ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಚಿನ್ ಹೇಳಿಕೆ ಸತ್ಯಕ್ಕೆ ದೂರವಾದುದು: ಚಾಪೆಲ್

ಸಚಿನ್ ನನ್ನ ಬಗ್ಗೆ ಹೇಳಿರುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್...

Rashmi Kasaragodu
Updated On : 4 Nov 2014, 11:31 am

ನವದೆಹಲಿ: ಸಚಿನ್ ನನ್ನ ಬಗ್ಗೆ ಹೇಳಿರುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಹೇಳಿದ್ದಾರೆ. " ಗ್ರೇಗ್ ಚಾಪೆಲ್ ಒಬ್ಬ ರಿಂಗ್ ಮಾಸ್ಟರ್‌ನಂತೆ ವರ್ತಿಸುತ್ತಿದ್ದರು. ಸರ್ವಾಧಿಕಾರಿ ಧೋರಣೆಯುಳ್ಳ ಚಾಪೆಲ್ ತಮ್ಮ ಚಿಂತನೆಗಳನ್ನು ಬಲವಂತವಾಗಿ ಇತರ ಆಟಗಾರರ ಮೇಲೆ ಹಾಕುತ್ತಿದ್ದರು. ಆಗ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್‌ಗೆ ಚಾಪೆಲ್ ಯಾವುದೇ ಗೌರವವನ್ನು ನೀಡುತ್ತಿರಲಿಲ್ಲ, ತಂಡದ ಕೋಚ್ ಆಗಿ ಗ್ರೇಗ್ ಚಾಪೆಲ್ ನಾಯಕನ ಬಗ್ಗೆ ಸ್ವಲ್ಪವೂ ಗೌರವ ತೋರದಿರುವುದು ಅಚ್ಚರಿ ಮೂಡಿಸಿತು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಆತ್ಮಚರಿತ್ರೆ ಪ್ಲೇಯಿಂಗ್ ಇಟ್ ಮೈ ವೇಯಲ್ಲಿ ಬಹಿರಂಗಪಡಿಸಿದ್ದು, ಇದಕ್ಕೆ ಗ್ರೆಗ್ ಚಾಪೆಲ್ ಪ್ರತಿಕ್ರಿಯೆ ನೀಡಿದ್ದಾರೆ.

ಡ್ರಾವಿಡ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ, ನೀನೇ ನಾಯಕನಾಗು ಎಂದು ಚಾಪೆಲ್ ಹೇಳಿದ್ದರು ಎಂದು ಸಚಿನ್ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.
2007ರ ವಿಶ್ವಕಪ್ ಆರಂಭವಾಗಲು ಒಂದೇ ತಿಂಗಳು ಬಾಕಿ ಇರುವಾಗ ಭಾರತ ತಂಡದ ನಾಯಕತ್ವವನ್ನು ರಾಹುಲ್ ದ್ರಾವಿಡ್‌ರಿಂದ ಕಸಿದುಕೊಳ್ಳಲು  ಚಾಪೆಲ್ ನಿರ್ಧರಿಸಿರುವುದಾಗಿ ಹೇಳಿದ್ದರು ಎಂದು ಸಚಿನ್,  ಚಾಪೆಲ್ ವಿರುದ್ಧ ಅಸಹನೆ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಚಾಪೆಲ್, ಸಚಿನ್ ಹೇಳಿಕೆಗಳು ಸತ್ಯಕ್ಕೆ ದೂರವಾದುದು ಎಂದಿದ್ದಾರೆ.

ಸಚಿನ್ ಅವರ ಆತ್ಮಕತೆ ನವೆಂಬರ್ 6 ರಂದು ಲೋಕಾರ್ಪಣೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement