ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಪ್ ವೆಬ್‌ಸೈಟ್‌ನಲ್ಲಿ ಮೋದಿ ಫಾರ್ ಪಿಎಂ, ಅರವಿಂದ್ ಫಾರ್ ಸಿಎಂ ಸ್ಲೋಗನ್!

ಆಪ್ ವೆಬ್‌ಸೈಟ್‌
Rashmi Kasaragodu
Updated On : 7 Nov 2014, 7:13 am

ನವದೆಹಲಿ: ಆಮ್ ಆದ್ಮಿ ಪಕ್ಷ ಶುಕ್ರವಾರ ತಮ್ಮ ಪಕ್ಷದ ವೆಬ್‌ಸೈಟ್‌ನಲ್ಲಿ "ದೆಹಲಿ ಸ್ಪೀಕ್ಸ್: ಮೋದಿ ಫಾರ್ ಪಿಎಂ, ಅರವಿಂದ್ ಫಾರ್ ಸಿಎಂ' ಎಂಬ ಸ್ಲೋಗನ್ ಹಾಕುವ ಮೂಲಕ ಅಚ್ಚರಿ ಮೂಡಿಸಿದೆ.

ಸ್ವಲ್ಪ ಸಮಯದ ನಂತರ ವೆಬ್‌ಸೈಟ್‌ನ  ಹೋಮ್‌ಪೇಜ್‌ನಲ್ಲಿ ಹಾಕಿದ್ದ ಚಿತ್ರವನ್ನು ತೆಗೆಯಲಾಗಿದ್ದರೂ, ಆ ಹೊತ್ತಿಗೆ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ನೂರಕ್ಕೂ ಹೆಚ್ಚು ಸಂದೇಶಗಳು ಹರಿದಾಡಿದ್ದವು.

ಆಮ್ ಆದ್ಮಿ ಪಕ್ಷ ತನ್ನತ್ತ ಗಮನ ಸೆಳೆಯಲು ಮೋದಿಯವರ ಚಿತ್ರವನ್ನು ಬಳಸುತ್ತಿದೆ ಎಂದು ಒಬ್ಬರು ಟ್ವೀಟ್ ಮಾಡಿದರೆ, ಇನ್ನೊಬ್ಬರು ಈಗ ಮೋದಿಗೆ ಜೈ ಅಂತೀರಿ, ಸಾರ್ವತ್ರಿಕ ಚುನಾವಣೆಯ ಮುನ್ನ ಜೈಲು ಮೋದಿ ಅಂತಾ ಹೇಳುತ್ತಿದ್ದಿರಿ ಎಂದು ಟ್ವೀಟಿಸಿದ್ದಾರೆ.

ಏತನ್ಮಧ್ಯೆ, ಈ ಸ್ಲೋಗನ್ ಬಗ್ಗೆ ಕೇಳಿದರೆ ನಮ್ಮ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂದೇ ಆಪ್ ಉತ್ತರಿಸುತ್ತದೆ ಎಂಬ ಟ್ವೀಟ್  ಕೂಡಾ ಹರಿದಾಡಿದೆ.

ಆದರೆ ಟ್ವೀಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ .

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement