ತಾಲಿಬಾನ್ ಉಗ್ರರಿಂದ ಪ್ರಧಾನಿ ಮೋದಿಗೆ ಬೆದರಿಕೆ
ವಾಘಾ ಗಡಿಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹೊಣೆ ಹೊತ್ತಿರುವ ಪಾಕಿಸ್ತಾನ ತಾಲೀಬಾನ್ ಉಗ್ರ...
ನವದೆಹಲಿ: ವಾಘಾ ಗಡಿಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹೊಣೆ ಹೊತ್ತಿರುವ ಪಾಕಿಸ್ತಾನ ತಾಲೀಬಾನ್ ಉಗ್ರ ಸಂಘಟನೆಯ ಸಹ ಸಂಘಟನೆಯಾದ ತೆಹ್ರೀಕ್
ಇ ತಾಲೀಬಾನ್ ಪಾಕಿಸ್ತಾನ್ ಜಮಾತ್ ಉಲ್ ಅಹರರ್ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆಯನ್ನೊಡ್ಡಿದೆ.
ಭಾನುವಾರ ಪಾಕಿಸ್ತಾನದ ವಾಘಾ ಗಡಿಪ್ರದೇಶದಲ್ಲಿ ಆತ್ಮಾಹುತಿ ದಳ ಬಾಂಬ್ ಸ್ಫೋಟಿಸಿದುದುರ ಪರಿಣಾಮ 60 ಮಂದಿ ಸಾವನ್ನಪ್ಪಿದ್ದರು. 110 ಜನರಿಗೆ ಗಾಯಗಳಾಗಿದ್ದು, ಸ್ಫೋಟದ ಹೊಣೆಯನ್ನು ಉಗ್ರ ಸಂಘಟನೆಗಳು ಹೊತ್ತುಕೊಂಡಿದ್ದವು.
ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ವಾಘಾ ಗಡಿ ಪ್ರದೇಶದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಆಘಾತವನ್ನುಂಟು ಮಾಡಿದೆ. ಇಂಥಾ ಉಗ್ರ ಕೃತ್ಯಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಮೋದಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಜಮಾತುಲ್ ಅಹ್ರರ್ ಸಂಘಟನೆಯ ವಕ್ತಾರ ಇಹ್ಸಾನುಲ್ಲಾ ಇಶಾನ್, ನೀವು ನೂರರಷ್ಟು ಮುಸ್ಲಿಂರನ್ನು ಕೊಂದ ಕೊಲೆಗಾರ. ನಾವು ಕಾಶ್ಮೀರ ಮತ್ತು ಗುಜರಾತ್ನ ಮುಗ್ಧ ಜನರ ಮೇಲೆ ಈ ಪ್ರತಿಕಾರವನ್ನು ತೀರಿಸುತ್ತೇವೆ ಎಂದು ಬೆದರಿಕೆಯನ್ನೊಡ್ಡಿದ್ದಾರೆ.
ವಾಘಾ ಗಡಿ ಭಾಗದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ಇನ್ನಷ್ಟು ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಉಗ್ರರ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.