ಬೆಂಗಳೂರು: ನೀರಿನ ದರ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ, ಜನತೆಗೆ ಗಾಯದ ಮೇಲೆ ಬರೆ ಎಳೆದಿದೆ. ಜಲಮಂಡಳಿ ವಿದ್ಯುತ್ ದರ ಏರಿಕೆಯ ನಷ್ಟವನ್ನು ತುಂಬಿಸಿಕೊಳ್ಳಲು ನೀರಿನ ಬೆಲೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.
ಗೃಹಪಯೋಗಿ ನೀರಿನ ದರ ಪ್ರತಿ 1 ಸಾವಿರ ಲೀ.ಗೆ 1 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಪ್ರತಿ 1 ಸಾವಿರ ನೀರಿಗೆ ರೂ.6 ಇತ್ತು. ಹೊಸ ದರ ಪ್ರತಿ 1 ಸಾವಿರ ಲೀ. 7 ರೂ.ಗೆ ಏರಿಕೆಯಾಗಿದೆ.
ಗೃಹಯೋಗಿ ನೀರಿನ ದರ ಹೆಚ್ಚಳ ಮಾತ್ರವಲ್ಲದೆ ವಾಣಿಜ್ಯ ನೀರಿನ ದರದಲ್ಲೂ ಏರಿಕೆಯಾಗಿದೆ. ಈ ಹಿಂದೆ 1 ಸಾವಿರ ಲೀ.ಗೆ 36 ರೂಪಾಯಿ ಇದ್ದು, ಇದೀಗ ಪ್ರತಿ 1 ಸಾವಿರ ಲೀ ನೀರಿಗೆ 14 ರೂ ಹೆಚ್ಚಳ ಮಾಡಲಾಗಿದ್ದು, ಪ್ರತಿ 1 ಸಾವಿರ ಲೀ. 50 ರೂಪಾಯಿಗೆ ಏರಿಕೆ ಕಂಡಿದೆ.
ಕಾವೇರಿ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ಆದೇಶಿಸಿದ್ದು, ನೂತನ ಪರಿಷ್ಕೃತ ದರ ಇಂದಿನಿಂದ ಜಾರಿಯಾಗಲಿದೆ