ನವದೆಹಲಿ: ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯ ಗುಪ್ತಾಂಗಕ್ಕೆ ಕಿಚ್ಚಿಟ್ಟು ಹತ್ಯೆಗೈದ ಘಟನೆ ದೆಹಲಿಯ ಖಜೂರಿ ಖಾಸ್ ಪ್ರದೇಶದಲ್ಲಿ ನಡೆದಿದೆ.
ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು, ಇದರ ವಿವರಗಳು ತಡವಾಗಿ ಬೆಳಕಿಗೆ ಬಂದಿದೆ.
ತನ್ನ 14ರ ಹರೆಯದ ಮಗಳ ಮೇಲೆ ಅತ್ಯಾಚಾರವೆಸಗಿದ 45ರ ಹರೆಯದ ವ್ಯಕ್ತಿಯನ್ನು ಮನೆಗೆ ಊಟಕ್ಕಾಗಿ ಆಹ್ವಾನಿಸಿದ ಬಾಲಕಿಯ ಅಪ್ಪ ಅತ್ಯಾಚಾರಿಯನ್ನು ಕುರ್ಚಿಗೆ ಕಟ್ಟಿ ಹಾಕಿದ್ದಾನೆ. ಅನಂತರ ಆತನ ಜನನಾಂಗಕ್ಕೆ ಕಿಚ್ಚಿಟ್ಟು ನರಳುವಂತೆ ಮಾಡಿ ಸಾಯಿಸಿದ್ದಾನೆ.
ಅತ್ಯಾಚಾರಿಯನ್ನು ಹತ್ಯೆಗೈದ ನಂತರ ಪೊಲೀಸರಿಗೆ ಶರಣಾದ ಬಾಲಕಿಯ ಅಪ್ಪ ತಾನು ಹೇಗೆ ಆತನನ್ನು ಹತ್ಯೆಗೈದಿದ್ದೆ ಎಂದು ವಿವರಿಸಿದ್ದಾನೆ.
ಅತ್ಯಾಚಾರ ನಡೆದ ವಿಷಯವನ್ನು ಪೊಲೀಸರಿಗೆ ಹೇಳಿದರೆ ತನ್ನ ನೆರೆಹೊರೆಯವರು ಮತ್ತು ಬಂಧುಗಳು ತನ್ನ ಮಗಳನ್ನೇ ದೂಷಿಸುತ್ತಾರೆ ಎಂಬ ಹೆದರಿ ದೂರು ನೀಡಿಲ್ಲ ಎಂದು ಆತ ಹೇಳಿದ್ದಾನೆ.
ವ್ಯಕ್ತಿಯೊಬ್ಬರ ಹತ್ಯೆಯ ಆರೋಪದಲ್ಲಿ ಕೇಸು ದಾಖಲಿಸಿದ ಪೊಲೀಸರು, ಬಾಲಕಿಯ ಮನೆಗೆ ತೆರಳಿ ಅತ್ಯಾಚಾರಿಯ ಶವವನ್ನು ಪತ್ತೆ ಹಚ್ಚಿದ್ದಾರೆ