ಮುಲಾಯಂ ಸಿಂಗ್ ಯಾದವ್ 
ಪ್ರಧಾನ ಸುದ್ದಿ

ಲಾಲೂ ಮತ್ತು ನಿತೀಶ್‌ರಿಗೆ ಭೋಜನಕೂಟ ಏರ್ಪಡಿಸಿದ ಮುಲಾಯಂ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತಮ್ಮ ದೆಹಲಿ ನಿವಾಸದಲ್ಲಿ ವಿಪಕ್ಷ ನೇತಾರರಿಗೆ ...

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತಮ್ಮ ದೆಹಲಿ ನಿವಾಸದಲ್ಲಿ ವಿಪಕ್ಷ ನೇತಾರರಿಗೆ ಗುರುವಾರ ಭೋಜನಕೂಟ ಏರ್ಪಡಿಸಿದ್ದಾರೆ.

ಈ ಭೋಜನಕೂಟಕ್ಕೆ ರಾಷ್ಟ್ರೀಯ ಜನತಾದಳದ ನೇತಾರ ಲಾಲೂ ಪ್ರಸಾದ್ ಯಾದವ್
ಮತ್ತು ಜನತಾ ದಳ ಸಂಯುಕ್ತದ ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಆಮಂತ್ರಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ತೃತೀಯ ರಂಗವಾಗಿದ್ದ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಪಕ್ಷದ ನಾಯಕರು ಈ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಸಂಸತ್ ನ ಚಳಿಗಾಲದ ಅಧಿವೇಶನದ ಮುನ್ನ ಹೀಗೊಂದು ಭೇಟಿ ಕಾರ್ಯಕ್ರಮವನ್ನು ಮುಲಾಯಂ ಹಮ್ಮಿಕೊಂಡಿದ್ದಾರೆ.

ಜೆಡಿಯು-ಮುಖ್ಯಸ್ಥ ಶರದ್ ಯಾದವ್, ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದಾಗ್ಯೂ, ಈ ಕಾರ್ಯಕ್ರಮಕ್ಕೆ ಎಡಪಕ್ಷಗಳನ್ನು ಆಹ್ವಾನಿಸಿಲ್ಲ.

ಈ ಭೇಟಿಯಲ್ಲಿ ನವೆಂಬರ್ 25ಕ್ಕೆ ಆರಂಭವಾಗಲಿರುವ 5 ಹಂತಗಳ ಜಾರ್ಖಂಡ್ ವಿಧಾನಸಭಾ ಚುನಾವಣೆ , ಜಮ್ಮು ಕಾಶ್ಮೀರ ಮತ್ತು ದೆಹಲಿ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಯಾವ ರೀತಿ ರಾಜಕೀಯ ತಂತ್ರಗಳನ್ನು ಹೆಣೆಯಬೇಕೆಂಬುದರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)