ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಉಗ್ರರ ದಾಳಿಯ ೧೩ ವರ್ಷಗಳ ಬಳಿಕ ಮತ್ತೆ ತಲೆ ಎತ್ತಿದ ಡಬ್ಲ್ಯೂ ಟಿ ಸಿ

೧೧ ಸೆಪ್ಟಂಬರ್ ೨೦೦೧ ರಂದು ತಾಲೀಬಾನ್ ಉಗ್ರರ ದಾಳಿಗೆ ನೆಲಸಮವಾಗಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ನ ಜೋಡಿ ಕಟ್ಟಡಗಳು ೧೩ ವರ್ಷಗಳ...

Updated On : 4 Nov 2014, 7:07 am

ನ್ಯೂಯಾರ್ಕ್: ೧೧ ಸೆಪ್ಟಂಬರ್ ೨೦೦೧ ರಂದು ತಾಲೀಬಾನ್ ಉಗ್ರರ ದಾಳಿಗೆ ನೆಲಸಮವಾಗಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ನ ಜೋಡಿ ಕಟ್ಟಡಗಳು ೧೩ ವರ್ಷದ ನಂತರ ಈಗ ಮತ್ತೆ ಸೋಮವಾರ ವನ್ ವರ್ಲ್ಡ್ ಟ್ರೇಡ್ ಸೆಂಟರ್ ಹೆಸರಿನಡಿ ಹೊಸ ಕಟ್ಟಡ ಎದ್ದು ನಿಂತಿದೆ. ಮ್ಯಾಗಜೀನ್ ಒಂದರ ೧೭೫ ನೌಕರರು ಸೋಮವಾರ ಮೊದಲ ದಿನ ಕೆಲಸಕ್ಕೆ ಇಲ್ಲಿ ಹಾಜರಾದರು.

ವನ್ ವರ್ಲ್ಡ್ ಟ್ರೇಡ್ ಸೆಂಟರ್ ಹೆಸರಿನಡಿ ದೇಶದ ಅತಿ ಎತ್ತರದ ಕಟ್ಟಡವನ್ನು ಮರು ನಿರ್ಮಿಸಿದ್ದು ಈಗ ಆ ಪ್ರದೇಶ ಸ್ವಾಭಾವಿಕತೆಗೆ ಮರಳಿದೆ.

ಜೋಡಿ ಕಟ್ಟಡಗಳು ನೆಲಸಮಗೊಂಡ ಬೂದಿಯಿಂದ ಪುಟಿದೆದ್ದು ನಿಂತಿರುವ ಈ ಹೊಸ ಕಟ್ಟಡ ೧೭೭೬ ಅಡಿ (೫೪೧ ಮೀ) ಉದ್ದವಿದೆ. ಹಾಗೆಯೇ ಇದರಲ್ಲಿ ನೀರು ಚಿಮ್ಮುಗೆಗಳ ಸ್ಮಾರಕಗಳನ್ನು ಸ್ಥಾಪಿಸಲಾಗಿದ್ದು, ಇವುಗಳು ದಾಳಿಯಲ್ಲಿ ಮೃತಪಟ್ಟ ೨೭೦೦ ಜನರನ್ನು ಸ್ಮರಿಸುತ್ತವೆ.

ವೋಗ್ ಪತ್ರಿಕೆಯ ಪ್ರಕಾಶಕನ ೩೦೦೦ ಜನ ನೌಕರರು ಮುಂದಿನ ವರ್ಷದ ಪ್ರಾರಂಭದಲ್ಲಿ ಇಲ್ಲಿಗೆ ಬರಲಿದ್ದು, ೨೫ ಮಹಡಿಗಳನ್ನು ಈ ಸಂಸ್ಥೆ ತನ್ನದಾಗಿಸಿಕೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement