಿನ್ನಾಭಿಪ್ರಾಯದಿಂದ ಅಸಮಾಧಾನಗೊಂಡಿದ್ದು, ಪಕ್ಷದಿಂದ ಹೊರ ಬಂದಿದ್ದಾರೆ. ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾಥಾಮಿಕ ಸದಸ್ಯತ್ವಕ್ಕೆ ಅಬ್ದುಲ್ ಅಜೀಂ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಜೆಡಿಎಸ್ ವರಿಷ್ಟ ದೇವೆಗೌಡರಿಗೆ ರವಾನಿಸಿದ್ದಾರೆ.
ಕೆಲ ದಿನಗಳಿಂದ ಪಕ್ಷದಲ್ಲಿ ಏರ್ಪಟ್ಟ ರಾಜಕೀಯ ಭಿನ್ನಾಭಿಪ್ರಾಯದಿಂದ ಅಸಮಾಧಾನ ಗೊಂಡ ಅಜೀಂ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಜೆಡಿಎಸ್ ಪಕ್ಷದಿಂದ ಹೊರ ಬಂದಿರುವ ಅಬ್ದುಲ್ ಅಜೀಂ ಬಿಜೆಪಿಗೆ ಸೇರಲಿದ್ದಾರೆ. ನವೆಂಬರ್ 5 ರಂದು ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆಯಲಿದ್ದಾರೆ.